School-College Holiday: ಫೆ. 26 ಮತ್ತು 27ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

ಬೆಂಗಳೂರು, ಫೆಬ್ರವರಿ 20: ಹಬ್ಬದ ದಿನಗಳು ಎದುರಾದ ಹಿನ್ನೆಲೆಯಲ್ಲಿ ವಿವಿಧ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಎರಡು ದಿನ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸಮ್ಮರ್ ಹಾಲಿಡೇ ಮೊದಲೇ ಪರೀಕ್ಷೆಗಳು ಜರುಗಬೇಕು. ಆ ಪರೀಕ್ಷೆಗಳಿಗೆ ಮೊದಲೇ ಸಾಲು ಸಾರಲು ರಜೆಗಳನ್ನು ಮಕ್ಕಳು ಪಡೆಯುತ್ತಿದ್ದಾರೆ.

ಜನವರಿ ಸಂಕ್ರಾಂತಿ ಸಾಲು ಸಾಲು ರಜೆ ಬಳಿಕ, ಫೆಬ್ರವರಿಯಲ್ಲಿ ಕೆಲವು ಜಯಂತಿಯಂದು ರಜೆ ನೀಡಲಾಗಿತ್ತು. ಇದೀಗ ಫೆಬ್ರವರಿ ಅಂತ್ಯದಲ್ಲಿ ಎರಡು ದಿನ ದೇಶದ ವಿವಿಧ ಭಾಗಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಫೆಬ್ರವರಿ 26 ಮತ್ತು 27 ಶಿವರಾತ್ರಿ ಪ್ರಯುಕ್ತ ವಿವಿಧ ರಾಜ್ಯಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಯಾವೆಲ್ಲ ರಾಜ್ಯಗಳಲ್ಲಿ ಸಾರ್ವತ್ರಿಕ ರಜೆ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

Andhra Pradesh- Telangana Schools and Colleges Holiday on Feb 26 and 27 Due Mahashivratri

ದೇಶದ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ದೆಹಲಿ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ನೀಡಿವೆ. ಮಹಾ ಶಿವರಾತ್ರಿ ಹಬ್ಬದ ಕಾರಣಕ್ಕೆ ಶೈಕ್ಷಣಿಕ ಸಂಸ್ಥೆಗಳ ಕಾರ್ಯಚಟುವಟಿಕೆ ಬಂದ್ ಆಗಿರಲಿವೆ.

ತೆಲಂಗಾಣದಲ್ಲಿ ಚುನಾವಣೆ, ರಜೆ ಘೋಷಣೆ

ತೆಲಂಗಾಣದಲ್ಲಿ ಮಹಾಶಿವರಾತ್ರಿ ಹಬ್ಬದ ಆಚರಣೆ ಜೊತೆಗೆ ವಿಧಾನಪರಿಷತ್ ಚುನಾವಣೆ ಸಹ ಇದೆ. ಈ ಕಾರಣಕ್ಕೆ ಎಲ್ಲ ಶಾಲೆ-ಕಾಲೇಜುಗಳಿಗೆ ಫೆಬ್ರವರಿ 26, 27ರಂದು ರಜೆ ನೀಡಲಾಗಿದೆ. ಯಾರೆಲ್ಲ ರಜೆಗೆ ಕಾಯುತ್ತಿದ್ದರೋ ಅಂತಹ ಮಕ್ಕಳಿಗೆ ಇದೊಂದು ಖಷಿ ಸುದ್ದಿಯಾಗಿದೆ.

Andhra Pradesh- Telangana Schools and Colleges Holiday on Feb 26 and 27 Due Mahashivratri

ಆಂಧ್ರಪ್ರದೇಶದಲ್ಲೂ ರಜೆ ಘೋಷಣೆ

ಆಂಧ್ರಪ್ರದೇಶದಲ್ಲಿ ಭಾರತೀಯ ಚುನಾವಣಾ ಆಯೋಗ (ECI) ವಿಧಾನಪರಿಷತ್ ಚುನಾವಣೆ (MLC) ವೇಳಾಪಟ್ಟಿ ಬಿಡುಡೆ ಮಾಡಿದೆ. ಫೆಬ್ರವರಿ 27 ರಂದು ಮತದಾನ ನಡೆಯಲಿದೆ. ಚುನಾವಣೆ ಪಲಿತಾಂಶ ಮಾರ್ಚ್ 3 ರಂದು ಜರುಗಲಿದೆ. ಆಂಧ್ರದ ಪೂರ್ವ ಮತ್ತು ಪಶ್ಚಿಮ ಗೋದಾವರಿ, ಕೃಷ್ಣ-ಗುಂಟೂರು ಪದವೀಧರ ಕ್ಷೇತ್ರಗಳಿಗೆ ಹಾಗೂ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಶಿಕ್ಷಕರ ಕ್ಷೇತ್ರಗಳಿಗೆ ಎಂಎಲ್‌ಸಿ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಹೀಗಾಗಿ ಈ ಭಾಗದಲ್ಲಿ ಪ್ರದೇಶಗಳಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ದೆಹಲಿ ಎನ್‌ಸಿಆರ್ ಶಾಲೆಗಳಿಗೆ ಸ್ಥಗಿತ ಇದೆಯೇ?

ಕಳೆದ ವರ್ಷ ಆಗಸ್ಟ್ 2 ರಂದು ಗೌತಮ್ ಬುದ್ಧ ನಗರದ ಶಾಲೆಗಳು, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ವರ್ಮಾ ಸ್ಥಳೀಯ ರಜೆ ಘೋಷಿಸಿದರು. ಸದ್ಯ ಮುಂದಿನ ವಾರ ಇರುವ ಶಿವರಾತ್ರಿ ಪ್ರಯುಕ್ತ ಈ ಎಲ್ಲ ಶಾಲೆಗಳಿಗೆ ರಜೆ ಇರುತ್ತದೋ ಇಲ್ಲವೋ ತಿಳಿಯಬೇಕು. ಸದ್ಯಕ್ಕೆ ಶಾಲೆಗಳ ರಜೆ ಬಗ್ಗೆ ಮಾಹಿತಿ ಇಲ್ಲ. ವಿದ್ಯಾರ್ಥಿಗಳು ತಮ್ಮ ಶಾಲೆ-ಕಾಲೇಜು ಸಿಬ್ಬಂದಿ ಜೊತೆಗೆ ಸಂಪರ್ಕದಲ್ಲಿರುವಂತೆ ತಿಳಿಸಲಾಗಿದೆ.

ಮಹಾ ಶಿವರಾತ್ರಿಯಂದು ಶಿವನ ಆರಾಧನೆ ಮಾಡಲಾಗುತ್ತದೆ. ರಾತ್ರಿಯಿಡಿ ಜಾಗರಣೆ ಮಾಡಲಾಗುತ್ತದೆ. ಉಪವಾಸ ವ್ರತ ಕೈಗೊಳ್ಳಲಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಶಿವನನ್ನು ಸ್ಮರಿಸುತ್ತಲೇ ಶಿವನಾಮ ಪಠಣ ಮಾಡಲಾಗುತ್ತದೆ. ಇದು ಫಾಲ್ಗುಣ ಮಾಸದ 13ನೇ ರಾತ್ರಿ ಮತ್ತು 14ನೇ ರಾತ್ರಿಯಂದ ಆಚರಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+