'ಅಮ್ಮ ನನ್ನ ಚಾಕಲೇಟ್ ಕದ್ದಿದ್ದಾಳೆ ಜೈಲಿಗೆ ಹಾಕಿ': ತಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬಾಲಕ
ಬುರ್ಹಾನ್‌ಪುರ, ಅಕ್ಟೋಬರ್ 18: ಮಧ್ಯಪ್ರದೇಶದಲ್ಲಿ ಮೂರು ವರ್ಷದ ಮಗುವೊಂದು ತನಗೆ ಚಾಕಲೇಟ್ ತಿನ್ನಲು ಬಿಡುವುದಿಲ್ಲ ಎಂದು ತನ್ನ ತಾಯಿಯ ವಿರುದ್ಧ ದೂರು ನೀಡಿ ಪೊಲೀಸರನ್ನು ಸಂಪರ್ಕಿಸಿದ್ದು, ತಾಯಿಯನ್ನು ಬಂಧಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ.
ತನ್ನ ತಾಯಿಯೊಂದಿಗೆ ಅಸಮಾಧಾನಗೊಂಡ ಪುಟ್ಟ ಬಾಲಕ ಸದ್ದಾಂ, ತನ್ನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಕೇಳಿಕೊಂಡಿದೆ. ಏಕೆಂದರೆ ಅವನ ತಾಯಿ ತನ್ನ ಚಾಕಲೇಟ್‌ಗಳನ್ನು "ಕದ್ದು" ಅವನಿಗೆ ಕಪಾಳಮೋಕ್ಷ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಈ ಘಟನೆಯ ವಿಡಿಯೋ ಈಗ ವ್ಯಾಪಕವಾಗಿ ಹರಿದಾಡುತ್ತಿದೆ. ಸದ್ದಾಂ ಬುರ್ಹಾನ್‌ಪುರದ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ಗೆ ತನ್ನ ಸಂಕಟವನ್ನು ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. "ಅಮ್ಮ ನನ್ನ ಚಾಕಲೇಟ್‌ಗಳನ್ನು ಕದ್ದಿದ್ದಾಳೆ, ಅವಳನ್ನು ಜೈಲಿಗೆ ಹಾಕಿ" ಎಂದು ಬಾಲಕ ಸಬ್ ಇನ್ಸ್‌ಪೆಕ್ಟರ್ ಪ್ರಿಯಾಂಕಾ ನಾಯಕ್‌ಗೆ ಹೇಳುತ್ತಾನೆ.
Ms ನಾಯಕ್, ಮಗುವಿನ ಮುಗ್ಧತೆಯ ಮೇಲೆ ತನ್ನ ನಗುವನ್ನು ನಿಯಂತ್ರಿಸಲು ಹೆಣಗಾಡುತ್ತಾ, ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವನ ಕಳವಳಗಳನ್ನು ಬರೆದು ತನ್ನ ದೂರನ್ನು ದಾಖಲಿಸಿಕೊಂಡಂತೆ ನಟಿಸುತ್ತಾರೆ. ಮಗು ಆ ಕಾಗದದ ತುಂಡಿಗೆ ಸಹಿ ಹಾಕುತ್ತಿರುವುದು ಕಂಡುಬರುತ್ತದೆ. ನಾಯಕ್ ಅವರ ತಾಯಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.
|
ಆಗಿದ್ದೇನು?
ಸದ್ದಾಂ ಚಾಕಲೇಟ್‌ಗಳನ್ನು ಹೆಚ್ಚಾಗಿ ತಿನ್ನುವುದರಿಂದ ತಾಯಿ ಅದನ್ನು ತಡೆದಿದ್ದಾರೆ. ಚಾಕಲೇಟ್ ಕೊಡಲು ನಿರಾಕರಿಸಿದ್ದಾರೆ. ಈ ವೇಳೆ ಸದ್ದಾಂ ತಂದೆಗೆ ತನ್ನನ್ನು ಪೊಲೀಸರ ಬಳಿ ಕರೆದುಕೊಂಡು ಹೋಗಲು ಹಠಾ ಮಾಡಿದ್ದಾನೆ. "ಸದ್ದಾಂ ತಾಯಿ ಕಾಜಲ್ ಚಾಕಲೇಟ್ ಅನ್ನು ಕೊಡಲಿಲ್ಲ. ಅದು ಸದ್ದಾಂ ಅನ್ನು ಕೆರಳಿಸಿತು. ಬಳಿಕ ಅವನು ತನ್ನನ್ನು ಪೊಲೀಸರ ಬಳಿಗೆ ಕರೆದೊಯ್ಯಲು ಕೇಳಿದನು" ಎಂದು ಸದ್ದಾಂ ತಂದೆ ಹೇಳಿದರು. ಪೊಲೀಸರ ಮುಂದೆ ಮುದ್ದಾದ ಮಗು ತನ್ನ ತಾಯಿಯ ವಿರುದ್ಧ ದೂರು ನೀಡಿದ ವಿಡಿಯೋ ಭಾರಿ ವೈರಲ್ ಆಗಿದೆ.

ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ
3 ವರ್ಷದ ಮಗು ಸದ್ದಾಂ ತಾಯಿ ಕಾಜಲ್ ವಿರುದ್ಧ ದೂರು ನೀಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೊ ಕ್ಲಿಪ್ ವೈರಲ್ ಆದ ಬಳಿಕ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೊ ಕರೆ ಮೂಲಕ ಮಾತನಾಡಿದ್ದಾರೆ ಮತ್ತು ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದರು.
|
ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತ
ಮಗುವಿನ ಮುಗ್ಧತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬರೂ ಈ ವಿಡಿಯೊವನ್ನು ವೀಕ್ಷಿಸಲು ಬಯಸುತ್ತಿದ್ದಾರೆ. ಮಗುವಿನ ಮುಗ್ಧತೆಯ ಮಾತು ನೋಡಿ ಆನಂದಿಸಿದ್ದಾರೆ. ಇದಕ್ಕೂ ಮೊದಲು, ಮಕ್ಕಳ ಇಂತಹ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು ಆದರೆ ಬುರ್ಹಾನ್‌ಪುರದ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಕೊನೆಗೂ ಈಡೇರಿದ ಬಾಲಕನ ಆಸೆ
ಬುರ್ಹಾನ್‌ಪುರ ನಗರದ ಈ ವಿಡಿಯೊದಲ್ಲಿ 3 ವರ್ಷದ ಬಾಲಕ ಸದ್ದಾಂ ತನ್ನ ತಾಯಿಯ ವಿರುದ್ಧ ದೂರು ನೀಡುತ್ತಾನೆ. ತಾಯಿ ತನ್ನನ್ನು ಥಳಿಸಿರುವುದಾಗಿ ಹೇಳಿದ್ದಾನೆ. ತನ್ನ ತಾಯಿ ಚಾಕಲೇಟ್ ಕದಿಯುವ ಬಗ್ಗೆ ದೂರು ನೀಡುತ್ತಾನೆ. ಅಷ್ಟೇ ಅಲ್ಲ ತನ್ನ ತಾಯಿಯನ್ನು ಜೈಲಿಗೆ ಹಾಕುವಂತೆ ಪೊಲೀಸರಿಗೆ ಹೇಳುತ್ತಾನೆ. ಈ ಮಗುವಿನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ಗೃಹ ಸಚಿವ ಡಾ. ನರೋತ್ತಮ್ ಮಿಶ್ರಾ ಅವರು ವಿಡಿಯೋ ಕಾಲ್ ಮೂಲಕ ಮಗುವಿಗೆ ಕಾಲ ಮಾಡಿ ಚಾಕಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿ ಬಾಲಕನ ಆಸೆಗಳನ್ನು ಈಡೇರಿಸಿದ್ದಾರೆ.












Click it and Unblock the Notifications