ಜಮ್ಮು-ಕಾಶ್ಮೀರ: 75 ವರ್ಷಗಳ ನಂತರ ವಿದ್ಯುತ್ ಸಂಪರ್ಕ ಪಡೆದ ಬುಡಕಟ್ಟು ಪ್ರದೇಶ !
ಶ್ರೀನಗರ,ಜನವರಿ 09: ಸುಮಾರು 75 ವರ್ಷಗಳಿಂದ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದ ಬುಡಕಟ್ಟು ಜನರ ಮನದಲ್ಲಿ ಸಂತೋಷ ಮನೆ ಮಾಡಿದೆ.
ಹೌದು, ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಟೆಥಾನ್ ಎಂಬ ಪ್ರದೇಶದಲ್ಲಿ ಸೌಧೆಯನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದ ಬುಡುಕಟ್ಟು ಸಮುದಾಯದ ಮನೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಸರ್ಕಾರದ ಪ್ರಾಯೋಜಿತ ಪ್ರಧಾನಮಂತ್ರಿ ಅಭಿವೃದ್ದಿ ಯೋಜನೆಯಡಿಯಲ್ಲಿ, ಈ ಪ್ರದೇಶದಲ್ಲಿ ಸುಮಾರು 200ಕ್ಕೂ ಅಧಿಕ ಸಂಖ್ಯೆಯಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಪ್ರತಿ ಮನೆಗಳಿಗೂ ವಿದ್ಯುತ್ ಸಂಪರ್ಕವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ವಿದ್ಯುತ್ ಇಲಾಖೆ ಮತ್ತು ಜಿಲ್ಲಾಡಳಿತದ ಅವಿರತ ಪ್ರಯತ್ನದಿಂದಾಗಿ ಅನಂತನಾಗ್ ಪಟ್ಟಣದಿಂದ 45 ಕಿಲೋಮೀಟರ್ ದೂರದಲ್ಲಿರುವ ಟೆಥಾನ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಸುಮಾರು 75 ವರ್ಷಗಳಿಂದ ಕ್ಯಾಂಡಲ್‌ಲೈಟ್‌ಗಳನ್ನು ಅವಲಂಭಿಸಿದ್ದ ಟೆಥಾನ್ ಗ್ರಾಮದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಲ್ಪ ಬೆಳಗಿದಾಗ ಸ್ಥಳೀಯ ನಿವಾಸಿಗಳು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.

ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ !
ಹಲವಾರು ವರ್ಷಗಳಿಂದ ಮೇಣದ ಬತ್ತಿಯ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದೇವು. ಈಗ ಮೊದಲ ಬಾರಿಗೆ ವಿದ್ಯುತ್ ಬಲ್ಪ ಬೆಳಗುವುದನ್ನು ನೋಡಿ ಸಂತೋಷವಾಗುತ್ತಿದೆ.
ವಿದ್ಯುತ್ ಸಂಪರ್ಕವಿಲ್ಲದ ಕಾರಣ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಯಿತು. ವಿದ್ಯುತ್ ಸಂಪರ್ಕದಿಂದ ನಮ್ಮ ಮಕ್ಕಳು ವಿದ್ಯುತ್ ಬಲ್ಪನ ಬೆಳಕಿನಲ್ಲಿ ಓದು ಮುಂದುವರೆಸಲಿದ್ದಾರೆ. ವಿದ್ಯುತ್ ಒದಗಿಸಿದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಗ್ರಾಮದ ನಿವಾಸಿ ಫಜುಲ್ ಉ ದೀನ್ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಜನರನ್ನು ಸಂಪರ್ಕಿಸಲು ಸಹ ಅತಿ ಕಷ್ಟಕರವಾದ ಈ ಪ್ರದೇಶದಲ್ಲಿ 2022ರಲ್ಲಿ ನೆಟ್‌ವರ್ಕಿಂಗ್ ಪ್ರಕ್ರಿಯೆಯನ್ನು ಇಲಾಖೆ ಪ್ರಾರಂಭಿಸಿತ್ತು. ಈವರೆಗೂ ಈ ಪ್ರದೇಶದಲ್ಲಿ 63 (ಕೆವಿ) ಟ್ರಾನ್ಸ್‌ಫಾರ್ಮರ್ ಮತ್ತು 95 ಕಂಬಗಳನ್ನು ಅಳವಡಿಸಲಾಗಿದ್ದು,ಈ ಮೂಲಕ ಸುಮಾರು 60ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ಅನಂತನಾಗ್‌ನ ವಿದ್ಯುತ್ ಅಭಿವೃದ್ಧಿ ಇಲಾಖೆಯ ತಾಂತ್ರಿಕ ಅಧಿಕಾರಿ ಫಯಾಜ್ ಅಹ್ಮದ್ ಮಾಹಿತಿ ನೀಡಿದರು.

ಕುಣಿದು ಕುಪ್ಪಳಿಸಿದ ನಿವಾಸಿಗಳು !
75 ವರ್ಷಗಳ ನಂತರ ವಿದ್ಯುತ್ ಸಂಪರ್ಕ ಪಡೆದ ಟೆಥಾನ್ ಗ್ರಾಮದಲ್ಲಿರುವ ಬುಡಕಟ್ಟು ಜನಾಂಗದವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು. ವಿದ್ಯುತ್ ಸೌಕರ್ಯ ಪಡೆಯುವ ಮೂಲಕ ಗ್ರಾಮವು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಈ ಅಪೂರ್ವ ಗಳಿಗೆಯನ್ನು ನಿವಾಸಿಗಳು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ಪ್ರದೇಶದಲ್ಲಿ ವಾಸವಾಗಿ 60 ವರ್ಷಗಳು ಸಂಧಿವೆ.ಇಂದು ಮೊದಲ ಬಾರಿಗೆ ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕವಾಗಿದೆ. ನಮ್ಮ ಪೂರ್ವಜರು ಅನುಭವಿಸಲು ಸಾಧ್ಯವಾಗದ ಸೌಲ್ಯಭಗಳನ್ನು ನಾವು ಅನುಭವಿಸುತ್ತಿದ್ದೇವೆ. ಯೋಜನೆ ಅನುಷ್ಠಾನಗೊಳಿಸುವಲ್ಲಿ ಶ್ರಮಿಸಿದ ಸರ್ಕಾರ ಮತ್ತು ಅಧಿಕಾರಿಗಳಿಗೆ ನಾವು ಅಭಾರಿಯಾಗಿರುತ್ತೇವೆ ಎಂದು ಗ್ರಾಮದ ನಿವಾಸಿ ಜಾಫರ್ ಖಾನ್ ಹೇಳಿದರು.












Click it and Unblock the Notifications