ಪಾರ್ಕ್ ಮರ ಬಿದ್ದು ವ್ಯಕ್ತಿ ಸಾವು: 1 ಕೋಟಿ ಪರಿಹಾರ
ಜೋಧಪುರ,
ಫೆ.12: ರಾಜಸ್ಥಾನದ ಆಳ್ವಾರ್ ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನವನದಲ್ಲಿ ಒಣಗಿದ ಕೊಂಬೆಯೊಂದು ವ್ಯಕ್ತಿ ಮೇಲೆ ಬಿದ್ದು ಆತ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪಾಲಿಕೆಯು 1.076 ಕೋಟಿ ರೂ. ಪರಿಹಾರ ನೀಡಲಿದೆ. id="toptextpromo">56
ವರ್ಷದ ಲಲಿತ್ ಕುಮಾರ್ ಝಲಾನಿ ಎಂಬುವವರ ತಲೆಯ ಮೇಲೆ Company Garden ಪಾರ್ಕಿನಲ್ಲಿ ಮರದ ಕೊಂಬೆ ಮುರಿದು ಬಿದ್ದು ಅಸುನೀಗಿದ್ದರು. ಝಲಾನಿ ವೃತ್ತಿಯಿಂದ ವೈದ್ಯರಾಗಿದ್ದರು. ಹಾಗಾಗಿ ಅವರ ಕುಟುಂಬದವರು 5.32 ಕೋಟಿ ರೂ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. id='are-slot-1' class='oiad oi-axt oiadv'> id='top-searched-articles'>ಮರದಲ್ಲಿ
ಒಣಗಿದ್ದ ಕೊಂಬೆ ಮುರಿದು ಬಿದ್ದರೆ ಪಾರ್ಕಿಗೆ ಬರುವವರಿಗೆ ಅಪಾಯವಾಗುತ್ತದೆ ಎಂಬ ಅರಿವಿದ್ದರೂ ಸ್ಥಳೀಯ ಆಡಳಿತ ಆ ಬಗ್ಗೆ ಎಚ್ಚರಿಕೆ ವಹಿಸದೆ ಬೇಜವಾಬ್ದಾರಿತನ ತೋರಿದೆ. ಹಾಗಾಗಿ, ಝಲಾನಿ ಅವರ ಕುಟುಂಬಕ್ಕೆ ಕೋಟಿ ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತು. 6 ವರ್ಷಗಳ ಕಾಲ ಸಬೂಬು ಹೇಳುತ್ತಾ ಬಂದಿದ್ದ ನಗರ ಪಾಲಿಕೆ ಇದೀಗ ಹಣ ನೀಡಲು ಒಪ್ಪಿದೆ.

Click it and Unblock the Notifications
