ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಕೋವಿಡ್‌ ಸೆಲ್ಫ್‌ ಕಿಟ್‌ನ ರಾಯಭಾರಿಯಾದ ಅಕ್ಷಯ್‌ ಕುಮಾರ್‌

|
Google Oneindia Kannada News

ನವದೆಹಲಿ, ಜು.14: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಭಾರತದ ಮೊದಲ ಕೋವಿಡ್‌ ಸೆಲ್ಫ್‌ ಕಿಟ್‌ ಕೋವಿಸೆಲ್ಫ್‌ನ ರಾಯಭಾರಿಯಾಗಿದ್ದಾರೆ.

ಕೋವಿಸೆಲ್ಫ್‌ನ ಜಾಹೀರಾತಿನ ರಾಯಭಾರಿಯಾಗಿರುವ ಅಕ್ಷಯ್‌ ಕುಮಾರ್‌, ಜಾಹೀರಾತಿನ ಮೂಲಕ ಈ ಕೋವಿಡ್‌ ಸೆಲ್ಫ್‌ ಕಿಟ್‌ ಕೋವಿಸೆಲ್ಫ್‌ನ ಮೂಲಕ ಹೇಗೆ ಸ್ವಯಂ ಕೊರೊನಾ ಪರೀಕ್ಷೆಗೆ ಒಳಪಡುವುದು ಎಂಬುದನ್ನು ವಿವರಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ: ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಕರೆರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ: ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಕರೆ

ಈ ಬಗ್ಗೆ ಟ್ವೀಟ್‌ನಲ್ಲಿ ಜಾಹೀರಾತಿನ ವಿಡಿಯೋವನ್ನು ಹಾಕುವ ಮೂಲಕ ಅಕ್ಷಯ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

Akshay Kumar turns brand ambassador for India’s first Covid-19 self-test kit CoviSelf

''ಶಾಲೆಯಲ್ಲಿ ನಾನು ನನ್ನ ಸ್ನೇಹಿತರಿಗೆ ಪರೀಕ್ಷೆಯನ್ನು ಬಂಕ್‌ (ತಪ್ಪಿಸುವುದು) ಮಾಡಲು ಹೇಳುತ್ತಿದ್ದೆ. ಈಗ ನಾನು ಪರೀಕ್ಷೆಯನ್ನು ಮಾಡಿಕೊಳ್ಳಿ ಎಂದು ನನ್ನ ಸ್ನೇಹಿತರನ್ನು ಒತ್ತಾಯ ಮಾಡುತ್ತಿದ್ದೇನೆ,'' ಎಂದು ಹೇಳಿದ್ದಾರೆ.

''ಯಾಕೆಂದರೆ ಸ್ನೇಹ ನಂತರ, ಮೊದಲು ನಮ್ಮ ಸುರಕ್ಷತೆ ಅತ್ಯಗತ್ಯ. ಕೋವಿಡ್ -19 ಪರೀಕ್ಷೆಯನ್ನು ಈಗ ಭಾರತದ ಮೊದಲ ಸ್ವಯಂ ಪರೀಕ್ಷೆ ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ಸುಲಭಗೊಳಿಸಿದೆ,'' ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಇನ್ನು ಪ್ರಸ್ತುತ ಅಕ್ಷಯ್‌ ಕುಮಾರ್‌ ಸುಮಾರು 30 ಬ್ರಾಂಡ್‌ಗಳ ರಾಯಭಾರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ಹಲವಾರು ಸಾಮಾಜಿಕ ಕಳಕಳಿ ಮೂಡಿಸುವ ಜಾಹೀರಾತಿನಲ್ಲೂ ಅಕ್ಷಯ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Akshay Kumar turns brand ambassador for India’s first Covid-19 self-test kit CoviSelf.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X