2022ರೊಳಗೆ ದೇಶದ ಎಲ್ಲ ಮನೆಗೂ ವಿದ್ಯುತ್ ಸಂಪರ್ಕ : ಪಿಯೂಷ್ ಗೋಯಲ್

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಆಗಸ್ಟ್ 10: ಆಗಸ್ಟ್ 15, 2022ರೊಳಗೆ ದೇಶದ ಎಲ್ಲ ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇರುತ್ತದೆ.ಮುಂದಿನ ವರ್ಷದ ಮೇ ತಿಂಗಳಿಗೂ ಮುನ್ನ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಗುರುವಾರ ಲೋಕಸಭೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಆಗಸ್ಟ್ 15, 2022 ಗಡುವಾಗಿ ಇರಿಸಿಕೊಂಡಿರುವ ಸರಕಾರ ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಿದೆ. ಮತ್ತು ಮೇ 2018ರೊಳಗೆ ಎಲ್ಲ ಹಳ್ಳಿಗಳಲ್ಲೂ ವಿದ್ಯುದ್ದೀಕರಣ ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದರು.

ವಿದ್ಯುತ್ ಉಳಿತಾಯ : 2ನೇ ಸ್ಥಾನದಲ್ಲಿ ಕರ್ನಾಟಕ

ಈ ಹಿಂದೆ ಇರಿಸಿಕೊಂಡಿದ್ದ ಗಡುವಿಗೂ ಮುಂಚೆಯೇ ಗುರಿ ತಲುಪುತ್ತಿರುವುದು ಸಂತೋಷವಾಗಿದೆ ಎಂದು ಸಚಿವ ಗೋಯಲ್ ಹೇಳಿದ್ದಾರೆ.

ಪ್ರಶ್ನಾ ಸಮಯದಲ್ಲಿ ಮಾತನಾಡಿದ ಸಚಿವರು, ಡಿಸ್ಕಾಂಗಳ ಸಂಗ್ರಹಿತ ನಷ್ಟವು 2012-13ರಲ್ಲಿ 2,53,700 ಕೋಟಿ ಇದ್ದದ್ದು 2014-15ರಲ್ಲಿ 3,60,736 ಕೋಟಿ ಆಗಿದೆ ಎಂದರು.

All households to be electrified before 2022, says Piyush Goyal

ಪವರ್ ಫೈನಾನ್ಸ್ ಕಾರ್ಪೋರೇಷನ್ ನ (ಪಿಎಫ್ ಸಿ) ರಾಜ್ಯಗಳ ವಿದ್ಯುತ್ ಬಳಕೆ ಪ್ರಮಾಣದ ವರದಿ ಪ್ರಕಾರ, ಡಿಸಾಂನ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ ಕ್ರಮವಾಗಿ 2,53,700 ಕೋಟಿ ಮತ್ತು 3,04,228 ಕೋಟಿಯಿಂದ 2014-15ಕ್ಕೆ 3,60,736 ಕೋಟಿ ಮತ್ತು 4,06,825 ಕೋಟಿಗೆ ಏರಿಕೆಯಾಗಿದೆ.

"ರಾಜ್ಯ ಸರಕಾರಗಳ ನೆರವಿನಿಂದ ಈ ಸನ್ನಿವೇಶವನ್ನು ಉತ್ತಮಗೊಳಿಸುತ್ತೇವೆ ಎಣ್ಬ ನಂಬಿಕೆಯಿದೆ" ಎಂದು ಸಚಿವರು ಹೇಳಿದ್ದಾರೆ.

ವಿದ್ಯುತ್ ನಿಂದ ಬೆಳಗುತ್ತಿದೆಯೇ ಗ್ರಾಮೀಣ ಭಾರತ?

ಉಜ್ವಲ್ ಡಿಸ್ಕಾಂ ಆಶ್ಯುರೆನ್ಸ್ ಯೋಜನಾ ( UDAY) ಎರಡು ವರ್ಷದ ಹಿಂದೆ ನವೆಂಬರ್ ನಲ್ಲಿ ಆರಂಭಿಸಿದ ನಂತರ ರಾಜ್ಯಗಳ ನಷ್ಟ ಪ್ರಮಾಣವು ಅಂದಾಜು ಹನ್ನೊಂದು ಸಾವಿರ ಕೋಟಿ ರುಪಾಯಿಯು 2015-16ರಿಂದ 2016-17ಕ್ಕೆ ಕಡಿಮೆ ಆಗಿರುವುದಾಗಿ ವರದಿ ಆಗಿದೆ. ಎಂದು ಅವರು ಹೇಳಿದ್ದಾರೆ.

2012-13ರಿಂದ 2016-17ರ ಮಧ್ಯೆ ಸಾಂಪ್ರದಾಯಿಕ ಮೂಲಗಳಿಂದ ಉತ್ಪಾದನೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣವು 99209.5 ಮೆಗಾ ವಾಟ್ ಹೆಚ್ಚಳವಾಗಿದೆ. ವಿದ್ಯುತ್ ಉತ್ಪಾದನೆ ಪ್ರಮಾಣ ಹಾಗೂ ಡಿಸ್ಕಾಂಗಳ ನಷ್ಟ ಅಥವಾ ಸಾಲದ ಮಧ್ಯೆ ಯಾವುದೇ ಸಂಬಂಧ ಇಲ್ಲ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಗೋಯಲ್, ಈ ಹಿಂದೆ ಮಾಡಿದ ಪ್ರಯತ್ನಗಳಿಗೆ ಡಿಸ್ಕಾಂಗಳ ಪ್ರತಿಕೂಲ ಆರ್ಥಿಕ ಸ್ಥಿತಿ ಮಿತಿಯಾಗಿತ್ತು. ಏಕೆಂದರೆ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ಯಾವುದೇ ಸಾಧನೆ ಮಾಡಿರಲಿಲ್ಲ ಎಂದರು.

ಸಂಗ್ರಹಿತ ನಷ್ಟ ಹಾಗೂ ಸಾಲ ಹೆಚ್ಚಾಗಲು ಹಲವಾರು ಕಾರಣಗಳಿವೆ. ಯೋಜನೆಗಳ ಮಿತಿ, ರಾಜ್ಯಗಳ ಭಾಗವಹಿಸುವಿಕೆಯ ಮಿತಿ ಹಾಗೂ ಡಿಸ್ಮಾಂಗಳ ಕಾರ್ಯ ಚಟುವಟಿಕೆಯ ಬಾಳಿಕೆ ಇಲ್ಲದ್ದು ಸೇರಿ ನಾನಾ ಕಾರಣಗಳಿವೆ ಎಂದು ಅವರು ತಿಳಿಸಿದರು.

ಗೋಯಲ್ ರನ್ನು ಪ್ರೊಫೆಸರ್ ಎನ್ನಬೇಕು
ವಿದ್ಯುತ್ ವಲಯದಲ್ಲಿನ ಗೋಯಲ್ ಅವರ ಜ್ಞಾನಕ್ಕೆ "ಪ್ರೊಫೆಸರ್" ಅಂತ ಕರೆಯಬೇಕು ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ಸಲಹೆ ಮಾಡಿದರು. ಇದು ಸಂಸತ್ ನಲ್ಲಿ ನಗೆಯುಕ್ಕಿಸಿತು.

ವಿದ್ಯುತ್ ಉಳಿಸಲು ಉಜಾಲ ಯೋಜನೆಯಲ್ಲಿ ಸರಕಾರದ ಶ್ರಮವಿದು

ಪ್ರಶ್ನಾ ಕಾಲದಲ್ಲಿ ಸಚಿವರು ಗ್ರಾಮೀಣ ವಿದ್ಯುದ್ದೀಕರಣದ ಸ್ಥಿತಿ-ಗತಿ ಬಗ್ಗೆ ಹಾಗೂ ಪರಿಸ್ಥಿತಿಯನ್ನು ಸುಧಾರಿಸಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸುದೀರ್ಘವಾದ ಭಾಷಣ ಮಾಡಿದ ನಂತರ, ಸ್ಪೀಕರ್ ಈ ರೀತಿಯ ಮೆಚ್ಚುಗೆ ಸೂಚಿಸಿದರು.

Narendra Modi announces, by next year no village in India will be without electricity

ಸಚಿವರ ಹೆಸರನ್ನು ಪ್ರೊಫೆಸರ್ ಪಿಯೂಷ್ ಗೋಯಲ್ ಎಂದು ಬದಲಾಯಿಸಬೇಕು ಎಂಬ ಸ್ಪೀಕರ್ ರ ಮೆಚ್ಚುಗೆಯ ಮಾತು ಸಂಸತ್ ನಲ್ಲಿ ನಗೆಯುಕ್ಕಿಸಿತು.ಪಿಟಿಐ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
All households in the country will be electrified before August 15, 2022 and all villages before May next year, the Lok Sabha was informed on Thursday.
Please Wait while comments are loading...