ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ವಿಸ್ತಾರ ಊಟದಲ್ಲಿ ಜಿರಳೆ; ವಿಮಾನಯಾನ ಸಂಸ್ಥೆಯ ಉತ್ತರ ಹೀಗಿದೆ

|
Google Oneindia Kannada News

ನವದೆಹಲಿ, ಅ. 14: ಏರ್ ವಿಸ್ತಾರಾ ವಿಮಾನಯಾನ ಪ್ರಯಾಣಿಕರೊಬ್ಬರಿಗೆ ಶುಕ್ರವಾರ ಪ್ಯಾಕ್ ಮಾಡಿದ ಆಹಾರದಲ್ಲಿ ಸಣ್ಣ ಜಿರಳೆಯೊಂದು ಕಂಡು ಬಂದಿದೆ. ಅದರ ಚಿತ್ರವನ್ನು ಪ್ರಯಾಣಿಕ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಿಕುಲ್ ಸೋಲಂಕಿ ಎಂಬ ಪ್ರಯಾಣಿಕರೊಬ್ಬರು, "ಏರ್ ವಿಸ್ತಾರಾ ಊಟದಲ್ಲಿ ಸಣ್ಣ ಜಿರಳೆ" ಎಂದು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ರೊಟ್ಟಿ, ಚಪಾತಿಗೆ ಶೇ.5 ಜಿಎಸ್‌ಟಿ, ಪರಾಠ ಮೇಲೆ ಶೇ.18: ಏನಿದರ ವ್ಯತ್ಯಾಸ?ರೊಟ್ಟಿ, ಚಪಾತಿಗೆ ಶೇ.5 ಜಿಎಸ್‌ಟಿ, ಪರಾಠ ಮೇಲೆ ಶೇ.18: ಏನಿದರ ವ್ಯತ್ಯಾಸ?

ಪ್ರಯಾಣಿಕ ನಿಕುಲ್ ಸೋಲಂಕಿ , ಎರಡು ಚಿತ್ರಗಳನ್ನು ಹಂಚಿಕೊಂಡಿದ್ದು, ಒಂದು ಚಿತ್ರದಲ್ಲಿ ಇಡ್ಲಿ ಸಾಂಬಾರ್ ಮತ್ತು ಉಪ್ಪಿಟ್ಟು ಇರುವುದು ನೋಡಬಹುದು. ಮತ್ತೊಂದರಲ್ಲಿ ಆಹಾರದೊಳಗೆ ಸತ್ತ ಜಿರಳೆಯ ಝೂಮ್-ಇನ್ ಛಾಯಾಚಿತ್ರವಿದೆ.

Air Vistara Airline Passenger Tweets About Cockroach In Meal

ಪ್ರಯಾಣಿಕ ಟ್ವೀಟ್ ಮಾಡಿದ ಹತ್ತು ನಿಮಿಷಗಳ ನಂತರ, ಏರ್ ವಿಸ್ತಾರಾರ ಅಧಿಕೃತ ಹ್ಯಾಂಡಲ್ ದೂರಿಗೆ ಪ್ರತಿಕ್ರಿಯಿಸಿದೆ. "ಹಲೋ ನಿಕುಲ್, ನಮ್ಮ ಎಲ್ಲಾ ಊಟಗಳನ್ನು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ದಯವಿಟ್ಟು ನಿಮ್ಮ ವಿಮಾನದ ವಿವರಗಳನ್ನು ನಮಗೆ ಕಳುಹಿಸಿ ಇದರಿಂದ ನಾವು ವಿಷಯವನ್ನು ಪರಿಶೀಲಿಸಬಹುದು. ಅದನ್ನು ಶೀಘ್ರವಾಗಿ ಪರಿಹರಿಸಬಹುದು. ಧನ್ಯವಾದಗಳು" ಎಂದು ಏರ್ ವಿಸ್ತಾರಾ ಹ್ಯಾಂಡಲ್ ಬರೆದಿದೆ.

ಇದಕ್ಕೂ ಮುನ್ನ ಗುರುವಾರ ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್, 'ವಿಸ್ತಾರಾ ಮತ್ತು ಏರ್ ಇಂಡಿಯಾದ ಏಕೀಕರಣವನ್ನು ಒಳಗೊಂಡಿರುವ ಸಂಭಾವ್ಯ ಒಪ್ಪಂದದ ಕುರಿತು ಭಾರತದ ಟಾಟಾ ಗ್ರೂಪ್‌ನೊಂದಿಗೆ ಗೌಪ್ಯ ಚರ್ಚೆಯಲ್ಲಿದೆ' ಎಂದು ತಿಳಿಸಿದೆ.

"ಚರ್ಚೆಗಳು ಎಸ್‌ಐಎ ಮತ್ತು ಟಾಟಾ ನಡುವಿನ ಅಸ್ತಿತ್ವದಲ್ಲಿರುವ ಪಾಲುದಾರಿಕೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತವೆ. ವಿಸ್ತಾರಾ ಮತ್ತು ಏರ್ ಇಂಡಿಯಾದ ಸಂಭಾವ್ಯ ಏಕೀಕರಣವನ್ನು ಒಳಗೊಂಡಿರಬಹುದು" ಎಂದು ಸಿಂಗಾಪುರ್ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಆದರೂ, ಚರ್ಚೆಗಳು ನಡೆಯುತ್ತಿವೆ ಮತ್ತು ಯಾವುದೇ ನಿರ್ಣಾಯಕ ನಿಯಮಗಳನ್ನು ಇನ್ನೂ ಒಪ್ಪಿಕೊಂಡಿಲ್ಲ ಎಂಬುದನ್ನು ಅದು ಸೇರಿಸಿದೆ.

ಸಿಂಗಾಪುರ್ ಏರ್‌ಲೈನ್ಸ್ ಟಾಟಾ ಎಸ್‌ಐಎ ಏರ್‌ಲೈನ್ಸ್‌ನಲ್ಲಿ 49% ಪಾಲನ್ನು ಹೊಂದಿದ್ದು, ಇದು ವಿಸ್ತಾರಾ ಏರ್‌ಲೆನ್ಸ್ ಅನ್ನು ನಿರ್ವಹಿಸುತ್ತದೆ, ಉಳಿದ 51% ಭಾರತೀಯ ಸಮೂಹದ ಒಡೆತನದಲ್ಲಿದೆ.

English summary
Air Vistara airline passenger Tweets about cockroach in his packed food during the flight. Air Vistara responds. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X