ದಯಾನಿಧಿ ಮಾರನ್ ಪರಮಾಪ್ತರಿಗೆ ಸಿಬಿಐ ಹೊಡೆತ

ನವದೆಹಲಿ, ಜ.22: ಏರ್ ಸೆಲ್ ಕಂಪನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಲು ಲಂಚ ಪಡೆದಿರುವ ಆರೋಪ ಹೊತ್ತಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಮತ್ತೊಮ್ಮೆ ದೊಡ್ಡ ಶಾಕ್ ತಗುಲಿದೆ. ಮಾರನ್ ಅವರ ಪರಮಾಪ್ತರನ್ನು ಸಿಬಿಐ ಬಂಧಿಸಿ ವಿಚಾರಣೆಗೊಳಪಡಿಸಿದೆ. ಸಿಬಿಐ ನಡೆ ವಿರುದ್ಧ ಮಾರನ್ ಕೆಂಡಕಾರಿದೆ.

ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ದಯಾನಿಧಿ ಮಾರನ್ ಅವರ 742 ಕೋಟಿ ರು ಮೌಲ್ಯದ ಆಸ್ತಿ ಜಪ್ತಿ ಮಾಡಲು ಮುಂದಾಗಿತ್ತು. ಇದಾರ ಬಳಿಕ ಈಗ ಸಿಬಿಐ ತಂಡ ಸನ್ ಟಿವಿ ಸಮೂಹಕ್ಕೆ ಲಾಭ ತಂದುಕೊಟ್ಟ ಡೀಲ್ ಗೆ ಸಂಬಂಧಿಸಿದಂತೆ ಮಾರನ್ ಅವರ ಆಪ್ತ ಬಳಗದ ಪೈಕಿ ಇಬ್ಬರನ್ನು ವಿಚಾರಣೆಗೆ ಒಳಪಡಿಸುತ್ತಿದೆ. [ನೆಲಕಚ್ಚಿದ ಮಾರನ್ ಒಡೆತನದ ಸನ್ ಟಿವಿ ಷೇರು]

CBI to interrogate aides

ದಯಾನಿಧಿ ಮಾರನ್ ಅವರ ಮಾಜಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಗೌತಮನ್ ಹಾಗೂ ಸನ್ ಟಿವಿಯ ಮುಖ್ಯ ತಾಂತ್ರಿಕ ಅಧಿಕಾರಿ ಎಸ್ ಕಮ್ಮಂ ಮತ್ತು ಸನ್ ಟಿವಿ ಚಾನೆಲ್ ಎಲೆಕ್ಟ್ರಿಷಿಯನ್ ಕೆಎಸ್ ರವಿ ಅವರು ವಿಚಾರಣೆ ಭೀತಿ ಎದುರಿಸುತ್ತಿದ್ದಾರೆ. [ಆಸ್ತಿ ಜಪ್ತಿಗೆ ಮುಂದಾದ 'ಇಡಿ']

ಸುಮಾರು 549,96,01,793 ರು ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು. ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಜವಳಿ ಖಾತೆಗೆ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರು ಹೊತ್ತಿದ್ದರು. ಇದರ ಜೊತೆಗೆ ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+