Allu Arjun: ಕೋರ್ಟ್‌ ಮೊರೆ ಹೋದ ಅಲ್ಲು ಅರ್ಜುನ್‌, ಬಂಧನ ಭೀತಿ ಕಾರಣ ?

Allu Arjun Case: ಪುಷ್ಪ - 2 ಚಿತ್ರದ ಮೂಲಕ ದೇಶದಾದ್ಯಂತ ಸುದ್ದಿಯಲ್ಲಿ ಇರುವ ಹಾಗೂ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿರುವ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ಗೆ ಇದೀಗ ಭಾರೀ ಸಂಕಷ್ಟವೊಂದು ಎದುರಾಗಿದೆ. ನಟ ಅಲ್ಲು ಅರ್ಜುನ್‌ಗೆ ಬಂಧನದ ಭೀತಿಯೂ ಎದುರಾಗಿದೆ ಎನ್ನಲಾಗಿದೆ. ಪುಷ್ಪ - 2 ಸಿನಿಮಾದಲ್ಲಿ ಮಿಂಚಿದ್ದ ಅಲ್ಲು ಅರ್ಜುನ್‌ ಇದೀಗ ಏಕಾಏಕಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಪುಷ್ಪ -2 ಸಿನಿಮಾದ ಗೆಲುವಿನ ಸಂತೋಷದಲ್ಲಿ ಇರುವ ಅಲ್ಲು ಅರ್ಜುನ್‌ಗೆ ಬಂಧನ ಭೀತಿ ಎದುರಾಗಿದೆ ಎನ್ನಲಾಗಿದೆ. ಹೀಗಾಗಿ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.

ಪುಷ್ಪ-2 ಚಿತ್ರದ ಯಶಸ್ಸಿನ ಉತ್ತುಂಗದಲ್ಲಿ ಇರುವ ಅಲ್ಲು ಅರ್ಜುನ್‌ಗೆ ಇದೀಗ ಹೊಸ ಸಂಕಷ್ಟ ಶುರುವಾಗಿದೆ. ಅವರ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದು ಸಾಗುತ್ತಿದೆ. ಈ ಸಿನಿಮಾ ಉತ್ತರ ಭಾರತದಲ್ಲೂ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಆದರೆ, ಈ ಸಂತೋಷದ ಸಮಯದಲ್ಲೇ ಅಲ್ಲು ಅರ್ಜುನ್‌ಗೆ ಸಂಕಷ್ಟವೊಂದು ಎದುರಾಗಿದೆ. ಈ ಸಂಕಷ್ಟದಿಂದ ಪಾರಾಗುವುದಕ್ಕೆ ಅವರು ಕೋರ್‌ ಮೊರೆ ಹೋಗಿದ್ದಾರೆ. ಸಂಧ್ಯಾ ಚಿತ್ರಮಂದಿರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಅವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Allu Arjun went to court is it because of fear of arrest

ಅಲ್ಲು ಅರ್ಜುನ್‌ ಅವರು ತೆಲುಗು ಚಿತ್ರರಂಗದಿಂದ ದೇಶದಾದ್ಯಂತ ಸುದ್ದಿಯಾಗಿದ್ದಾರೆ. ಅವರ ಪುಷ್ಪ ಹಾಗೂ ಪುಷ್ಪ 2 ದೇಶದಾದ್ಯಂತ ಹವಾ ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ಪುಷ್ಪ -3 ಬರುತ್ತಾ ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ನಡುವೆ ಸಿನಿಮಾ ಬಿಡುಡೆ ಸಂದರ್ಭದಲ್ಲಿ ನಡೆದ ಘಟನೆಯೊಂದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಹಲವು ಚಿತ್ರಮಂದಿರಗಳಲ್ಲಿ ನೂಕುನುಗ್ಗಲು ಶುರುವಾಗಿತ್ತು. ಈ ನೂಕುನುಗ್ಗಲಿನಿಂದ ಅವರ ಅಭಿಮಾನಿಗಳು ಜೀವ ಕಳೆದುಕೊಂಡಿದ್ದರು. ಇದು ಅಲ್ಲು ಅರ್ಜುನ್‌ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಈ ಸಂಬಂಧ ದೂರು ದಾಖಲಾಗಿತ್ತು.

ತೆಲಂಗಾಣದ ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಕೋರಿ ಅಲ್ಲು ಅರ್ಜುನ್ ಅವರು ಇದೀಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲು ಅರ್ಜುನ್ ಹೀರೋ ಆಗಿ ಅಭಿನಯಿಸಿರುವ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಹೀರೋಹಿನ್ ಆಗಿ ಅಭಿನಯಿಸಿರುವ ಪುಷ್ಪ - 2 ಸಿನಿಮಾದ ಪ್ರೀಮಿಯರ್ ಶೋ ಡಿಸೆಂಬರ್ 4ಕ್ಕೆ ಬಿಡುಗಡೆಯಾಗಿತ್ತು. ಈ ಸಂದರ್ಭದಲ್ಲಿ ಹೈದರಾಬಾದ್‌ನ​​ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳೊಂದಿಗೆ ಅಲ್ಲು ಅರ್ಜುನ್‌ ಅವರು ಪುಷ್ಪ-2 ನೋಡುವುದಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು.

ಅಲ್ಲು ಅರ್ಜುನ್‌ ಅವರನ್ನು ನೋಡುವುದಕ್ಕೆ ನೂರಾರು ಜನ ಇಲ್ಲಿ ಸೇರಿದ್ದರು. ಈ ನೂಕು ನುಗ್ಗಲಿನಲ್ಲಿ ಸಂಭವಿಸಿದ ಅವಘಡದಲ್ಲಿ ರೇವತಿ ಎನ್ನುವ ಮಹಿಳೆ ಸಾವನ್ನಪ್ಪಿದ್ದರು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಈ ಕೇಸ್‌ನಲ್ಲಿ ಅಲ್ಲುಅರ್ಜುನ್ ಅವರನ್ನು ಸಹ ಪೊಲೀಸರು ಆರೋಪಿಯನ್ನಾಗಿ ಮಾಡಿದ್ದಾರೆ.

Allu Arjun went to court is it because of fear of arrest

ಈ ಕೇಸ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಅಂತ ಅಲ್ಲು ಅರ್ಜುನ್‌ ಅವರು ಅರ್ಜಿ ಸಲ್ಲಿಸಿರುವುದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+