ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರನ್ 700 ಪ್ಲಸ್ ಕೋಟಿ ಆಸ್ತಿ 'ಇಡಿ' ವಶಕ್ಕೆ

By Mahesh
|
Google Oneindia Kannada News

ನವದೆಹಲಿ, ಏ.1: ಏರ್ ಸೆಲ್ ಕಂಪನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಲು ಲಂಚ ಪಡೆದಿರುವ ಆರೋಪ ಹೊತ್ತಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಜಾರಿ ನಿರ್ದೇಶನಾಲಯ ಏ.1 ರಂದು ದೊಡ್ಡ ಆಘಾತ ನೀಡಿದೆ.

ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದಯಾನಿಧಿ ಮಾರನ್ ಅವರ 742 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದೆ. [ಮಾರನ್ ಪರಮಾಪ್ತರಿಗೆ ಸಿಬಿಐ ಹೊಡೆತ]

ಸಿಬಿಐ ಚಾರ್ಜ್ ಶೀಟ್: 2004 ಹಾಗೂ 2007ರಲ್ಲಿ ಕೇಂದ್ರ ಟೆಲಿಕಾಂ ಸಚಿವರಾಗಿದ್ದ ದಯಾನಿಧಿ ಮಾರನ್ ಅವರು ಏರ್ ಸೆಲ್ ಗೆ ತರಂಗ ಗುಚ್ಛ ಗುತ್ತಿಗೆ ಸಿಗುವಂತೆ ಮಾಡಿದ್ದರು. ಇದಕ್ಕೆ ಬದಲಾಗಿ ಮಲೇಷಿಯಾ ಮೂಲದ ಮ್ಯಾಕ್ಸಿಸ್ ಕಮ್ಯೂನಿಕೇಷನ್ ಸಂಸ್ಥೆ ಸನ್ ನೆಟ್ವರ್ಕ್ ಮಾರಲು ಮಾರನ್ ಮುಂದಾಗಿದ್ದರು.ಸನ್ ನೆಟ್ವರ್ಕ್ ನಲ್ಲಿ ಮ್ಯಾಕ್ಸಿಸ್ 69 ಕೋಟಿ ರು ಹೂಡಿಕೆ ಮಾಡಿತ್ತು ಎನ್ನಲಾಗಿದೆ.

Aircel-Maxis- ED attaches Dayanidhi Maran's property worth Rs 700 cr

ಲಂಚಕ್ಕೆ ಸಾಕ್ಷಿ ಸಿಕ್ಕಿತ್ತು: ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು. ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಜವಳಿ ಖಾತೆಗೆ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.

English summary
In a major development the ‎Enforcement Directorate attached properties of former telecom minister and DMK leader Dayanidhi Maran worth around Rs 700 crore. The action was taken as part of the ongoing investigation into the Aircel-Maxis deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X