Ayodhya: ಮುಸ್ಲಿಮರು ರೈಲಿನಲ್ಲಿ ಅಯೋಧ್ಯೆಗೆ ತೆರಳದಂತೆ ಮುಸ್ಲಿಂ ಸಂಸದ ಕರೆ: ಯಾಕೆ? ಕಾರಣಗಳೇನು?

ಬೆಂಗಳೂರು, ಜನವರಿ 07: ದೇಶದ ಕೋಟ್ಯಂತರ ರಾಮನ ಭಕ್ತರು ಶ್ರೀರಾಮ ಮಂದಿರ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾನೆಯಂತ ಧಾರ್ಮಿಕ ಕಾರ್ಯಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಈ ಮಧ್ಯೆ AIUDF ಮುಖ್ಯಸ್ಥರು ಆದ ಮುಸ್ಲಿಂ ಸಂಸದರೊಬ್ಬರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳದಂತೆ ಕರೆ ನೀಡಿದ್ದಾರೆ.

ಹೌದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ (AIUDF) ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಮನೆಯಲ್ಲಿಯೇ ಇರುವಂತೆ ಮುಸ್ಲಿಮರಿಗೆ ಶನಿವಾರ ಕರೆ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

AIUDF President-MP Badruddin Ajmal Calls Do Not Go to Ayodhya Shri Ram Temple on Jan 22nd

ಸಂಸದರ ವಿವಾದಾತ್ಮಕ ಹೇಳಿಕೆ

ದಾರುಲ್ ಉಲೂನ್ ದಿಯೋಬಂದ್‌ನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಜ್ಮಲ್ ಅವರು ಸುದ್ದಿಗಾರರ ಜೊತೆಗೆ ಮಾತನಾಡಿ, ದೇಶದಾದ್ಯಂತ ಕರ ಸೇವಕರ (ಸ್ವಯಂಸೇವಕರ) ದೊಡ್ಡ ಸಂಭ್ರಮಾಚರಣೆ, ಭಾಗವಹಿಸುವಿಕೆ ಇರುತ್ತದೆ. ಬಾಬರಿ ಮಸೀದಿ ಧ್ವಂಸದ ನಂತರ ನಡೆದ ಘಟನೆಗಳು ಪುನರಾವರ್ತನೆ ಆಗುವುದನ್ನು ನಾವು ಬಯಸುವುದಿಲ್ಲ ಎಂದು ಅವರು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

ಅಂದು ಮುಸ್ಲಿಂ ಸಹೋದರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದೇಶದ ಶಾಂತಿಗಾಗಿ, ಮುಸ್ಲಿಮರು ರಾಮಮಂದಿರಕ್ಕೆ ರೈಲಿನಲ್ಲಿ ಪ್ರಯಾಣಿಸದಂತೆ ಅವರು ಕರೆ ನೀಡಿದ್ದಾರೆ. ಅತ್ತ ರಾಮ ಮಂದಿರ ಉದ್ಘಾಟನೆ ಆಗುತ್ತಿದ್ದರೆ ಇತ್ತ ನೀವು ಮನೆಯೊಳಗೆ ಇರಿ ಎಂದು ಅವರು ತಮ್ಮ ಮುಸ್ಲಿಂ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಸಂಶಯ ವ್ಯಕ್ತಪಡಿಸಿದ ಸಂಸದ

ಅಜ್ಮಲ್ ಅವರು ಲೋಕಸಭೆ ಸಂಸದರಾಗಿದ್ದಾರೆ. ಜನವರಿ ಮೂರನೇ ವಾರ ಭಾರತದಾದ್ಯಂತ ಸ್ವಯಂಸೇವಕರು ರೈಲು ಮತ್ತು ಬಸ್‌ಗಳಲ್ಲಿ ಪ್ರಯಾಣ ಮಾಡಲಿದ್ದಾರೆ. ದೊಡ್ಡ ಯುವಕರಿರುವ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಒಂದೆರಡು ಮುಸ್ಲಿಮರು ಸಿಕ್ಕಿಹಾಕಿಕೊಳ್ಳುವುದು ಸರಿಯಲ್ಲ. ನೋವು ಒಂದೇ ವೇಳೆ ಹೋಗಿದ್ದೇ ಆದಲ್ಲಿ ಸಮಸ್ಯೆ ಆಗಬಹುದು ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ನಮ್ಮ ಈ ಹೇಳಿಕೆಯನ್ನು ಕೆಲವರು ಕೋಮುವಾದ ಎನ್ನಬಹುದು. ಅದನ್ನು ಬಿಡಬೇಕು ಯಾವುದೇ ರೀತಿಯ ಘರ್ಷಣೆಯಿಂದ ಜನರನ್ನು ತೊಂದರೆ ಆಗದಂತೆ ರಕ್ಷಿಸಬೇಕಿದೆ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

AIUDF President-MP Badruddin Ajmal Calls Do Not Go to Ayodhya Shri Ram Temple on Jan 22nd

ಪ್ರಧಾನಿ ಮೋದಿ ಸೇರಿ ವಿವಿಐಪಿ ಭಾಗಿ ಸಾಧ್ಯತೆ

ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಮರ್ಯಾದಾ ಪುರುಷೋತ್ತಮ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಇಡಿ ದೇಶವೇ ಕಾತರದಿಂದ ಕಾಯುತ್ತಿದೆ.

ಸಮಾರಂಭಕ್ಕೆ ಭಾರತ ಮತ್ತು ವಿದೇಶದಿಂದ ಹಲವಾರು ವಿವಿಐಪಿ ಅತಿಥಿಗಳು ಅಯೋಧ್ಯೆಯಲ್ಲಿ ಶುಭ ಸಂದರ್ಭದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಅವರೆಲ್ಲರು ಅಂದು ಉಪಸ್ಥಿತರಿರಲಿದ್ದಾರೆ.

ಇನ್ನೂ ಜನವರಿ 16ರಿಂದಲೇ ಅಯೋಧ್ಯೆ ಮಂದಿರದಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭ, ಇನ್ನೂ ಕೆಲವು ಧಾರ್ಮಿಕ ಕೈಂಕರ್ಯಗಳು ಜರುಗಲಿವೆ ಎಂದು ಈಗಾಗಲೇ ಟ್ರಸ್ಟ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+