ತಮ್ಮನ ಜೊತೆ ಅದಕ್ಕೊಪ್ಪದ ಪತ್ನಿಗೆ ಗಂಡ ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್‌ ಸಂಗತಿ

ಆಂಧ್ರಪ್ರದೇಶ, ನವೆಂಬರ್ 1: ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಲಿವೆ. ಹಾಗೆಯೇ ಇದೀಗ ತನ್ನ ಪತ್ನಿಯನ್ನು ತಮ್ಮನ ಜೊತೆ ಅದನ್ನು ಮಾಡುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ ಘಟನೆಯೊಂದು ಬಟಾಬಯಲಾಗಿದೆ. ಹಾಗಾದ್ರೆ ಅಷ್ಟಕ್ಕೂ ನಡೆದಿದ್ದೇನು ಹಾಗೂ ಎಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಿನ ಪ್ರಪಂಚದಲ್ಲಿ ಗಂಡ-ಹೆಂಡತಿ ನಡುವೆ ಜಗಳ ಸಾಮಾನ್ಯ ಆಗಿಬಿಟ್ಟಿದೆ. ಕೆಲ ಗಲಾಟೆಗಳು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಗಳು ನಡೆದಿವೆ. ಆದರೆ ಇದೀಗ ಇದಕ್ಕೂ ಮಿಗಿಲಾಗಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳಿಗೆ ಪುಟ್ಟ ಇದ್ದರೂ, ಆಕೆಗೆ ಗಂಡ ತನ್ನ ತಮ್ಮನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದ. ಆದರೆ, ಮೈದುನನ ಜೊತೆ ಈ ಕೆಲಸ ಮಾಡಲು ಆಕೆ ಒಪ್ಪಿರಲಿಲ್ಲ.

Andhra Pradesh Woman Rescued After Being Confined by Family Over Unlawful Demands

ಆಕೆಯ ಗಂಡನ ಅಪ್ಪ-ಅಮ್ಮ ಅಂದರೆ ಮಾವ, ಅತ್ತೆ ಸಹ ಸೊಸೆ ತಮ್ಮ ಕಿರಿಯ ಮಗನ ಜೊತೆ ಅಕ್ರಮ ಸಂಬಂಧ ಹೊಂದಬೇಕು ಎಂದು ಹೇಳಿದ್ದರು. ಇದಕ್ಕೆ ಆಕೆ ಒಪ್ಪಲಿಲ್ಲ. ಆಗ ಗಂಡ ಸೇರಿ ಮನೆಯವರೆಲ್ಲಾ ಸಿಟ್ಟಿಗೆದ್ದು ಪುಟ್ಟ ಮಗುವಿನ ಜೊತೆ ಆಕೆಯನ್ನು 10 ದಿನ ರೂಂನಲ್ಲಿ ಜೈನಿನಲ್ಲಿರುವಂತೆ ಕೂಡಿಹಾಕಿದ ಅಮಾನವೀಯ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇನ್ನು ಕೂಡಿಹಾಕಿದ ರೂಂನಲ್ಲಿ ಆಕೆಗೆ ಆಹಾರ, ನೀರು, ವಿದ್ಯುತ್, ಟಾಯ್ಲೆಟ್ ಯಾವ ಸೌಲಭ್ಯವನ್ನೂ ಕೂಡ ನೀಡಿರಲಿಲ್ಲ. ಆಕೆ ಮಗುವಿಗೆ ಕೇವಲ ಎದೆಹಾಲನ್ನು ನೀಡುತ್ತಾ 10 ದಿನಗಳ ಕಾಲ ಅದೇ ಕತ್ತಲೇ ರೂಂನಲ್ಲಿ ಕಾಲ ಕಳೆದಿದಿದ್ದಾರೆ. ಆದರೆ 10 ದಿನ ಹೊಟ್ಟೆಗೆ ಆಹಾರ ಇಲ್ಲದೆ, ತನ್ನ ಪುಟ್ಟ ಮಗುವಿಗೆ ಹಾಲನ್ನೂ ನೀಡುತ್ತಿದ್ದುದರಿಂದ ಆಕೆ ಸಂಪೂರ್ಣ ಕುಗ್ಗಿ ಹೋಗಿದ್ದಳು.

ಟಾಯ್ಲೆಟ್ ವ್ಯವಸ್ಥೆಯೂ ಇಲ್ಲದ ಕಾರಣ ಆ ರೂಂನಲ್ಲೇ ಆಕೆ ಮತ್ತು ಆಕೆಯ ಮಗು ಮಲವಿಸರ್ಜನೆ ಮಾಡುವ ಅನಿವಾರ್ಯತೆ ಇತ್ತು. ಅದರಲ್ಲೇ ಅವರು ಮಲಗುವ ಪರಿಸ್ಥಿತಿಯನ್ನು ಆಕೆಯ ಗಂಡನ ಮನೆಯವರು ನಿರ್ಮಾಣ ಮಾಡಿಗ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

2 ವರ್ಷಗಳ ಹಿಂದೆ ರಂಜಿತ್ ಎಂಬಾತನನ್ನು ವಿವಾಹ ಆಗಿದ್ದ 25 ವರ್ಷದ ಮಹಿಳೆ ತನ್ನ ಅತ್ತೆ, ಮಾವ, ಅತ್ತಿಗೆಯ ಕಿರುಕುಳದಿಂದ ಬೇಸತ್ತಿದ್ದರು. ಆಕೆಗೆ ಹೆಣ್ಣು ಮಗು ಆಗಿತ್ತು. ಆದರೆ, ರಂಜಿತ್​​ನ ತಮ್ಮ ಪ್ರವೀಣ್ ಜೊತೆ ಸಂಬಂಧ ಬೆಳೆಸಿದರೆ ಆಕೆಗೆ ಗಂಡು ಮಗು ಆಗುತ್ತದೆ ಎನ್ನುವ ಕಾರಣಕ್ಕೆ ಅವರೆಲ್ಲರೂ ಆಕೆಯನ್ನು ಪ್ರವೀಣನ ಜೊತೆ ಮಲಗಲು ಒತ್ತಾಯ ಮಾಡಿದ್ದರು. ಇದಕ್ಕೆ ಆಕೆ ಒಪ್ಪಿರಲಿಲ್ಲ. ಇದರಿಂದ ಆಕೆಗೆ ಕಿರುಕುಳ ನೀಡಲಾಯಿತು ಎನ್ನುವ ಸ್ಫೋಟಕ ಸತ್ಯ ಬಟಾಬಯಲಾಗಿದೆ. ಇನ್ನೂ ಈ ಪ್ರಕರಣ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ತಲುಪಿದ ಬಳಿಕ ಇದು ದೇಶಾದ್ಯಂತ ಗಮನ ಸೆಳೆದಿದೆ. ಪೊಲೀಸರು ಆ ಮನೆಗೆ ತೆರಳಿ ಆ ಮಹಿಳೆಯನ್ನು ಕತ್ತಲೆ ಕೋಣೆಯಿಂದ ಹೊರಗಡೆ ಕರೆತಂದಿದ್ದಾರೆ. ಬಳಿಕ ಆ ಕುಟುಂಬದ ಸದಸ್ಯರೆಲ್ಲರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ನಡೆದಿರುವ ಉದಾಹರಣೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+