Akasa Airlines: ಬೆಂಗಳೂರು-ಚೆನ್ನೈ-ಹೈದರಾಬಾದ್ 'ಆಕಾಸ' ವಿಮಾನ ಹಾರಾಟ ರದ್ದು, ಕಾರಣ?
ಬೆಂಗಳೂರು ಅಕ್ಟೋಬರ್ 12: ಭಾರತದ ದೇಶಿಯ ವಿಮಾನಯಾನ ಸಂಸ್ಥೆ ಆಕಾಸ ಏರ್‌ಲೈನ್ಸ್ (Akasa Airlines) ದಿಢೀರನೇ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹಾರಾಟವನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಹಣದ ಮರು ಪಾವತಿಗೆ ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಸಂಸ್ಥೆ ಮತ್ತಷ್ಟು ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಬಿಕ್ಕಟ್ಟಿನಿಂದಾಗಿ ದೇಶೀಯ ವಿಮಾನಯಾನ ಸಂಸ್ಥೆ ಆಕಾಸ ಬೆಂಗಳೂರು- ಚೆನ್ನೈ ಹಾಗೂ ಹೈದರಾಬಾದ್ ನ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಈ ಎರಡು ಮಾರ್ಗಗಳಲ್ಲಿ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿರುವ ಅನೇಕ ಪ್ರಯಾಣಿಕರು ತಾವು ಹತ್ತಬೇಕಿದ್ದ ವಿಮಾನಗಳು ಕಾರ್ಯಾಚರಣೆ ಹಠಾತ್ ನಿಲ್ಲಿಸಿದ್ದರಿಂದ ಆತಂಕಗೊಂಡರು. ಅವರಿಗೆ ಅವರ ಟಿಕೆಟ್ ಹಣ ಮರು ಪಾವತಿಗೆ ಆಗುವುದು ಬಾಕಿ ಇದೆ.

ಬೆಂಗಳೂರಿನಿಂದ ನಿತ್ಯ ಆಕಾಸ ಸಂಸ್ಥೆಯ ಎರಡು ವಿಮಾನಗಳು ತಮಿಳುನಾಡಿನ ಚೆನ್ನೈಗೆ ಹಾಗೂ ತೆಲಂಗಾಣ ರಾಜ್ಯದ ಹೈದರಾಬಾದಿಗೆ ಒಂದು ವಿಮಾನಗಳು ಕಡಿಮೆ ಬೆಲೆಗೆ ಸೇವೆ ನೀಡುತ್ತಿದ್ದವು. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ನಿಂದ ತೆರಳಲು ಬಯಸಿದ್ದವರಿಗೆ ಆಕಾಸ ವಿಮಾನಗಳು ಹಾರಾಟ ನಿಲ್ಲಿಸಿದ್ದರ ಬಗ್ಗೆ ಮಾಹಿತಿ ನೀಡಿತು. ಸದ್ಯ ಆಕಾಸ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎನ್ನಲಾಗಿದೆ.
ಟಿಕೆಟ್ ಹಣ ಮರು ಪಾವತಿಯಾಗಿಲ್ಲ
ಕಳೆದ ತಿಂಗಳು ಸೆಪ್ಟೆಂಬರ್ 15 ರಂದು ಬೆಂಗಳೂರು-ಹೈದರಾಬಾದ್ ವಿಮಾನದಲ್ಲಿ ತೆರಳಲು ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ನೋಯ್ಡಾದ ಗೌರವ್ ಚೌಹಾಣ್ ಅವರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಮಾನಗಳು ರದ್ದಾದ ಬಳಿಕ ಈವರೆಗೆ ನಾನು ಟಿಕೆಟ್ ಹಣದ ಮರುಪಾವತಿ ಆಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರು-ಹೈದರಾಬಾದ್ ನಂತರ ಬೆಂಗಳೂರು-ಚೆನ್ನೈ ವಿಮಾನ ಹಾರಾಟಗಳನ್ನು ಆಕಾಸ ಸ್ಥಗಿತಗೊಳಿಸಿದೆ. ಸದ್ಯ ಕಾರ್ಯಾಚರಣೆ ನಿಲ್ಲಿಸಿದ ಇದೇ ಮಾರ್ಗಗಳಲ್ಲಿ ಆಕಾಸ ಏರ್‌ಲೈನ್ಸ್ 2022ರ ಮಧ್ಯ ಭಾಗದಲ್ಲಿ ಹೆಚ್ಚು ಉತ್ಸುಕತೆಯಿಂದ ಸೇವೆ ಆರಂಭಿಸಿತ್ತು. ಕಡಿಮೆ ಬೆಲೆಯಲ್ಲಿ ಸೇವೆ ನೀಡುತ್ತಿರುವುದರಿಂದ ಹೆಚ್ಚು ಜನಮನ್ನಣೆ ಪಡೆದಿತ್ತು. ಇದೀಗ ಏರ್‌ಲೈನ್ಸ್ ತಾನು ಇನ್ನು ಮುಂದಿನ ದಿನಗಳಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಧ್ಯೆ ಕಾರ್ಯಾಚರಣೆ ನಡೆಸುವುದಿಲ್ಲ ಎಂಬುದನ್ನು ಖಚಿತಪಡಿಸಿದೆ ಎಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಆಕಾಸ ಸಂಸ್ಥೆಯು ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಸಹ ಕೆಲವು ವಾರಗಳಲ್ಲಿ ವಿಮಾನ ರದ್ಧತಿ ಮತ್ತು ಮರು ವೇಳಾಪಟ್ಟಿಯೊಂದಿಗೆ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಬೆಂಗಳುರು ಏರ್‌ಪೋರ್ಟ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.












Click it and Unblock the Notifications