ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಜಗನ್ನಾಥ ವಾರ್ಷಿಕ ರಥ ಯಾತ್ರೆಗೆ ಸಕಲ ಸಿದ್ಧತೆ

By Mahesh
|
Google Oneindia Kannada News

ಪುರಿ, ಜುಲೈ 13: ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಭಕ್ತರು ಸಜ್ಜಾಗಿದ್ದಾರೆ. 9 ದಿನಗಳ ವಾರ್ಷಿಕ ಜಗನ್ನಾಥ ಯಾತ್ರೆಯು ಜುಲೈ 14ರಿಂದ ಆರಂಭಗೊಳ್ಳಲಿದೆ.

ರಥಯಾತ್ರೆ ಸುಗುಮವಾಗಿ ಸಾಗಲು ಸಕಲ ರೀತಿಯಿಂದ ಪುರಿ ನಗರಿ ಸಜ್ಜಾಗಿದೆ. ದೇಗುಲದ ಸುತ್ತಾ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ರಥಯಾತ್ರೆ ನಿಮಿತ್ತ ಪುರಿ ಜಗನ್ನಾಥನ ಪುರಾಣ

ಗುಂಡಿಚಾ ಯಾತ್ರಾ, ಬಹುದಾ ಯಾತ್ರಾ,ಸುನಾವೇಶ, ನವಯೌವನ ದರ್ಶನ ಹಾಗೂ ನೀಲದ್ರಿಬಿಜೆ ಮೆರವಣಿಗೆಗಳು ಸಾಗಲಿವೆ. 140 ಪ್ಲಾಟೂನ್ ಪೊಲೀಸ್ ಪಡೆ, 1,000ಕ್ಕೂ ಅಧಿಕ ಅಧಿಕಾರಿಗಳನ್ನು ರಥಯಾತ್ರೆ ಭದ್ರತೆಗಾಗಿ ನಿಯೋಜಿಸಲಾಗಿದೆ.

All you should know about Jagannath Rath Yatra to start from July 14

ಪ್ರತಿ ವರ್ಷ ಆಶಾಢ ಶುಕ್ಲ ಪಕ್ಷದ ದ್ವಿತೀಯದಂದು ಜುಲೈ 14ರಂದು ದೇಗುಲದ ಮುಂದೆ ನಿಂತಿರುವ ಮೂರು ರಥಗಳನ್ನು ಎಳೆಯಲಾಗುತ್ತದೆ. ಅನೇಕ ಸಂಪ್ರದಾಯಬದ್ಧ ಆಚರಣೆಗಳು ನಡೆಯಲಿವೆ.

ರಥ ಯಾತ್ರೆಯ ಭಾಗವಾಗಿ ಜಗನ್ನಾಥ, ಬಾಲಭದ್ರ ಹಾಗೂ ಸುಭದ್ರರ ಉತ್ಸವ ಮೂರ್ತಿಗಳನ್ನು ದೇವಾಲಯಗಳ ಆಕಾರದಲ್ಲಿ ನಿರ್ಮಿಸಿ ಸಿಂಗರಿಸಲಾದ ಮೂರು ರಥಗಳಲ್ಲಿ ಮೆರವಣಿಗೆ ಮಾಡುತ್ತ ಗುಂಡಿಚಾ ಮಂದಿರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.

ಈ ಆಚರಣೆಯ ಕುರಿತು ಬ್ರಹ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ ಹಾಗೂ ಕಪಿಲ ಸಂಹಿತದಲ್ಲಿ ಉಲ್ಲೇಖಿಸಲಾಗಿರುವುದನ್ನು ಕಾಣಬಹುದು.

English summary
The nine-day annual festival of Jagannath Rath Yatra festival will begin tomorrow and it is expected that lakhs of devotees would congregate in the pilgrim town to witness the chariot festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X