ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೇರಾ ಪರಿವಾರ್ ಭಾಜಪ ಪರಿವಾರ್’ ಅಭಿಯಾನಕ್ಕೆ ಚಾಲನೆ

|
Google Oneindia Kannada News

ನವದೆಹಲಿ, ಫೆಬ್ರವರಿ 12: ಲೋಕಸಭೆ ಚುನಾವಣೆ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಂಗಳವಾರದಂದು 'ಮೇರಾ ಪರಿವಾರ್ ಭಾಜಪ ಪರಿವಾರ್' ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದೆ.

ಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಬಿಎಸ್‌ವೈ ಚಾಲನೆಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಬಿಎಸ್‌ವೈ ಚಾಲನೆ

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಗುಜರಾತಿನ ನಿವಾಸದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು. ಅಹಮದಾಬಾದ್ ನಲ್ಲಿರುವ ತಮ್ಮ ಮನೆಯಲ್ಲಿ ಬಿಜೆಪಿ ಧ್ವಜವನ್ನು ಹಾರಿಸಿದರು. ವಾಹನಗಳಿಗೆ ಬಿಜೆಪಿ ಧ್ಯೇಯ ವಾಕ್ಯಗಳಿದ್ದ ಸ್ಟಿಕ್ಕರ್ ಅಂಟಿಸಿದರು. ದೇಶದೆಲ್ಲೆಡೆ 5 ಕೋಟಿ ಮನೆಗಳಲ್ಲಿ ಬಿಜೆಪಿ ಬಾವುಟ ಹಾರಿಸುವ ಗುರಿ ಹೊಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, 6 ದಿನಕ್ಕೆ 6ಜನ ಪಿಎಂ : ಅಮಿತ್ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, 6 ದಿನಕ್ಕೆ 6ಜನ ಪಿಎಂ : ಅಮಿತ್

ಸರಿ ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನಕ್ಕೆ ದೇಶದ ವಿವಿಧೆಡೆಗಳಲ್ಲಿ ಚಾಲನೆ ಸಿಕ್ಕಿದೆ. ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದರು.

Amit Shah launches BJP campaign for hoisting party flag at 5 crore houses

ನರೇಂದ್ರ ಮೋದಿಯವರನ್ನು ಮತ್ತೆ ಈ ದೇಶದ ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪಕ್ಷದ ಬಾವುಟಗಳನ್ನು ಹಾರಿಸಿ ಬಳಿಕ ಅವುಗಳ ಫೊಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಅಮಿತ್ ಶಾ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

2014ರಿಂದ ಆರಂಭವಾದ ಪಕ್ಷದ ಹೊಸ ಸದಸ್ಯರ ಅಭಿಯಾನದ ಫಲವಾಗಿ 11 ಕೋಟಿಗೂ ಅಧಿಕ ಸದಸ್ಯ ಬಲವನ್ನು ಬಿಜೆಪಿ ಈಗ ಹೊಂದಿದೆ.

English summary
BJP president Amit Shah on Tuesday kicked off his party's ambitious "Mera parivar, Bhajapa parivar" campaign by hoisting its flag at his residence in Gujarat as it seeks to cover over five crore houses under the drive ahead of the announcement of the schedule of Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X