ಇದು ಅನ್ನದಾನವಲ್ಲ ಫೋನ್‌ ದಾನ : ಸೆಪ್ಟೆಂಬರ್ 22 ರಂದು ಭಕ್ತರಿಗೆ ಪ್ರಸಾದವಾಗಿ ಐಫೋನ್‌ 17 ವಿತರಿಸಲು ಮುಂದಾದ ವ್ಯಕ್ತಿ

ಇದೀಗ ಐಫೋನ್‌ ಕ್ರೇಜ್‌ ಹೆಚ್ತಾ ಇದೆ. ಐಫೋನ್‌ ದುಬಾರಿ ಫೋನ್‌ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೂ ಜೀವಮಾನದಲ್ಲಿ ಒಮ್ಮೆ ಐಫೋನ್‌ ಬಳಸಬೇಕು ಅಂದುಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಇದೀಗ ಐಫೋನ್ 18 ಪ್ರೊ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದನ್ನು ಖರೀದಿಸಲು ಆ್ಯಪಲ್‌ ಸ್ಟೋರ್‌ ಎದುರು ಜಮಾಯಿಸಿರುವ ಜನರನ್ನು ನೋಡಿದರೆ ಜನ ಮರಳೋ ಜಾತ್ರೆ ಮರಳೋ ಎನ್ನುವ ಹಾಗಾಗಿದೆ. ಇನ್ನು ಈ ಫೋನ್‌ ಖರೀದಿ ಮಾಡುವುದಕ್ಕೆ ಚಿನ್ನ ಮಾರಿದವರೂ ಇದ್ದಾರೆ. ಇದ್ದ ಆಸ್ತಿ ಮಾರಿಯಾದರೂ ಪರವಾಗಿಲ್ಲ ಕೈಯ್ಯಲ್ಲಿ ಐಫೋನ್‌ ಹಿಡಿದುಕೊಳ್ಳಬೇಕು. ಇನ್ನು ಕೆಲವರು ತಮ್ಮ ನಿಶ್ಚಿತಾರ್ಥದ ಉಡುಗೊರೆಯಾಗಿ, ಮದುವೆಯ ಗಿಫ್ಟ್‌ ಆಗಿ ಸಂಗಾತಿಗೆ ಈ ಫೋನ್‌ ನೀಡಬೇಕು ಎಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಪ್ರಸಾದವಾಗಿ ಐಫೋನ್‌ 17

ಇದೆಲ್ಲವನ್ನೂ ನೋಡುವಾಗ ಈ ಫೋನಿನ ಮೇಲೆ ಜನರಿಗಿರುವ ಮೋಹ ತಿಳಿಯುತ್ತದೆ. ಇವೆಲ್ಲದರ ನಡುವೆ ಈಗ ರಾಜಾ ಡಿ ಕಿಂಗ್ ಎಂದೇ ಜನಪ್ರಿಯರಾಗಿರುವ ರಾಕೇಶ್ ಟ್ರೆಹಾನ್, ಐಫೋನ್ ಅನ್ನು ಪ್ರಸಾದವಾಗಿ ವಿತರಣೆ ಮಡೋದಕ್ಕೆ ರೆಡಿಯಾಗಿದ್ದಾರೆ. ದೇವಸ್ಥಾನಗಳಲ್ಲಿ ಅನ್ನದಾನ ಮಾಡುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಇವರು ದೇವಸ್ಥಾನದಲ್ಲಿ ಲಂಗರ್ ವ್ಯವಸ್ಥೆ ಮಾಡಿ ಐಫೋನ್‌ 17 ದಾನ ಮಾಡುವುದಕ್ಕೆ ಮುಂದಾಗಿದ್ದಾರೆ. ಸುಮಾರು 100 ಡಿವೈಸ್‌ಗಳನ್ನು ಉಚಿತವಾಗಿ ವಿತರಿಸುವುದಾಗಿ ಘೋಷಿಸಿದ್ದಾರೆ.

Amritsar Resident Rakesh Trehan Plans To Distribute iPhone 17 As Prasada Free Distribution On Sept 22

ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ರಿಂದ ವಿತರಣೆ

ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಪ್ರಸಾದವಾಗಿ ಈ ಐಫೋನ್‌ ವಿತರಿಸುವ ಕೇಲಸ ಶುರುವಾಗಲಿದೆ. ದೇವಿಯು ಆಯ್ಕೆ ಮಾಡುವ ಅದೃಷ್ಟಶಾಲಿಗಳಿಗೆ ಈ ಐಫೋನ್‌ ಸಿಗಲಿದೆಯಂತೆ. ಚಂಡೀಗಢ ಮತ್ತು ಮೊಹಾಲಿಯ ನಿವಾಸಿಗಳಿಗೆ ಐಫೋನ್‌ಗಳನ್ನು ಪ್ರಸಾದವಾಗಿ ದೇವಿಯ ಆಶೀರ್ವಾದವಾಗಿ ನೀಡಲಾಗುತ್ತದೆ ಎಂದು ಅವರು ANI ಗೆ ತಿಳಿಸಿದ್ದಾರೆ.

ಯಾರಿಗೆ ಸಿಗುತ್ತವೆ ಐಫೋನ್‌

ಐಫೋನ್‌ ಪ್ರಸಾದ ವಿತರಣೆಯಲ್ಲಿ ಯಾವುದೇ ಪಕ್ಷಪಾತವಿಲ್ಲ. ನಮ್ಮವರಿಗೆ ವಿಶೇಷ ವ್ಯಕ್ತಗಳಿಗೆ ಇದನ್ನು ವಿತರಿಸುವುದು ಎಂದೂ ಅಲ್ಲ. ಈ ಕಾರ್ಯಕ್ರಮವನ್ನು ಎಲ್ಲರೂ ವೀಕ್ಷಿಸಲು ಸಹಾಯವಾಗುವಂತೆ ನೇರಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು.

ಐಫೋನ್‌ ವಿತರಣೆಯ ನೇರ ಪ್ರಸಾರ

ಪಿಟಿಐ ಜೊತೆ ಮಾತನಾಡಿದ ಅವರು, ಸೆಪ್ಟೆಂಬರ್ 22 ರಂದು, ಎಲ್ಲರ ಸಮ್ಮುಖದಲ್ಲಿ ಐ ಫೋನ್‌ ವಿತರಣೆಯ ನೇರಪ್ರಸಾರದಿಂದ ಪ್ರಾರಂಭವಾಗುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಮಾಧ್ಯಮಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಇಲ್ಲಿಗೆ ಬಂದು ಬೆಂಬಲ ನೀಡಿದವರನ್ನು ಸಹ ಆಹ್ವಾನಿಸಲಾಗುತ್ತದೆ. ಚಂಡೀಗಢ ಮತ್ತು ಮೊಹಾಲಿಯಿಂದ ಆಯ್ದ ಜನರಿಗೆ ನೇರಪ್ರಸಾರದಲ್ಲಿ ಐಫೋನ್‌ಗಳನ್ನು ವಿತರಿಸಲಾಗುತ್ತದೆ. ಅದೃಷ್ಟಶಾಲಿಗಳ ಹೆಸರುಗಳನ್ನು ಎಲ್ಲರ ಸಮ್ಮುಖದಲ್ಲಿ ಕರೆಯಲಾಗುವುದು. ಹೆಸರು ಕರೆದಂತೆ ಅವರು ಬಂದು ಐಫೋನ್‌ಗಳನ್ನು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.

ಪೆಟ್ರೋಲ್ ಲಂಗರ್

ಟ್ರೆಹಾನ್ ಈ ರೀತಿಯ ಲಂಗರ್‌ಗಳಿಂದ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಅವರು ಚಂಡೀಗಢದಲ್ಲಿ ಪೆಟ್ರೋಲ್ ಲಂಗರ್ ಅನ್ನು ವ್ಯವಸ್ಥೆ ಮಾಡಿದ್ದರು. ಇದರ ಅಡಿಯಲ್ಲಿ ಕೆಲವು ಆಯ್ದ ಪೆಟ್ರೋಲ್ ಪಂಪ್‌ಗಳಲ್ಲಿ ಜನರಿಗೆ ಉಚಿತ ಪೆಟ್ರೋಲ್ ಒದಗಿಸುವುದಾಗಿ ಭರವಸೆ ನೀಡಿದ್ದರು. ಅವರು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾಲೀಕರಿಗೆ 500 ಮತ್ತು ನಾಲ್ಕು ಚಕ್ರ ವಾಹನ ಮಾಲೀಕರಿಗೆ 1,000 ಮೌಲ್ಯದ ಇಂಧನ ಕೂಪನ್‌ಗಳನ್ನು ಘೋಷಿಸಿದ್ದರು.

ಆದರೆ ಸ್ಥಳದಲ್ಲಿ ಮಿತಿ ಮೀರಿ ಜನ ಸೇರಿದ್ದರಿಂದ ಉಚಿತ ಪೆಟ್ರೋಲ್ ನೀಡುವ ಅವರ ಮೊದಲ ಪ್ರಯತ್ನ ಸಾಕಾರವಾಗಲಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಅಧಿಕಾರಿಗಳು ಪೆಟ್ರೋಲ್ ಪಂಪ್ ಅನ್ನು ತಾತ್ಕಾಲಿಕವಾಗಿ ಮುಚ್ಚುವ ಪರಿಸ್ಥಿತಿ ಎದುರಾಯಿತು.

ರಾಕೇಶ್ ಟ್ರೆಹಾನ್ ಅವರು ಒಬ್ಬ ಕ್ರಿಪ್ಟೋ ವ್ಯಾಪಾರಿ. ಅವರು ತಮ್ಮ ಆನುವಂಶಿಕ ಸಂಪತ್ತನ್ನು ಈ ರೀತಿಯ ಕೆಲಸಗಳಿಗೆ ಬಳಸುತ್ತಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+