Rain: ಅಪಾಯದ ಮಟ್ಟ ಮೀರಿದ ಗಂಗಾನದಿ ಉತ್ತರಾಖಂಡದಲ್ಲಿ ಅಲರ್ಟ್, ಮತ್ತೆ ಹೆಚ್ಚಾದ ದೆಹಲಿಯ ಯಮುನಾ ನದಿ ನೀರಿನ ಮಟ್ಟ!
ದೆಹಲಿ ಜುಲೈ 17: ದೇಶದ ಹಲವೆಡೆ ಭಾರೀ ಮಳೆ, ಪ್ರವಾಹ ಜನರನ್ನು ಇನ್ನಿಲ್ಲಂದತೆ ತೊಂದರೆಗೀಡು ಮಾಡಿದೆ. ಗಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಉತ್ತರಾಖಂಡ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ದೆಹಲಿಯಲ್ಲಿ ಯಮುನಾ ಮತ್ತೆ ಏರಿಕೆಯಾಗಿದ್ದು ಆತಂಕವನ್ನು ಸೃಷ್ಟಿ ಮಾಡಿದೆ. ಮುಂಗಾರು ಬಿರುಸಿಗೆ ಉತ್ತರ ಭಾರತ ನಲುಗಿ ಹೋಗಿದೆ.
ಉತ್ತರಾಖಂಡ್‌ನ ಹಲವೆಡೆ ಮಳೆ ಸುರಿದಿದ್ದು, ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಆದರೆ ದೆಹಲಿಯ ಪ್ರವಾಹ ಪರಿಸ್ಥಿತಿ ಭಾನುವಾರ ಸುಧಾರಿಸಿದ್ದು, ಭೈರಾನ್ ಮಾರ್ಗ್ ಸೇರಿದಂತೆ ಕೆಲವು ರಸ್ತೆಗಳು ವಾಹನ ಸಂಚಾರಕ್ಕೆ ತೆರೆದುಕೊಂಡಿವೆ.

ಉತ್ತರಾಖಂಡದ ದೇವಪ್ರಯಾಗದಲ್ಲಿ ಗಂಗಾ ನದಿಯು ಅಪಾಯದ ಮಟ್ಟ ದಾಟಿದೆ ಮತ್ತು ಅಲಕನಂದಾ ನದಿಗೆ ಅಣೆಕಟ್ಟಿನಿಂದ ಭಾರೀ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದರಿಂದ ಹರಿದ್ವಾರದಲ್ಲಿ ನದಿ ಸಮೀಪದಲ್ಲಿ ವಾಸುವವ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಮುಂದಿನ ಐದು ದಿನಗಳಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಉತ್ತರಾಖಂಡದಲ್ಲಿ ಹೆಚ್ಚು ಮಳೆ
ಉತ್ತರಾಖಂಡದ ಎಲ್ಲಾ 13 ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವುದರಿಂದ ಆರೆಂಜ್ ಅಲರ್ಟ್ ಅನ್ನು ಡೆಹ್ರಾಡೂನ್ ಹವಾಮಾನ ಕೇಂದ್ರ ನೀಡಿದೆ. ಭಾನುವಾರ ಉತ್ತರಾಖಂಡದ ಹಲವು ಸ್ಥಳಗಳಲ್ಲಿ ಅಧಿಕ ಮಳೆ ಸುರಿದಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳಲ್ಲಿ ಭೂಕುಸಿತ ಉಂಟಾಗಿದೆ.

ಭೂಕುಸಿ, ಚರಂಡಿ ನೀರು ಉಕ್ಕಿ ಹರಿಯುತ್ತಿರುವುದರಿಂದ ವಿದ್ಯುತ್ ಸರಬರಾಜು ಕೂಡ ಬಂದ್ ಆಗಿದೆ. ಸದ್ಯ ಉತ್ತರಖಂಡದಲ್ಲಿ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಇನ್ನು ಚಮೋಲಿ ಜಿಲ್ಲೆಯ ಜೋಶಿಮಠದ ನೀತಿ ಘಾಟಿಯಲ್ಲಿ ಗಿರ್ತಿ ಗಂಗಾ ನದಿಗೆ ಹರಿಯುವ ಅವಶೇಷಗಳು ಮತ್ತು ಹೆಚ್ಚುವರಿ ನೀರಿನಿಂದ ಜೋಶಿಮಠ-ಮಲಾರಿ ರಸ್ತೆಯ ಸೇತುವೆಯ ತಗ್ಗು ಕೂಡ ಹಾನಿಯಾಗಿದೆ.
ಅಲ್ಲದೆ, ಪಿಥೋರಗಢ್ ಜಿಲ್ಲೆಯ ಧಾರ್ಚುಲಾದಲ್ಲಿ ಕಾಳಿ ನದಿಯಲ್ಲಿ ನೀರಿನ ಮಟ್ಟ 889 ಮೀಟರ್‌ನಷ್ಟಾಗಿದ್ದು ಎಚ್ಚರಿಕೆಯ ಮಟ್ಟವನ್ನು ದಾಟಿದೆ. ಗಂಗಾ ಸೇರಿದಂತೆ ಹಲವಾರು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಮುನಾ ಪ್ರವಾಹ
ಭಾನುವಾರ ಸಂಜೆ ದೆಹಲಿಯ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 13.2 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇಂದು ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದೆ. ಇಂದು ಕೂಡ ರಾಷ್ಟ್ರ ರಾಜಧಾನಿಯಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#WATCH | Delhi: Slight increase in Yamuna's water level again. At 7 am, water level was recorded at 205.48 m
— ANI (@ANI) July 17, 2023
Water level was 205.45 m for the last 3 hours before 7 am
(Drone visuals from Mayur vihar Phase 1) pic.twitter.com/ohGrJBkmaP
ಸೋಮವಾರ ಬೆಳಗ್ಗೆ ಯಮುನಾ ನದಿಯ ನೀರಿನ ಮಟ್ಟ 205.45 ಮೀಟರ್‌ಗಳಷ್ಟಿದ್ದು, ಅಪಾಯದ ಮಟ್ಟ 205.33ಕ್ಕಿಂತ ಹೆಚ್ಚಿದೆ. ಬೆಳಗ್ಗೆ 7 ಗಂಟೆಗೆ ನೀರಿನ ಮಟ್ಟ ಸ್ವಲ್ಪಮಟ್ಟಿಗೆ 205.48 ಮೀಟರ್‌ಗೆ ಏರಿಕೆಯಾಗಿದೆ.
ಸಂಜೆಯ ಮಳೆಯು ಜಲಾವೃತ ಸಮಸ್ಯೆಗಳನ್ನು ಮರಳಿ ತಂದಿದ್ದರಿಂದ ಮತ್ತೆ ರಸ್ತೆಗಳು ಪ್ರವಾಹದಲ್ಲಿ ಮುಳುಗಿವೆ. ಯಮುನಾ ನದಿಯ ನೀರಿನ ಮಟ್ಟ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು ಅಪಾಯದ ಮಟ್ಟಕ್ಕೆ ಮರಳಿದೆ ಎಂಬ ವರದಿಗಳಾಗಿವೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಪ್ರವಾಹ ಪೀಡಿತ ಕುಟುಂಬಗಳಿಗೆ ತಲಾ 10,000 ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.
Capacity of Wazirabad Water treatment plant is 134 MGD. It has started producing 54 MGD. The equipment got most damaged in this plant. Hopefully, it shud start working on full capacity soon. Engineers are working 24x7
— Arvind Kejriwal (@ArvindKejriwal) July 17, 2023
ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ವಜೀರಾಬಾದ್ ನೀರು ಶುದ್ಧೀಕರಣ ಘಟಕ ಭಾಗಶಃ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಈ ಸೌಲಭ್ಯ ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಬೇಕು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಡಳಿತ ಹೆಚ್ಚಿನ ಎಚ್ಚರಿಕೆಯನ್ನು ನೀಡಿರುವುದರಿಂದ ತಗ್ಗು ಪ್ರದೇಶಗಳಿಗೆ ಪ್ರಯಾಣದ ಯೋಜನೆಯನ್ನು ಮುಂದೂಡುವಂತೆ ದೆಹಲಿ ಟ್ರಾಫಿಕ್ ಪೊಲೀಸರು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
ಉತ್ತರ ಪ್ರದೇಶ ಮಳೆ-ಸಂಬಂಧಿತ ಸಾವುಗಳು
ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪರಿಹಾರ ಆಯೋಗ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಥುರಾದಲ್ಲಿ ಯಮುನೆಯ ನೀರಿನ ಮಟ್ಟ ಅಪಾಯದ ಗಡಿ ದಾಟಿದ ನಂತರವೂ ಏರಿಕೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹವಾಮಾನ ಕಚೇರಿಯ ಪ್ರಕಾರ, 24 ಗಂಟೆಗಳಲ್ಲಿ ರಾಜ್ಯದಲ್ಲಿ 1.02 ಸೆಂಟಿಮೀಟರ್ ಸಾಮಾನ್ಯ ಮಳೆ ದಾಖಲಾಗಿದೆ. ರಾಜ್ಯದ 75 ಜಿಲ್ಲೆಗಳ ಪೈಕಿ 32 ಜಿಲ್ಲೆಗಳಲ್ಲಿ ಹೆಚ್ಚುವರಿ ಮಳೆ ದಾಖಲಾಗಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಒಡಿಶಾ ಮಳೆ
ಒಡಿಶಾದಲ್ಲಿ ಈಗಾಗಲೇ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಪೂರ್ವ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿರುವುದರಿಂದ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಭಾನುವಾರ ತಿಳಿಸಿದೆ. ಭಾರೀ ಮಳೆಯಿಂದಾಗಿ ಭುವನೇಶ್ವರದಲ್ಲಿ ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ. ಅನೇಕ ಕೊಳೆಗೇರಿಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಜುಲೈ 17 ರಂದು ಬೆಳಿಗ್ಗೆ 8.30 ರಿಂದ ಸುಂದರ್‌ಘರ್, ಕಿಯೋಂಜಾರ್, ಝಾರ್ಸುಗುಡ, ಸಂಬಲ್‌ಪುರ್, ನುವಾಪಾಡಾ, ಕಂಧಮಾಲ್, ಬೋಲಂಗೀರ್, ಸೋನೆಪುರ್, ದಿಯೋಗರ್, ನಬರಂಗಪುರ, ಕೊರಾಪುಟ್, ಮಲ್ಕಾನ್‌ಗಿರಿ, ಕಲಹಂಡಿ ಮತ್ತು ಬರ್ಗಢ್‌ನಲ್ಲಿ 24 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.
-
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications