ಬಾರಾಮತಿ ವಿಮಾನ ಪತನ: ಪೈಲಟ್ ರೀಡ್‌ಬ್ಯಾಕ್ ಮಾಡದಿರುವುದೇ ದುರಂತಕ್ಕೆ ಕಾರಣ, ಏನಿದು?
ಮುಂಬೈ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದ ಅಪಘಾತ ಉಂಟಾಗಿ ಐವರು ಮೃತಪಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಅಪಘಾತಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದೆ. ಪೈಲಟ್ 'ಲ್ಯಾಂಡಿಂಗ್ ಕ್ಲಿಯರೆನ್ಸ್‌ನ ರೀಡ್‌ಬ್ಯಾಕ್ ನೀಡಿಲ್ಲ'. ಇದರಿಂದ ಹೀಗಾಗಿರಬಹುದು ಎಂಬ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ.
ಜಾಗತಿಕ ವಿಮಾನಯಾನ ಪ್ರೋಟೋಕಾಲ್ ಪ್ರಕಾರ, ಲ್ಯಾಂಡಿಂಗ್ ಅನುಮತಿ ದೊರೆತಾಗ ಪೈಲಟ್ ಅದಕ್ಕೆ ಪ್ರತಿಕ್ರಿಯಿಸಿ ರೀಡ್‌ಬ್ಯಾಕ್ ನೀಡಬೇಕು. ಇದು ಕಡ್ಡಾಯ ಪ್ರಕ್ರಿಯೆ ಆಗಿದೆ. ಬಾರಾಮತಿ ಬಳಿ ಪತನವಾದ ವಿಮಾನದ ಪೈಲಟ್ ಇದನ್ನು ಪಾಲಿಸಿಲ್ಲ ಎಂದು ತಿಳಿಸಲಾಗಿದೆ. ಅಂದರೆ ಲ್ಯಾಂಡಿಂಗ್ ವೇಳೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ನೀಡುವ ಸಿಗ್ನಲ್ ಅನ್ನು ಪೈಲಟ್ ಪುನರಾವರ್ತಿಸಿ ದೃಢೀಕರಿಸುವ ಪ್ರಕ್ರಿಯೆ ಆಗಿದೆ. ಅದನ್ನು 'ರೀಡ್‌ಬ್ಯಾಕ್' ಎನ್ನಲಾಗುತ್ತದೆ.

ರೀಡ್ ಬ್ಯಾಕ್ ನೀಡದ ಪೈಲಟ್
'ರೀಡ್‌ಬ್ಯಾಕ್' ನೀಡಿದರೆ ಪೈಲಟ್ ಲ್ಯಾಂಡಿಂಗ್ ಮುನ್ನ ಸರಿಯಾಗಿ ಸಿಗ್ನಲ್ ಅರ್ಥ ಮಾಡಿಕೊಂಡಿದ್ದಾರೆ ಎಂಬರ್ಥ ಬರುತ್ತದೆ. ಈ ಪ್ರಕ್ರಿಯೆ ವಿಮಾನ ಇಳಿಯುವ ಸಂದರ್ಭದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ಯಾವ ರನ್‌ವೇ ಬಳಸಲಾಗುತ್ತಿದೆ, ಹವಾಮಾನ ಪರಿಸ್ಥಿತಿ ಹೇಗಿದೆ, ರನ್‌ವೇ ಮೇಲೆ ಅಥವಾ ಅದರ ಸುತ್ತಮುತ್ತ ಇತರ ಸಂಚಾರವಿದೆಯೇ ಎಂಬ ಮಾಹಿತಿ ಸ್ಪಷ್ಟವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಅಜಿತ್ ಪವಾರ್ ಅವರಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಲ್ಯಾಂಡಿಂಗ್ ಕ್ಲಿಯರೆನ್ಸ್ ರೀಡ್‌ಬ್ಯಾಕ್ ನೀಡಲು ವಿಫಲರಾಗಿದ್ದಾರೆ. ನಿಯಮಾನುಸಾರ ಎಟಿಸಿ ನೀಡುವ ಕೆಲವು ಸಂದೇಶಗಳನ್ನು ಪೈಲಟ್‌ಗಳು ಕಡ್ಡಾಯವಾಗಿ ಮರುಪಠಣ ಮಾಡಬೇಕು. ಇದರಲ್ಲಿ ಮಾರ್ಗ ಅನುಮತಿಗಳು, ವಿಮಾನ ನಿಲ್ದಾಣದ ವಾಯುಪ್ರದೇಶ ಪ್ರವೇಶ, ರನ್‌ವೇ ಮೇಲೆ ಇಳಿಯುವ ಅಥವಾ ಟೇಕ್ ಆಫ್ ಮಾಡುವ ಅನುಮತಿ, ವೇಗ, ಎತ್ತರ ಮತ್ತು ದಿಕ್ಕು ಬದಲಾವಣೆಯ ಸೂಚನೆಗಳು ಇದರಲ್ಲಿ ಒಳಗೊಂಡಿರುತ್ತದೆ. ರಿಡ್ ಬ್ಯಾಕ್ ಕೊಟ್ಟರೆ ಈ ಎಲ್ಲದ ಉದ್ದೇಶ ಪೈಲಟ್ ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಎಟಿಸಿಗೆ ಖಚಿತವಾಗುತ್ತದೆ. ಈ ಪ್ರಕ್ರಿಯೆಯಲ್ಲಿನ ವೈಫಲ್ಯವೇ ಅಫಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.
ವಿಮಾನ ಲ್ಯಾಂಡಿಂಗ್ ವೇಳೆ ಆಗಿದ್ದೇನು?
ಇಂದು ಬುಧವಾರ ಬೆಳಗ್ಗೆ 8.20ಕ್ಕೆ ವಿಮಾನವು ಬಾರಾಮತಿ ವಿಮಾನ ನಿಲ್ದಾಣ ಸಮೀಪಸಿತು. ಆಗ ಎಟಿಸಿ ಜೊತೆ ಸಂಪರ್ಕ ಸಾಧಿಸಿತು. ಈ ವೇಳೆ ಪೈಲಟ್‌ಗೆ ಹವಾಮಾನ ಪರಿಸ್ಥಿತಿಗಳ ಮಾಹಿತಿ ನೀಡಲಾಗಿಯಿತು. ಜೊತೆಗೆ ವಿವೇಚನೆಯ ಮೇರೆಗೆ ವಿಮಾನ ಲ್ಯಾಂಡಿಂಗ್‌ಗೆ ಸೂಚನೆ ಕೊಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪೈಲಟ್, ಗಾಳಿ ಮತ್ತು ಗೋಚರತೆಯ ಬಗ್ಗೆ ಮಾಹಿತಿ ಕೇಳಿದರು, ಇದು ಲ್ಯಾಂಡಿಂಗ್‌ಗೂ ಮುನ್ನ ಪೈಲಟ್‌ಗಳು ಕೇಳುವ ಸಾಮಾನ್ಯ ಪ್ರಶ್ನೆ ಇದಾಗಿತ್ತು.
ಪೈಲಟ್ ಗೋಚರತೆಯ ಪ್ರಶ್ನೆಗೆ ಎಟಿಸಿಯು, ಸುಮಾರು 3,000 ಮೀಟರ್ ಅಥವಾ ಮೂರು ಕಿಲೋಮೀಟರ್ ಗೋಚರತೆ ಇದೆ ಎಂದು ಪ್ರತಿಕ್ರಿಯಿಸಿತು. ವಿಮಾನಯಾನ ತಜ್ಞರು ಹೇಳುವ ಪ್ರಕಾರ, ಇಷ್ಟು ಪ್ರಮಾಣದ ಗೋಚರತೆ ಲ್ಯಾಂಡಿಂಗ್ ಪ್ರಯತ್ನಕ್ಕೆ ಸಾಕು ಎನ್ನಲಾಗುತ್ತದೆ. ಈ ವಿಮಾನವು ರನ್‌ವೇ ಗೆ ಬರುತ್ತಿದ್ದಂತೆ ಪೈಲಟ್ ಗೆ ರನ್‌ವೇ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ತಿಳಿಸಿ 'ಗೋ-ಅರೌಂಡ್' ಮಾಡಲು ಪೈಲಟ್ ನಿರ್ಧರಿಸಿದರು. ವಿಮಾನ ಲ್ಯಾಂಡಿಂಗ್ ವೇಳೆ ಗೋಚರತೆ ಆಗದಿದ್ದರೆ, ಲ್ಯಾಂಡಿಂಗ್ ಪ್ರಕ್ರಿಯೆ ರದ್ದು ಮಾಡಿ, ಏರ್‌ಪೋರ್ಟ್ ಸುತ್ತ ಚಲಿಸುವುದು ಎಸ್‌ಓಪಿ ಮಾನದಂಡವಗಿದೆ.
ಗೋ-ಅರೌಂಡ್ ವಿಮಾನ ಬಗ್ಗೆ ವಿಚಾರಿಸಲಾಯಿತು ಮತ್ತು ಪೈಲಟ್ ಮತ್ತೊಮ್ಮೆ ಲ್ಯಾಂಡಿಂಗ್‌ಗೆ ಅನುಮತಿಸಿದರೆ. ಈ ಬಾರಿ ರನ್‌ವೇ ಗೋಚರಿಸುತ್ತಿದೆಯೇ ಎಂಬ ದೃಢೀಕರಣ ನೀಡಲಾಯಿತು. ಇದಾದ ನಂತರ ಬೆಳಗ್ಗೆ 8.34ಕ್ಕೆ ವಿಮಾನಕ್ಕೆ ಲ್ಯಾಂಡಿಂಗ್ ಅನುಮತಿ ನೀಡಲಾಯಿತು. ಆದರೆ ಪೈಲಟ್‌ಗೆ ಸೂಚನೆ ಅರ್ಥ ಮಾಡಿಕೊಳ್ಳದೇ, ರೀಡ್ ಬ್ಯಾಕ್ ನೀಡದಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಈ ಅವಘಡದ ಮತ್ತಷ್ಟು ನಿಖರ ಕಾರಣಗಳಿಗೆ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications