ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಾವು: 60 ವರ್ಷಕ್ಕಿಂತ ಕಡಿಮೆ ಇರುವವರ ಸಂಖ್ಯೆ ಹೆಚ್ಚುತ್ತಿದೆ

|
Google Oneindia Kannada News

ನವದೆಹಲಿ, ಮೇ 1: ದೇಶದಲ್ಲಿ ಕೊರೊನಾ ವೈರಸ್‌ಗೆ ಇದುವರೆಗೂ 1147 ಮಂದಿ ಮೃತಪಟ್ಟಿದ್ದು ,ಶೇ.50 ರಷ್ಟು ಮಂದಿ 60 ವರ್ಷಕ್ಕಿಂತ ಕಡಿಮೆ ಇರುವವರಾಗಿದ್ದಾರೆ.
ಆದರೆ ಏಪ್ರಿಲ್ 18ರಿಂದ ಈ ವಯಸ್ಸಿನವರು ಸಾವನ್ನಪ್ಪುವುದು ಶೇ.25ರಷ್ಟು ಹೆಚ್ಚಾಗಿದೆ.

ಇನ್ನೊಂದೆಡೆ 75 ವರ್ಷಕ್ಕಿಂತ ಮೇಲ್ಪಟ್ಟವರ ಸಾವಿನ ಪ್ರಮಾಣ ಕೇವಲ ಶೇ.9.2 ರಷ್ಟಿದೆ. ಮೊದಲು 42.2ರಷ್ಟು ತೀವ್ರತೆಯಿತ್ತು.ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ವಿಷಯವೂ ಚರ್ಚೆಯಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಭಾರತವು 25 ದೇಶಗಳಿಗೆ ಸಹಾಯವಾಗಿ 2.8 ಮಿಲಿಯನ್ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯು) ಮಾತ್ರೆಗಳನ್ನು ಒದಗಿಸಿದೆ ಎಂದರು.ಪ್ಯಾರೆಸಿಟಮಾಲ್, ಸುಮಾರು 1.9 ಮಿಲಿಯನ್ ಮಾತ್ರೆಗಳನ್ನು ಮತ್ತು 31 ದೇಶಗಳಿಗೆ ಒದಗಿಸಿದ್ದೇವೆ. ಇದಲ್ಲದೆ, ಎಚ್‌ಸಿಕ್ಯು ಮತ್ತು ಪ್ಯಾರೆಸಿಟಮಾಲ್‌ನ ಸರಕುಗಳನ್ನು 87 ದೇಶಗಳಿಗೆ ವಾಣಿಜ್ಯ ಆಧಾರದ ಮೇಲೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.

Almost 50% Of The Dead Are Below Age 60

ಇದೇ ವೇಳೆ ದೇಶದಲ್ಲಿ 24 ಗಂಟೆಗಳಲ್ಲಿ 1,993 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರಂತೆ ಒಟ್ಟಾರೆ ಸೋಂಕಿತರ ಸಂಖ್ಯೆ 35043ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನದಲ್ಲಿ 73 ಮಂದಿ ಬಲಿಯಾದಿದ್ದು, ಸಾವಿನ ಸಂಖ್ಯೆ ಕೂಡ 1,147ಕ್ಕೆ ಏರಿಕೆಯಾಗಿದೆ.

24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು24 ಗಂಟೆಯಲ್ಲಿ 6654 ಕೊರೊನಾ ಕೇಸ್ ಪತ್ತೆ, 137 ಸಾವು

ಲಾಕ್'ಡೌನ್ ತೆರವಿಗೆ ಇನ್ನೂ 3 ದಿನಗಳು ಬಾಕಿ ಇರುವಾಗಲೇ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಶುಕ್ರವಾರ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಮಹಾಮಾರಿ ವೈರಾಣುವಿಗೆ ಈ ವರೆಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 10,478 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಗುಜರಾತ್ 4,082, ದೆಹಲಿ 3,515, ಮಧ್ಯಪ್ರದೇಶ 2,660, ರಾಜಸ್ತಾನ 2,438, ಉತ್ತರಪ್ರದೇಶ 2,203, ತಮಿಳುನಾಡು 2,162, ಆಂಧ್ರಪ್ರದೇಶದಲ್ಲಿ 403 ಜನರಲ್ಲಿ ಸೋಂಕು ಪತ್ತೆಯಾಗಿದೆ.

English summary
OF THE 1,075 novel coronavirus (COVID-19) deaths across the country till Thursday, almost half the patients were less than 60 years old. This marks a shift since April 18, when less than 25 per cent of the deaths occurred in this age group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X