
ಮುಂಬೈ ವಿಮಾನ ನಿಲ್ದಾಣದಲ್ಲಿ ದಿಢೀರ್ ಸ್ಥಗಿತಗೊಂಡ ಸೇವೆಗಳು, ಕೌಂಟರ್‌ಗಳಲ್ಲಿ ಸರತಿ ಸಾಲು, ಪ್ರಯಾಣಿಕರ ಪರದಾಟ
ಮುಂಬೈ, ನವೆಂಬರ್ 12: ಮುಂಬೈನ T2 ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಎಲ್ಲಾ ವ್ಯವಸ್ಥೆಗಳು ಸ್ಥಗಿತಗೊಂಡಿವೆ. ಪ್ರಯಾಣಿಕರು ಬ್ಯಾಗೇಜ್ ಡ್ರಾಪ್‌ಗಾಗಿ ಸುಮಾರು ಒಂದು ಗಂಟೆ ಕಾಯುತ್ತಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಡಿಐಜಿ ಶ್ರೀಕಾಂತ್ ಕಿಶೋರ್ ಮಾತನಾಡಿ, ಎಲ್ಲಾ ಕೌಂಟರ್‌ಗಳಲ್ಲಿ ಸರತಿ ಸಾಲು ಇದೆ. ಆಪ್ಟಿಕ್ ಫೈಬರ್ ಕೇಬಲ್ ಹಾಳಾಗಿದ್ದರಿಂದ ಸಿಸ್ಟಮ್ ಬ್ಲ್ಯಾಕ್ ಔಟ್ ಆಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂಬೈ: ದಕ್ಷಿಣ ಕೊರಿಯಾದ ಮಹಿಳಾ ಯೂಟ್ಯೂಬರ್ಗೆ ರಸ್ತೆಯಲ್ಲೇ ಕಿರುಕುಳ
ಎಲ್ಲಾ ವಿಮಾನಯಾನ ಸಂಸ್ಥೆಗಳ ಮೇಲೆ ಇದು ಪರಿಣಾಮ ಬೀರಿವೆ ಎಂದು ವಿಸ್ತಾರಾ ವಕ್ತಾರ ತಿಳಿಸಿದ್ದಾರೆ.
ಆಕಾಶ ಏರ್‌ನ ವಕ್ತಾರರು ಸಹ ವಿಮಾನಯಾನ ಸೇವೆಗಳ ಮೇಲೆ ಆಗಿರುವ ಪರಿಣಾಮವನ್ನು ದೃಢಪಡಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ವಾಹಕರು ಈ ಸಮಸ್ಯೆಯನ್ನು ಆದಷ್ಟು ಬೇಗನೆ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
'ನಾವು ಪ್ರಯಾಣಿಕರ ಅಗತ್ಯಗಳಿಗೆ ಅನುಗುಣವಾಗಿ ಸಹಾಯ ಮಾಡುತ್ತಿದ್ದೇವೆ' ಎಂದು ವಿಮಾನ ನಿಲ್ದಾಣದ ವಕ್ತಾರರು ಹೇಳಿದರು.
We understand that delays are certainly uncomfortable. Our team is working diligently to minimize the inconvenience. They'll be in touch with you for further updates.
— Air India (@airindiain) December 1, 2022
ಜನರು ತಮ್ಮ ಸಂಕಷ್ಟಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಏರ್ ಇಂಡಿಯಾದ ಅನೇಕ ಬಳಕೆದಾರರಿಗೆ ಪ್ರತಿಕ್ರಿಯಿಸಿದೆ. ಅವರ ತಂಡವು, ಅನಾನುಕೂಲತೆಯನ್ನು ಮೊಟಕುಗೊಳಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.
'ವಿಳಂಬವು ಖಂಡಿತವಾಗಿಯೂ ಅಹಿತಕರವೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ತಂಡವು ಅನಾನುಕೂಲತೆಯನ್ನು ಕಡಿಮೆ ಮಾಡಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಹೆಚ್ಚಿನ ಅಪ್‌ಡೇಟ್‌ಗಾಗಿ ಅವರು ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತಾರೆ' ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ಮುಂಬೈ ವಿಮಾನದ ನಿಲ್ದಾಣದ ಅಧಿಕಾರಿಗಳ ಪ್ರಕಾರ ಕೇಬಲ್ ಹಾಳಾಗಿದ್ದರಿಂದ ಸಿಸ್ಟಮ್‌ನಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ, ಅಡಚಣೆಗೆ ನಿಜವಾದ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.