Manipur violence: ಸಹಜಸ್ಥಿತಿಯತ್ತ ಮಣಿಪುರ: ಇಂದಿನಿಂದ ಎಲ್ಲಾ ಶಾಲೆಗಳು ಪುನರಾರಂಭ
ಇಂಫಾಲ ಅಕ್ಟೋಬರ್ 6: ಎಲ್ಲಾ ರಾಜ್ಯ ಸರ್ಕಾರ/ರಾಜ್ಯ ಸರ್ಕಾರಿ ಅನುದಾನಿತ/ಖಾಸಗಿ ಅನುದಾನ ರಹಿತ ಶಾಲೆಗಳನ್ನು ಅಕ್ಟೋಬರ್ 6ರಿಂದ ಪುನರಾರಂಭಿಸಲಾಗುವುದು ಎಂದು ಮಣಿಪುರ ಸರ್ಕಾರ ಗುರುವಾರ ಹೇಳಿದೆ. ರಾಜಧಾನಿ ಇಂಫಾಲದಲ್ಲಿ ಹೊಸ ಹಿಂಸಾಚಾರದಿಂದಾಗಿ ರಾಜ್ಯ ಶಿಕ್ಷಣ ಇಲಾಖೆಯು ಈ ಶಾಲೆಗಳನ್ನು ಸೆಪ್ಟೆಂಬರ್ 27 ಮತ್ತು ಸೆಪ್ಟೆಂಬರ್ 29 ರಂದು ತಾತ್ಕಾಲಿಕವಾಗಿ ಮುಚ್ಚಲು ನಿರ್ದೇಶಿಸಿತ್ತು.
ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ನಂತರ ಮಣಿಪುರದಲ್ಲಿ ಶಾಲೆಗಳನ್ನು ಮುಚ್ಚಲಾಯಿತು. ಹಿಂಸಾಚಾರದಿಂದಾಗಿ ಒಂದೆರಡು ತಿಂಗಳ ಕಾಲ ಮುಚ್ಚಲ್ಪಟ್ಟ ನಂತರ ಜುಲೈನಲ್ಲಿ ಮಣಿಪುರದಾದ್ಯಂತ ಶಾಲೆಗಳನ್ನು ಪುನಃ ತೆರೆಯಲಾಯಿತು. ಕಳೆದ ಸೆಪ್ಟೆಂಬರ್ 27 ರಂದು ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿ ಅವರು ಕೊಲ್ಲಲ್ಪಟ್ಟರು ಎಂದು ಕಂಡುಬಂದ ನಂತರ ನ್ಯಾಯಕ್ಕಾಗಿ ಒತ್ತಾಯಿಸಿ ವಿದ್ಯಾರ್ಥಿಗಳ ಆಂದೋಲನದಿಂದಾಗಿ ಮತ್ತೆ ಶಾಲೆಗಳನ್ನು ಮುಚ್ಚಲಾಯಿತು.

ಮಣಿಪುರದ ಎಲ್ಲಾ ರಾಜ್ಯ ಸರ್ಕಾರ/ರಾಜ್ಯ ಸರ್ಕಾರಿ ಅನುದಾನಿತ/ಖಾಸಗಿ ಅನುದಾನ ರಹಿತ ಶಾಲೆಗಳು 6ನೇ ಅಕ್ಟೋಬರ್ 2023 ರಿಂದ ಪುನರಾರಂಭಗೊಳ್ಳಲಿವೆ ಎಂದು ರಾಜ್ಯ ಶಿಕ್ಷಣ ನಿರ್ದೇಶಕ (ಶಾಲೆಗಳು) ಎಲ್ ನಾದಕುಮಾರ್ ಸಿಂಗ್ ಗುರುವಾರ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆಯು ಹೀಗೆ ಹೇಳುತ್ತದೆ, "ಮಣಿಪುರದಲ್ಲಿರುವ ಎಲ್ಲಾ ರಾಜ್ಯ ಸರ್ಕಾರ/ ರಾಜ್ಯ ಸರ್ಕಾರಿ ಅನುದಾನಿತ/ಖಾಸಗಿ ಅನುದಾನರಹಿತ ಶಾಲೆಗಳು ಅಕ್ಟೋಬರ್ 6ರಿಂದ ಪುನಃ ತೆರೆಯಲ್ಪಡುತ್ತವೆ. ಇದನ್ನು ಸರ್ಕಾರದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ'' ಎಂದು ತಿಳಿಸಿದೆ.
ಜುಲೈ 6 ರಂದು ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳಾದ ಲುವಾಂಗ್ಬಿ ಲಿಂಥೋಯಿಂಗಂಬಿ ಹಿಜಾಮ್ (17) ಮತ್ತು ಫಿಜಾಮ್ ಹೇಮಂಜಿತ್ (20) ಅವರ ಮೃತದೇಹಗಳ ಫೋಟೋಗಳು ವೈರಲ್ ಆದ ಬಳಿಕ ಶಾಲೆಗಳನ್ನು ಮುಚ್ಚಲಾಯಿತು. ಈ ಫೋಟೋಗಳು ಸೆಪ್ಟೆಂಬರ್ 25 ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ಪ್ರದೇಶದಲ್ಲಿ ಹೊಸ ಘರ್ಷಣೆಗಳು ನಡೆದವು. ಅಕ್ಟೋಬರ್ 1 ರಂದು ಇಬ್ಬರು ವಿದ್ಯಾರ್ಥಿಗಳ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೇತೃತ್ವದ ಭದ್ರತಾ ಪಡೆಗಳ ತಂಡವು ನಾಲ್ವರನ್ನು ಬಂಧಿಸಿದೆ.
ಇಬ್ಬರು ವಿದ್ಯಾರ್ಥಿಗಳು ನಾಪತ್ತೆ!
ಜುಲೈನಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಶವಗಳನ್ನು ತೋರಿಸುವ ಫೋಟೋಗಳು ಸೆಪ್ಟೆಂಬರ್ 26 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಮಣಿಪುರ ಸರ್ಕಾರವು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿತ್ತು.
"ವಿದ್ಯಾರ್ಥಿಗಳಾದ ಫಿಜಾಮ್ ಹೇಮಂಜಿತ್ ಮತ್ತು ಹಿಜಾಮ್ ಲಿಂತೋಯಿಂಗಂಬಿ ಅವರ ಅಪಹರಣ ಮತ್ತು ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಇಂದು ಚುರಾಚಂದ್‌ಪುರದಿಂದ ಬಂಧಿಸಲಾಗಿದೆ" ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯ ಈ ಹಿಂದೆ ತಿಂಗಳುಗಟ್ಟಲೆ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಇದರಿಂದಾಗಿ ಮೇ 4ರಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಎರಡು ತಿಂಗಳ ವಿರಾಮದ ನಂತರ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಮಾನ್ಯ ತರಗತಿಗಳನ್ನು ಜುಲೈ 4ರಂದು ಪುನರಾರಂಭಿಸಲಾಗಿದೆ.












Click it and Unblock the Notifications