107 'ಶೌರ್ಯ ಪ್ರಶಸ್ತಿ'ಗೆ ಮುರ್ಮು ಅಸ್ತು: ಹುತಾತ್ಮ ಶ್ವಾನಕ್ಕೆ ಪ್ರಶಸ್ತಿ
ಬೆಂಗಳೂರು ಆಗಸ್ಟ್ 15: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ದಿನ ಸಶಸ್ತ್ರ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ 107 'ಶೌರ್ಯ ಪ್ರಶಸ್ತಿ' ಗಳಿಗೆ ಅನುಮೋದನೆ ನೀಡಿದ್ದಾರೆ.
ಮುಖ್ಯವಾಗಿ ಜಮ್ಮು- ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ವಿರುದ್ಧ ಅದಮ್ಯ ಧೈರ್ಯ ಪ್ರದರ್ಶಿಸಿದ್ದರಿಂದ ಸೇನೆಯ ರಾಷ್ಟ್ರೀಯ ರೈಫಲ್ಸ್‌ನ ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಅವರು 'ಕೀರ್ತಿಚಕ್ರ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅದಲ್ಲದೇ ಸೇನೆ, ಸಶಸ್ತ್ರಪಡೆಗಳಲ್ಲಿ ಧೈರ್ಯ, ಸಾಹಸ ಮೆರೆದ ಯೋಧರಿಗೆ ವಿವಿಧ ಪ್ರಶಸ್ತಿ, ಗೌರವಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದಿಸಿದ್ದಾರೆ.
ತಿಂಗಳ ಹಿಂದೆ ಕಾಶ್ಮೀರದಲ್ಲಿನ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕ-ವಿರೋಧಿ ಕಾರ್ಯಾಚರಣೆಯ ವೇಳೆ ಭಯೋತ್ಪಾದಕರಿಂದ ಗುಂಡಿಗೆ ಬಲಿಯಾದ ಆರ್ಮಿ ಶ್ವಾನ ಆಕ್ಸೆಲ್, ವಿಶಿಷ್ಟ ಮತ್ತು ಅರ್ಹ ಸೇವೆಯನ್ನು ಗುರುತಿಸುವ 42 'ಪ್ರಸ್ತಾಪನೆಯಲ್ಲಿ-ಡೆಸ್ಪ್ಯಾಚ್'ಗಳ ಪಟ್ಟಿಗೆ ಸೇರಿದೆ. ಅಶೋಕ ಚಕ್ರ ಬಳಿಕ 'ಕೀರ್ತಿಚಕ್ರ'ವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.

ಬಿಎಸ್‌ಎಫ್‌ನ ಪೇದೆ ಸುದೀಪ್ ಸರ್ಕಾರ್ ಮತ್ತು ಉಪ ಪೇದೆ ಪಯೋಟಿನ್ ಸಾಟ್ ಗೈಟ್ ಅವರಿಗೆ ಮರಣೋತ್ತರವಾಗಿ 'ಕೀರ್ತಿಚಕ್ರ' ನೀಡಿ ಗೌರವಿಸಲಾಗುತ್ತಿದೆ ಎಂದು ರಾಷ್ಟ್ರಪತಿಗಳ ಅನುಮೋದನೆ ಪಟ್ಟಿ ತಿಳಿಸಿದೆ.
ಪಟ್ಟಿ ಎಷ್ಟು ಪ್ರಶಸ್ತಿ ಒಳಗೊಂಡಿದೆ
ಒಟ್ಟು ಘೋಷಣೆಗೊಂಡ ಪ್ರಶಸ್ತಿ ಪೈಕಿ ಮೂರು 'ಕೀರ್ತಿ ಚಕ್ರ, 13 'ಶೌರ್ಯಚಕ್ರ' ಪ್ರಶಸ್ತಿ ಎರಡು 'ಬಾರ್ ಟು ಸೇನಾ ಪದಕ'(ಶೌರ್ಯ), 81 ಸೇನಾ ಪದಕ(ಶೌರ್ಯ)', 1 'ನವಸೇನಾ' ಪದಕ (ಶೌರ್ಯ) ಮತ್ತು 7 'ವಾಯುಸೇನಾ' ಪದಕ(ಶೌರ್ಯ)ಗಳು ಒಳಗೊಂಡಿವೆ. ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಕೊಡುಗೆಗಳಿಗಾಗಿ ಸೈನ್ಯಕ್ಕೆ 40 ಮೆನ್ಷನ್ ಇನ್ ಡೆಸ್ಪ್ಯಾಚ್'ಗಳನ್ನು ಘೋಷಿಸಲಾಗಿದೆ. ಒಬ್ಬ ಏರ್‌ರ್ಫೋರ್ಸ್ ಸಿಬ್ಬಂದಿಗೆ ಹಾಗೂ ಮತ್ತೊಂದು ಸೇನಾ ಶ್ವಾನ ಆಕ್ಸೆಲ್‌ಗೆ ನೀಡುವ (ಮರಣೋತ್ತರ) ಪ್ರಶಸ್ತಿ ನೀಡಲಾಗುತ್ತಿದೆ.

ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಯಲ್ಲಿ ಎದೆಕೊಟ್ಟು ನಿಂತ ರಾಷ್ಟ್ರೀಯ ರೈಫಲ್ಸ್‌ನ 55ನೇ ಬೆಟಾಲಿಯನ್ ಆರ್ಮಡ್ ಕಾರ್ಪ್ಸ್ ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಅವರಯ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು. ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕನನ್ನು ಪತ್ತೆಹಚ್ಚಲು ಸಹಾಯ ಮಾಡಿದ ನಂತರ ಬೆಲ್ಜಿಯಂನ ಮಾಲಿನೊಯಿಸ್ ಎಂಬ ಸೇನಾ ನಾಯಿ ಆಕ್ಸೆಲ್ ಅನ್ನು ಕೊಲ್ಲಲಾಯಿತು ಎಂದು ಸೇನಾ ಸಾಹಸ ಕಾರ್ಯ ಬಗ್ಗೆ ವಿವರಿಸಲಾಗಿದೆ. ಜತೆಗೆ ಅಧ್ಯಕ್ಷ ಮುರ್ಮು ಅವರು ಇದೇ ವೇಳೆ 'ರಾಷ್ಟ್ರಪತಿಗಳ ತತ್ರಾಕ್ಷಕ್ ಪದಕ' ನೀಡಿ ಗೌರವಿಸುವ ಹೊಸ ಪ್ರಕ್ರಿಯೆಗೂ ಈವರ್ಷದಿಂದ ಅನುಮೋದನೆ ನೀಡಿದರು ಎಂದು ತಿಳಿದು ಬಂದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications