• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಬ್ಲಿಘಿಗಳ ಬಗ್ಗೆ ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ಅನಂತ್ ಕುಮಾರ್ ಹೆಗಡೆ

|

ಬೆಂಗಳೂರು, ಏಪ್ರಿಲ್ 8: ದೇಶಾದ್ಯಂತ ಕೊರೊನಾ ಸೋಂಕು ಹರಡು ಮೂಲ ಕಾರಣಕರ್ತರು ಎನ್ನಲಾಗುತ್ತಿರುವ ತಬ್ಲಿಘಿ ಜಮಾತ್ ಕಾರ್ಯಕರ್ತರ ವಿರುದ್ಧ ಕೇಂದ್ರದ ಮಾಜಿ ಸಚಿವ, ಸಂಸದ

ಅನಂತ್ ಕುಮಾರ್ ಹೆಗಡೆ ಕಿಡಿ ಕಾರಿದ್ದಾರೆ.

ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್‍ಕುಮಾರ್ ಹೆಗಡೆ ತಮ್ಮ ಫೇಸ್‍ಬುಕ್ ನಲ್ಲಿ ತಬ್ಲಿಘಿ ಜಮಾತ್ ಕುರಿತು ಸುದೀರ್ಘ ಲೇಖನ ಬರೆದು, ಅದೊಂದು ಉಗ್ರ ಸಂಘಟನೆ ಎಂದು ಬಿಂಬಿಸಿದ್ದಾರೆ.

ತಬ್ಲೀಘಿ ಜಮಾತ್ ಗೆ ಒಂದು ದೊಡ್ಡ ತಿರುವು ಸಿಕ್ಕಿದ್ದು ದೇಶ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ. ಪಾಕಿಸ್ತಾನದ ರಾಯ್ ವಿಂಡ್ ನಲ್ಲಿ ತಬ್ಲೀಘಿ ಜಮಾತ್ ನ ಬೃಹತ್ ಶಾಖೆಯೊಂದು ಪ್ರಾರಂಭವಾಯಿತು ಮತ್ತು ಇದಕ್ಕೆ ಪಾಕಿಸ್ತಾನ ಸರಕಾರದ ಸಂಪೂರ್ಣ ಬೆಂಬಲ ದೊರಕಿತು.

ಕ್ವಾರಂಟೈನ್‌ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಎಸೆದ್ರು!

ಮೌಲಾನಾ ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲೀಘಿ ಜಮಾತ್ ಗೆ ಪಾಕಿಸ್ತಾನದಲ್ಲೂ ಭಾರತದಲ್ಲೂ ಭಾರೀ ರಾಜಕೀಯ ಮತ್ತು ಹಣಕಾಸಿನ ಬೆಂಬಲ ದೊರಕಿ ಅದು ಅಂತಾರಾಷ್ಟ್ರೀಯ ಸಂಘಟನೆಯಾಗಿ ಬೆಳೆಯಿತು.

ಅರವತ್ತರ ದಶಕದಲ್ಲಿ ತಬ್ಲೀಘಿ ಜಮಾತ್ ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ತಳ ಊರಿತ್ತು. ಎಪ್ಪತ್ತರ ದಶಕದಲ್ಲಿ ಸೌದಿಯ ವಹಾಬಿಗಳ ಸಹಕಾರ ಮೊಟ್ಟಮೊದಲ ಬಾರಿಗೆ ತಬ್ಲೀಘಿ ಜಮಾತ್ ಗೆ ದೊರೆಯಿತು.

ಆಗಿನ ಕಾಲದ ಪ್ರಮುಖ ವಹಾಬೀ ಧರ್ಮಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲೀಘಿ ಜಮಾತ್ ಅನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ತಬ್ಲೀಘಿ ಜಮಾತ್ ನ ಧರ್ಮಪ್ರಚಾರಕ ಮೌಲ್ವಿಗಳ ಜೊತೆಗೆ ತಮ್ಮ ವಹಾಬೀ ಪ್ರಚಾರಕರನ್ನೂ ಕಳುಹಿಸಿಕೊಡಲು ಉತ್ತೇಜಿಸಿದರು.

Exclusive: ಕರ್ನಾಟಕ ಕೊರೊನಾ ಹಾಟ್‌ಸ್ಪಾಟ್‌ನ ಪ್ರತ್ಯಕ್ಷ ವರದಿ; ವಿವರಗಳು ಗಂಭೀರ

ಇದು ತಬ್ಲೀಘಿನ ಇನ್ನೊಂದು ಟರ್ನಿಂಗ್ ಪಾಯಿಂಟ್. ಅಷ್ಟರಲ್ಲಾಗಲೇ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ತಮ್ಮ ಧರ್ಮ ಪ್ರಚಾರದ ನೆಟ್ ವರ್ಕ್ ಸ್ಥಾಪಿಸಿದ್ದ ತಬ್ಲೀಘಿನ ಜೊತೆಗೆ ಸೌದಿಯ ವಹಾಬಿಗಳು ಕೈಜೋಡಿಸಿ ತಮ್ಮ ಜಾಲವನ್ನು ಬಲಪಡಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದ್ದರು..

ಮತ್ತು ಅದರಲ್ಲಿ ಯಶಸ್ವಿಯೂ ಆದರು. ತಬ್ಲೀಘಿಗೆ ಸೌದಿಯಿಂದ ಹಣದ ನೆರವು ಕೂಡಾ ಯಥೇಚ್ಛವಾಗಿ ಹರಿದು ಬಂತು. ಸೌದಿ ಮೂಲದ "ವರ್ಲ್ಡ್ ಮುಸ್ಲಿಂ ಲೀಗ್" ಪ್ರಧಾನ ಪೋಷಕನಾಗಿ ತಬ್ಲೀಘಿಗೆ ಸಹಾಯ ಮಾಡಿತು.

ವಾಸ್ತವವಾಗಿ ತಬ್ಲೀಘಿ ಜಮಾತ್ ನ ಪ್ರಚಾರಕರು ಸ್ವಯಂ ಸೇವಕರು, ಮತ್ತು ತಮ್ಮ ಕೈಯಿಂದಲೇ ಖರ್ಚುಮಾಡಿಕೊಂಡು ಪ್ರಯಾಣಿಸುತ್ತಾ ಊರೂರು ತಿರುಗಿ ಧರ್ಮ ಪ್ರಚಾರ ಮತ್ತು ಮತಾಂತರ ಮಾಡುತ್ತಿದ್ದರು.

ಆದರೆ ಕಾಲಾಂತರದಲ್ಲಿ ಸೌದಿಯ ಹಣ ಹರಿದುಬಂದಂತೆಲ್ಲ ತಬ್ಲೀಘಿನ ಪ್ರಚಾರಕರ ಪ್ರಯಾಣದ ಖರ್ಚಿಗೆ ಈ ಹಣ ಬಳಕೆಯಾಗತೊಡಗಿತು ಎಂದು ವಿವರಿಸಿದ್ದಾರೆ.

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ಸಂಘಟನೆ

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ಸಂಘಟನೆ

ದೇಶಾದ್ಯಂತ ಸೋಂಕು ಅಂಟಿಸುತ್ತಿರುವ ರಹಸ್ಯ ಸಂಘಟನೆ - ತಬ್ಲಿಘಿ ಜಮಾತ್ ಒಳಸುಳಿಗಳು ಎಂದು ಶೀರ್ಷಿಕೆಯಡಿ ಲೇಖನವನ್ನು ತಮ್ಮ ಫೇಸ್‍ಬುಕ್ ಹಾಗೂ ಬ್ಲಾಗ್ ನಲ್ಲಿ ಇಂದು ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ಅನಂತ್‍ಕುಮಾರ್ ಅವರು ತಬ್ಲಿಘಿ ಇಸಹಾಸವೇನು? ಭಾರತ ಮೂಲದ ಇಸ್ಲಾಂ ಧರ್ಮ ಪ್ರಚಾರದ ಸಂಸ್ಥೆ ವಿಶ್ವವ್ಯಾಪಿ ಬೆಳೆದಿದ್ದು ಹೇಗೆ? ತಬ್ಲಿಘಿಗೂ ಉಗ್ರಸಂಘನೆಗೂ ಹೇಗೆ ನಂಟು? ಧರ್ಮ ಪ್ರಚಾರದಕ್ಕೆ ತಬ್ಲಿಘಿ ಜಮಾತ್ ಸದಸ್ಯರನ್ನು ಹೇಗೆ ಬಳಸಿಕೊಂಡಿತು? ರಷ್ಯಾ- ಅಫ್ಘಾನಿಸ್ತಾನ್‍ನ ವಿವಾದವೇನು? ಕೊರೊನಾ ವೈರಸ್ ಹಾಗೂ ತಬ್ಲಿಘಿ ಜಮಾತ್ ನಂಟಿನ ಬಗ್ಗೆ ಉಲ್ಲೇಖಿಸಿದ್ದಾರೆ.

ಕೊರೊನಾ ವೈರಸ್‌ ಊಹೆ ಯಾರಲ್ಲಿಯೂ ಇರಲಿಲ್ಲ

ಕೊರೊನಾ ವೈರಸ್‌ ಊಹೆ ಯಾರಲ್ಲಿಯೂ ಇರಲಿಲ್ಲ

ನಾವು ಬುದ್ಧಿವಂತ ಮನುಷ್ಯರು ಕಟ್ಟಿಕೊಂಡಿರುವ ಆ ಅತ್ಯಾಧುನಿಕ ಜಗತ್ತಿಗೆ ಇಂಥದ್ದೊಂದು ಗಂಡಾಂತರ ಬರಬಹುದು, ಅದರಲ್ಲೂ ಕಣ್ಣಿಗೆ ಕಾಣಿಸದ ಒಂದು ಯಕಶ್ಚಿತ್ ವೈರಸ್ಸಿನ ಎದುರು ಹೀಗೆ ಮಾನವ ಜನಾಂಗವೇ ಮರಣಭಯದಿಂದ ಶರಣಾಗಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !

ಕೊರೊನಾ ಮಣಿಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ

ಕೊರೊನಾ ಮಣಿಸಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿದೆ

ಅದೇ ರೀತಿ ಕೊರೋನಾ ಎಂಬ ಮಾಹಾಮಾರಿ ವೈರಾಣುವನ್ನು ಮಣಿಸಲು, ಅದು ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಒಗ್ಗಟ್ಟಾಗಿ ಹೋರಾಡಿ, ಪ್ರಪಂಚದ ಬೇರೆಲ್ಲಾ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಬಹಳಷ್ಟು ಯಶಸ್ಸುಗಳಿಸಿ, ಅತ್ಯಂತ ಕಡಿಮೆ ಸಂಖ್ಯೆಯ ಸೋಂಕಿತರನ್ನು ಹೊಂದಿ ಇನ್ನೇನು ಈ ಯುದ್ಧದಲ್ಲಿ ನಾವು ನಿಶ್ಚಿತವಾಗಿಯೂ ಜಯಗಳಿಸುತ್ತೇವೆ ಎಂಬ ದೃಢನಂಬಿಕೆಯಲ್ಲಿರುವಾಗಲೇ ಇಂಥಾದ್ದೊಂದು ದೇಶ ದ್ರೋಹದ ಕೆಲಸ ನಡೆಯಬಹುದು, ಗಂಭೀರ ಮಾರಣಾಂತಿಕ ಖಾಯಿಲೆಯೊಂದನ್ನು ದೇವರ ಹೆಸರಿನಲ್ಲಿ, ನಂಬಿಕೆಯ ಹೆಸರಿನಲ್ಲಿ ದೇಶದ ಮೂಲೆ ಮೂಲೆಗೂ ಹರಡಬಹುದು... ಆ ಮೂಲಕ ಭಾರತದ ಕೋಟ್ಯಂತರ ಪ್ರಜೆಗಳಿಗೆ ಗಂಡಾಂತರ ಉಂಟುಮಾಡಬಹುದೆನ್ನುವ ಕಿಂಚಿತ್ ಊಹೆಯೂ ಯಾರಿಗೂ ಇರಲಿಲ್ಲ... !

ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ

ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ

ತಬ್ಲಿಘಿ ಜಮಾತ್... ಭಾರತದಲ್ಲೇ ಹುಟ್ಟಿ ಇವತ್ತು ವಿಶ್ವದೆಲ್ಲೆಡೆ ಬೇರುಬಿಟ್ಟು ಹರಡಿಕೊಂಡು ಕೋಟ್ಯಂತರ ಸದಸ್ಯರನ್ನು ಹೊಂದಿರುವ ಒಂದು ಖಟ್ಟರ್ ಮೂಲಭೂತವಾದಿ ಇಸ್ಲಾಮಿಕ್ ಸಂಸ್ಥೆ. ಇದು ಮೂಲತಃ ಭಾರತದ್ದೇ ಇನ್ನೊಂದು ಇಸ್ಲಾಮಿಕ್ ಸಂಸ್ಥೆ ದಾರುಲ್ ಉಲೂಮ್ ದೇವ್ ಬಂದ್ ನ ಒಂದು ಶಾಖೆಯಾಗಿ ಪ್ರಾರಂಭವಾಯಿತು. ಇದರ ಮೂಲ ಉದ್ದೇಶ ಇಸ್ಲಾಮ್ ಪ್ರಚಾರ. ಅದರಲ್ಲೂ ಪ್ರವಾದಿ ಮೊಹಮ್ಮದರ ಕಾಲದಲ್ಲಿದ್ದಂತೆಯೇ ಕಟ್ಟುನಿಟ್ಟಿನ ಜೀವನ ಪದ್ಧತಿ ರೂಢಿಸಿಕೊಳ್ಳಲು ಮುಸ್ಲಿಮರನ್ನೇ ಪ್ರೇರೇಪಿಸುವುದು ಇದರ ಆಶಯ..

ಸಂಸ್ಥೆ ಗುರಿ

ಸಂಸ್ಥೆ ಗುರಿ

ದಾರಿ ತಪ್ಪಿರುವ, ಇಸ್ಲಾಮನ್ನು ಸರಿಯಾಗಿ ಪಾಲಿಸದ ಮುಸ್ಲಿಮರೇ ಈ ಸಂಸ್ಥೆಯ ಗುರಿ. ಖುರಾನ್ ಹದೀಸ್, ಸುನ್ನಾಹ್ ವನ್ನೇ ಭೋಧಿಸುವ, ಮತಪ್ರಚಾರದ ಕೆಲಸ ಬಿಟ್ಟರೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲದ ಸಂಘಟನೆ ಅಂತ ಹೇಳಿಕೊಂಡಿದ್ದ ತಬ್ಲೀಘಿ ಜಮಾತ್ ನ ಪ್ರವರ್ತಕ ಮೌಲಾನಾ ಮೊಹಮ್ಮದ್ ಇಲ್ಯಾಸ್ ಖಾಂಡಾಲವಿ. ರಾಜಕೀಯ ಉದ್ದೇಶ ಇಲ್ಲದ ಸಂಘಟನೆಯಾದುದರಿಂದ ಭಾರತವನ್ನಾಳುತ್ತಿದ್ದ ಬ್ರಿಟಿಷರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದರು. ಹೀಗೆ 1928 ರಲ್ಲಿ ಪ್ರಾರಂಭವಾದ ತಬ್ಲೀಘಿ ಜಮಾತ್ ಗೆ ಇದ್ದ ಮೂಲ ಉದ್ದೇಶವೇ ಮತಾಂತರ!.

ಭಾರತಕ್ಕೆ ಗಂಢಾಂತರ ಉಂಟು ಮಾಡುವ ಸಂಚು

ಭಾರತಕ್ಕೆ ಗಂಢಾಂತರ ಉಂಟು ಮಾಡುವ ಸಂಚು

ಈಗ ಇದೆ ತಬ್ಲೀಘಿ ಜಮಾತ್ ಭಾರತಕ್ಕೇ ಗಂಡಾಂತರ ಉಂಟುಮಾಡುವ ಭಾರೀ ಸಂಚು ನಡೆಸಿದ ಆರೋಪ ಎದುರಿಸುತ್ತಿದೆ. ಕೊರೋನಾ ವೈರಸ್ ಭಯಾನಕ ಸಾಂಕ್ರಾಮಿಕವಾಗಿ ಹರಡುತ್ತಿರುವ ಹೊತ್ತಿನಲ್ಲೇ ದೆಹಲಿಯ ನಿಜಾಮುದ್ದೀನ್ ನ ತಮ್ಮ ಹೆಡ್ ಕ್ವಾರ್ಟರ್ಸ್ ನಲ್ಲಿ ಸಾವಿರಾರು ಮತಪ್ರಚಾರಕರನ್ನು ಸೇರಿಸಿಕೊಂಡು ಸೋಂಕನ್ನು ದೇಶಾದಾದ್ಯಂತ ಹರಡುವ ಒಂದು ವಿಕೃತ ಸಂಚು ನಡೆಸಲಾಯಿತೇ ? ಮೇಲ್ನೋಟಕ್ಕೆ ಸಂಚು ನಿಜ ಅಂತಲೇ ಅನ್ನಿಸುತ್ತದೆ ಯಾಕೆಂದರೆ ಈ ಸಭೆಯಲ್ಲಿ ಹಲವಾರು ವಿದೇಶೀ ಮತಪ್ರಚಾರಕರಿದ್ದರು. ಅವರಿಗಿದ್ದ ವೈರಸ್ಸಿನ ಸೋಂಕು ಇತರರಿಗೂ ಹರಡಿದ್ದು, ಹಾಗೆ ಸೋಂಕಿತರಾದ ತಬ್ಲೀಘಿ ಜಮಾತ್ ಸದಸ್ಯರು ಎಲ್ಲೆಂದರಲ್ಲಿ ದೇಶಪೂರ್ತಿ ಓಡಾಡಿದ್ದಾರೆ ತಮ್ಮಲ್ಲಿರುವ ಸೋಂಕನ್ನು ಎಲ್ಲೆಲ್ಲಿಗೋ ಹರಡಿಬಿಟ್ಟಿದ್ದಾರೆ. ಆ ಮೂಲಕ ಭಾರತ ಸರಕಾರ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಿ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಲು ಮಾಡಿದ ಪ್ರಯತ್ನ ವನ್ನು ವಿಫಲಗೊಳಿಸಿದ್ದಾರೆ.

ಅನಂತ್‌ಕುಮಾರ್ ಹೆಗಡೆ ಪ್ರಶ್ನೆ

ಅನಂತ್‌ಕುಮಾರ್ ಹೆಗಡೆ ಪ್ರಶ್ನೆ

ಕೊರೋನಾ ವೈರಸ್ಸನ್ನು ಮತ್ತು ಅದು ಮಾಡಬಹುದಾದ ಅಪಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು ವಿಫಲರಾದ ರೀತಿಯಲ್ಲೇ ಜಗತ್ತಿನ ಘಟಾನುಘಟಿ ರಾಜಕಾರಣಿಗಳು, ಮುತ್ಸದ್ಧಿಗಳು, ಇಸ್ಲಾಮಿನ ಅಪಾಯವನ್ನು ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರೇ ಎಂದು ಪ್ರಶ್ನಿಸಿದ್ದಾರೆ.

English summary
Former Union minister Ananth Kumar Hegde revealed shocking information regarding tablighi organization Through Facebook Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X