ಕೇವಲ 1 ವರ್ಷದಲ್ಲಿ 13 ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡ ನಾಗೇಂದ್ರ ಸಾಯಿ ಸ್ಫೂರ್ತಿದಾಯಕ ಕಥೆ

ಯಶಸ್ಸು ಎಂಬುದು ಕೇವಲ ಅದೃಷ್ಟದಿಂದ ಬರುವುದಿಲ್ಲ, ಬದಲಿಗೆ ಕಠಿಣ ಪರಿಶ್ರಮ, ನಿರಂತರ ಪ್ರಯತ್ನದಿಂದ ಮಾತ್ರ ಬರುತ್ತದೆ ಎಂಬುದಕ್ಕೆ ಆಂಧ್ರಪ್ರದೇಶದ ಯುವಕನೊಬ್ಬನ ಸಾಧನೆಯೇ ಉದಾಹರಣೆ. ತೀವ್ರ ಪೈಪೋಟಿಯ ನಡುವೆ ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಸರ್ಕಾರಿ ಉದ್ಯೋಗ ಪಡೆಯುವುದೇ ದೊಡ್ಡ ಸಾಧನೆ.

ಅಂತಹದರಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಲೊಮಡ ನಾಗೇಂದ್ರ ಸಾಯಿ ಎಂಬ ಯುವಕ ಕೇವಲ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 13 ಕೇಂದ್ರ ಸರ್ಕಾರಿ ಉದ್ಯೋಗಗಳನ್ನ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಛಲ ಬಿಡದೆ ಹೋರಾಡಿದ ಇವರ ಈ ಯಶೋಗಾಥೆ ಇಂದಿನ ಲಕ್ಷಾಂತರ ಯುವಜನತೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ದೊಡ್ಡ ಸ್ಫೂರ್ತಿ.

Andhra Pradesh

ಐಐಟಿ ಖರಗ್‌ಪುರ ಪದವೀಧರನಿಗೆ ಸಾಫ್ಟ್‌ವೇರ್ ಬದಲು ಸರ್ಕಾರಿ ಉದ್ಯೋಗದ ಒಲವು

ಕಡಪದ ನಿವೃತ್ತ ಎಪಿಎಸ್‌ಆರ್‌ಟಿಸಿ ಉದ್ಯೋಗಿ ಅಶ್ವಿನಿ ಕುಮಾರ್ ಹಾಗೂ ಸರ್ಕಾರಿ ಶಾಲಾ ಶಿಕ್ಷಕಿ ರಾಜರಾಜೇಶ್ವರಿ ದಂಪತಿಯ ಪುತ್ರನಾದ ನಾಗೇಂದ್ರ ಸಾಯಿ, ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದರು. 10ನೇ ತರಗತಿಯಲ್ಲಿ 9.7 ಜಿಪಿಎ ಹಾಗೂ ಇಂಟರ್‌ಮಿಡಿಯೇಟ್‌ನಲ್ಲಿ 974 ಅಂಕಗಳನ್ನ ಗಳಿಸಿದ್ದ ಇವರು, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಪಡೆದು ಪ್ರತಿಷ್ಠಿತ ಐಐಟಿ ಖರಗ್‌ಪುರದಲ್ಲಿ ಬಿ.ಟೆಕ್ ಹಾಗೂ ಎಂ.ಟೆಕ್ (ಇಂಟಿಗ್ರೇಟೆಡ್ ಕೋರ್ಸ್) ಪೂರ್ಣಗೊಳಿಸಿದರು.

ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದೊಡ್ಡ ಹುದ್ದೆಗೇರುವ ಕನಸು ಕಂಡಿದ್ದ ಇವರಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ದೊಡ್ಡ ಆಘಾತ ನೀಡಿತು. ಐಟಿ ವಲಯದಲ್ಲಿ ಉದ್ಯೋಗ ಕಡಿತ ಹಾಗೂ ಅನಿಶ್ಚಿತತೆಯನ್ನ ಕಣ್ಣಾರೆ ಕಂಡ ನಾಗೇಂದ್ರ, ಖಾಸಗಿ ವಲಯದಲ್ಲಿ ಉದ್ಯೋಗ ಭದ್ರತೆ ಇಲ್ಲ ಎಂಬುದನ್ನ ಅರಿತರು. ತಮ್ಮ ತಂದೆ-ತಾಯಿಯಂತೆ ಸರ್ಕಾರಿ ವಲಯದಲ್ಲೇ ಸೇವೆ ಸಲ್ಲಿಸಬೇಕು ಎಂದು ನಿರ್ಧರಿಸಿ, ಕೇಂದ್ರ ಸರ್ಕಾರಿ ಹುದ್ದೆಗಳ ಕಡೆಗೆ ಮುಖ ಮಾಡಿದರು.

2022ರಲ್ಲಿ ಮನೆಯಲ್ಲೇ ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿದ ನಾಗೇಂದ್ರ, 2023ರಲ್ಲಿ 5 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆದರೂ ಒಂದರಲ್ಲೂ ಉತ್ತೀರ್ಣರಾಗಲಿಲ್ಲ. ಆದರೂ ಹಿಂಜರಿಯದ ಅವರು 2024ರಲ್ಲಿ ಹೈದರಾಬಾದ್‌ಗೆ ತೆರಳಿ ಆರು ತಿಂಗಳ ಕಾಲ ವಿಶೇಷ ತರಬೇತಿ ಪಡೆದರು. ಎಸ್‌ಎಸ್‌ಸಿ-ಸಿಜಿಎಲ್ (SSC CGL) ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೂ ಅದರೂ ಚೂರೇ ಚೂರು ಅಂತರದಲ್ಲಿ ಉದ್ಯೋಗ ಕೈತಪ್ಪಿತು.

ಎರಡು ವರ್ಷಗಳ ಸತತ ಸೋಲಿನಿಂದ ನಾಗೇಂದ್ರ ತಮ್ಮ ತಪ್ಪುಗಳನ್ನ ತಿದ್ದಿಕೊಂಡರು. 2025ರಲ್ಲಿ ಅಧಿಸೂಚನೆ ಹೊರಡಿಸಲಾದ ಎಲ್ಲ ಕೇಂದ್ರ ಸರ್ಕಾರಿ ಹುದ್ದೆಗಳಿಗೂ ಅರ್ಜಿ ಸಲ್ಲಿಸಿದರು. ಪ್ರತಿದಿನ 12 ರಿಂದ 14 ಗಂಟೆಗಳ ಕಾಲ ಅಧ್ಯಯನ ನಡೆಸಿದರು. ಓದಿನ ನಡುವೆ ಸ್ಪೂರ್ತಿದಾಯಕ ವಿಡಿಯೋಗಳನ್ನ ನೋಡುತ್ತಾ ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳುತ್ತಿದ್ದರು.

13 ಉದ್ಯೋಗಗಳ ಸಾಧನೆ

ನಾಗೇಂದ್ರ ಅವರ ಈ ಪರಿಶ್ರಮಕ್ಕೆ 2025ರಲ್ಲಿ ಭಾರಿ ಪ್ರತಿಫಲ ಒಲಿಯಿತು. ಅವರು ಬರೆದಿದ್ದ ಪರೀಕ್ಷೆಗಳ ಫಲಿತಾಂಶ ಒಂದರ ಹಿಂದೊಂದರಂತೆ ಪ್ರಕಟವಾದಾಗ ಎಲ್ಲರ ಕಣ್ಣುಗಳು ಅಚ್ಚರಿಯಿಂದ ಅರಳಿದವು. ಜಸ್ಟ್ ಪಾಸ್ ಅಲ್ಲ, ಬದಲಾಗಿ ಕೇವಲ ಒಂದು ವರ್ಷದ ಅವಧಿಯಲ್ಲಿ ಟೆಲಿಕಾಂ ಅಸಿಸ್ಟೆಂಟ್, ಅಪ್ಪರ್ ಡಿವಿಷನ್ ಕ್ಲರ್ಕ್ (UDC), ಸ್ಟ್ಯಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಸೇರಿದಂತೆ ಲೆವೆಲ್ 2 ರಿಂದ ಲೆವೆಲ್ 7ರವರೆಗಿನ ಬರೋಬ್ಬರಿ 13 ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ನಾಗೇಂದ್ರ ಆಯ್ಕೆಯಾಗಿದ್ದರು.

ತಮಗೆ ಒಲಿದು ಬಂದ 13 ಹುದ್ದೆಗಳ ಪೈಕಿ ಉತ್ತಮವಾದ ಒಂದು ಹುದ್ದೆಯನ್ನ ಆಯ್ಕೆ ಮಾಡಿಕೊಂಡ ನಾಗೇಂದ್ರ ಸಾಯಿ, ಪ್ರಸ್ತುತ 2026ರ ಫೆಬ್ರವರಿಯಿಂದ ಮಹಬೂಬ್‌ನಗರದಲ್ಲಿ ಇಎಸ್‌ಐಸಿ ಬ್ರಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

"ಸೋಲುಗಳನ್ನು ಮೆಟ್ಟಿ ನಿಂತು ತಾಳ್ಮೆಯಿಂದ ಶ್ರಮ ಹಾಕಿದರೆ ಯಾವುದೇ ಗುರಿಯನ್ನಾದರೂ ತಲುಪಬಹುದು. ಕೇವಲ ದೊಡ್ಡ ಹುದ್ದೆಗಳನ್ನೇ ಗುರಿಯಾಗಿಸಿಕೊಳ್ಳದೆ, ಇರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳಬೇಕು" ಎಂದು ನಾಗೇಂದ್ರ ಸಾಯಿ ಇಂದಿನ ಯುವಜನತೆಗೆ ಸಂದೇಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+