ಗಣೇಶನ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ ಮಾರುತ್ತಿರುವ ಅಮೆಜಾನ್!

Written By: Ramesh
Subscribe to Oneindia Kannada

ನವದೆಹಲಿ, ಜನವರಿ, 19 : ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ತನ್ನ ವೆಬ್ ಸೈಟ್ ನಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವಿರುವ ಚಪ್ಪಲಿಗಳನ್ನು ಮಾರಿದ್ದನ್ನು ನೀವು ಈಗಾಗಲೇ ಓದಿದ್ದೀರಿ.

ಮತ್ತು ಕೆನಡಾದ ಅಮೆಜಾನ್ ಸಂಸ್ಥೆ ಭಾರತದ ಧ್ವಜ ಮಾದರಿಯ ಕಾಲೊರೆಸುವ ಮ್ಯಾಟ್​ಗಳನ್ನು ಮಾರಾಟಕ್ಕೆ ಬಿಟ್ಟು ಅವಮಾನಿಸಿದ್ದ ಬೆನ್ನಲ್ಲೇ ಇದೀಗ ಭಾರತದ ಅಮೆಜಾನ್ ಸಂಸ್ಥೆ ಗಣೇಶನ ಚಿತ್ರ ಉಳ್ಳ ಸ್ಕೇಟಿಂಗ್ ಬೋರ್ಡ್ ನ್ನು ತನ್ನ ವೆಬ್​ಸೈಟ್​ನಲ್ಲಿ ಮಾರುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.[ಗಾಂಧಿ ಚಿತ್ರವುಳ್ಳ ಚಪ್ಪಲಿ ಮಾರುತ್ತಿರುವ ಅಮೆಜಾನ್]

Amazon India selling skateboards with image of Lord Ganesha

ಸಂತಾಕ್ರೂಜ್ ಹೆಸರಿನಲ್ಲಿ ಗಣೇಶ ಚಿತ್ರವಿರುವ ಸ್ಕೇಟಿಂಗ್ ಬೋರ್ಡ್ 21 ಸಾವಿರ ರೂ.ಗಳಿಗೆ ಅಮೆಜಾನ್ ಮಾರಾಟ ಮಾರಾಟ ಮಾಡುತ್ತಿದೆ. ಇದರಿಂದ ಅಮೆಜಾನ್ ವಿರುದ್ದ ಹಿಂದುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಸುಷ್ಮಾ ವಾರ್ನಿಂಗ್: ಅಮೆಜಾನ್ ನಿಂದ ಭಾರತ ವಿರೋಧಿ ಕಾಲೊರಸು ಹಿಂದಕ್ಕೆ]

ಈ ಕುರಿತು ಚಂಡೀಗಢ ಮೂಲದ ವಕೀಲ ಅಜಯ್ ಜಗ್ಗ ಎಂಬುವವರು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಗಣೇಶನ ಚಹರೆಯುಳ್ಳ ಸ್ಕೇಟ್ ಬೋರ್ಡ್​ಅನ್ನು ಮಾರಾಟದಿಂದ ಹಿಂತೆಗೆದುಕೊಂಡು ಹಿಂದುಗಳ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದ್ದಾರೆ.

ಒಂದು ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿರುವ ಅಮೆಜಾನ್ ಸಂಸ್ಥೆ ಮೇಲೆ ಐಪಿಸಿ ಸೆಕ್ಷನ್ 295ರ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ವಿನಂತಿಸಿದ್ದಾರೆ.

ಇತ್ತೀಚೆಗಷ್ಟೇ ಕೆನಡಾ ಅಮೆಜಾನ್ ಭಾರತದ ತ್ರಿವರ್ಣ ಧ್ವಜವಿರುವ ಮ್ಯಾಟ್ ಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ವಿದೇಶಾಂಗ ಸಚಿವೆ ವಾರ್ನಿಂಗ್ ಮಾಡಿದ್ದರಿಂದ ಮಾರಾಟವನ್ನು ಸ್ಥಗಿತಗೊಳಿಸಿತ್ತು.

ಈಗ ಮತ್ತೊಮ್ಮೆ ತನ್ನ ಹಳೆ ಚಾಳಿ ಮುಂದುವರೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
E-commerce company Amazon's India website is selling skateboards bearing the image of Lord Ganesha.
Please Wait while comments are loading...