ಅಮೃತ್ ಭಾರತ್ ನಿಲ್ದಾಣ ಯೋಜನೆ: 1,000 ಸಣ್ಣ ನಿಲ್ದಾಣಗಳನ್ನು ನವೀಕರಿಸಲು ರೈಲ್ವೆ ಸಚಿವಾಲಯ ನಿರ್ಧಾರ
ನವದೆಹಲಿ, ಡಿಸೆಂಬರ್ 29: ಮುಂದಿನ ವರ್ಷದಲ್ಲಿ 1000 ಸಣ್ಣ ನಿಲ್ದಾಣಗಳನ್ನು ನವೀಕರಿಸಲು ರೈಲ್ವೆ ಸಚಿವಾಲಯವು ಹೊಸ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.
ದೊಡ್ಡ ನಿಲ್ದಾಣಗಳ ಮೆಗಾ-ಅಪ್‌ಗ್ರೇಡೇಶನ್‌ನಿಂದ ಈ ಯೋಜನೆಯು ಪ್ರೇರಿತವಾಗಿದೆ. ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಣ್ಣ ನಿಲ್ದಾಣಗಳನ್ನು ನವೀಕರಿಸಲಾಗುತ್ತದೆ. ಈ ಯೋಜನೆಯು ರೈಲ್ವೇ ನಿಲ್ದಾಣದ ಪುನರಾಭಿವೃದ್ಧಿ ಯೋಜನೆ ಮತ್ತು ಅಮೃತ್ ಭಾರತ್ ಸ್ಟೇಷನ್ ಸ್ಕೀಮ್‌ನ ಭಾಗವಾಗಿರುತ್ತದೆ.
ರೈಲ್ವೆ ಸಚಿವಾಲಯ ತೆಗೆದುಕೊಂಡ ನಿರ್ಧಾರದ ಪ್ರಮುಖ ಅಂಶಗಳು
* ಮೇಲ್ಛಾವಣಿ ಪ್ಲಾಜಾಗಳು, ಉದ್ದವಾದ ಪ್ಲಾಟ್‌ಫಾರ್ಮ್‌ಗಳು, ಬ್ಯಾಲೆಸ್ಟ್‌ಲೆಸ್ ಟ್ರ್ಯಾಕ್‌ಗಳು ಮತ್ತು 5G ಸಂಪರ್ಕವನ್ನು ಸಣ್ಣ ನಿಲ್ದಾಣಗಳಲ್ಲಿ ಕಲ್ಪಿಸುವುದು ಈ ಯೋಜನೆಯ ಭಾಗವಾಗಿದೆ.
* ಇನ್ನೂ ಪ್ರಾರಂಭವಾಗದಿರುವ ಹಿಂದಿನ ಎಲ್ಲಾ ಪುನರಾಭಿವೃದ್ಧಿ ಯೋಜನೆಗಳನ್ನು ಈ ಯೋಜನೆ ಒಳಗೊಳ್ಳುತ್ತದೆ.

* ಈ ಯೋಜನೆಯ ಅಡಿಯಲ್ಲಿ ರೈಲ್ವೆ ನಿಲ್ದಾಣಗಳ ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸುವುದು ಮತ್ತು ಸೌಲಭ್ಯವನ್ನು ಹೆಚ್ಚಿಸುವುದು ಸೇರಿದೆ. ಹಲವು ಹಂತಗಳಲ್ಲಿ ಮಾಸ್ಟರ್ ಪ್ಲಾನ್ ಅನ್ನು ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ.
* ಹಿರಿಯ ರೈಲ್ವೆ ಅಧಿಕಾರಿಗಳ ಸಮಿತಿಯು ಅನುಮೋದಿಸುವ ನಿಲ್ದಾಣಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ವಲಯ ರೈಲ್ವೇಗಳಿಗೆ ನೀಡಲಾಗಿದೆ.
* ಈ ಮಾದರಿಯಲ್ಲಿ ನಿಲ್ದಾಣಗಳ ಪುನರಾಭಿವೃದ್ಧಿಯನ್ನು ಕಡಿಮೆ ವೆಚ್ಚದಲ್ಲಿ ಮಾಡಲಾಗುವುದು. ಅದನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸಲಾಗುವುದು.
* ಹಳೆಯ ಕಟ್ಟಡಗಳನ್ನು ಪರಿಣಾಮಕಾರಿ ರೀತಿಯಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ.
* ರೈಲ್ವೆ ನಿಲ್ದಾಣಗಳ ಹೆಚ್ಚಿನ ಜಾಗವನ್ನು ಪ್ರಯಾಣಿಕರಿಗೆ ಕಾಯ್ದಿರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ನಿಲ್ದಾಣಗಳನ್ನು ತ್ವರಿತಗತಿಯಲ್ಲಿ ಪುನರಾಭಿವೃದ್ಧಿ ಮಾಡುವ ಗುರಿಯನ್ನು ಅಮೃತ್ ಭಾರತ್ ನಿಲ್ದಾಣ ಯೋಜನೆ ಹೊಂದಿದೆ.
* ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪಟ್ಟಣಗಳ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸಹ ಅಮೃತ್ ಭಾರತ್ ನಿಲ್ದಾಣ ಯೋಜನೆ ಒಳಗೊಂಡಿದೆ.












Click it and Unblock the Notifications