ವಾಯು ಮಾಲಿನ್ಯ ವರದಿ: ದೊಡ್ಡ ನಗರಗಳೇ ಎಷ್ಟೋ ಉತ್ತಮ

ನವದೆಹಲಿ,ಜನವರಿ 15: 2020ರ ವಾಯುಮಾಲಿನ್ಯದ ಸಮೀಕ್ಷೆಯನ್ನು ಗಮನಿಸಿದಾಗ ಸಣ್ಣಪುಟ್ಟ ನಗರಗಳಿಗಿಂತ ದೊಡ್ಡ ನಗರಗಳೇ ಉತ್ತಮ ಎಂಬುದು ಅರ್ಥವಾಗಿದೆ.

ದೆಹಲಿ, ವಾರಾಣಸಿಗಳಂತಹ ದೊಡ್ಡ ನಗರಗಳಿಗೆ ಹೋಲಿಕೆ ಮಾಡಿದರೆ ವಾರ್ಷಿಕ ಪಿಎಂ 2.5 ಮಟ್ಟ ತಗ್ಗಿದ್ದರೆ, ಫತೇಹಾಬಾದ್ ಅಥವಾ ಮೊರಾದಾಬಾದ್ ಗಳಂತಹ ಸಣ್ಣ ಪಟ್ಟಣಗಳಲ್ಲಿ ಏರಿಕೆಯಾಗಿದೆ.

ಗಂಗಾನದಿ ತೀರದ ಪ್ರದೇಶಗಳಲ್ಲಿರುವ ನಗರ, ಪಟ್ಟಣಗಳಲ್ಲಿ ವಿಜ್ಞಾನ ಮತ್ತು ಪರಿಸರ ಕೇಂದ್ರ ನಡೆಸಿರುವ ಚಳಿಗಾಲದ ವಾಯುಮಾಲಿನ್ಯ (ಜ.11 ವರೆಗೆ) ವಿಶ್ಲೇಷಣೆ ಮಾಡಿದ್ದು, ಲಾಕ್ ಡೌನ್ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾದ ಬಳಿಕ ಶುದ್ಧ ಗಾಳಿ ಕಣ್ಮರೆಯಾಗಿರುವುದನ್ನು ವಿವರಿಸಲಾಗಿದೆ.

Air Pollution 2020 Report: Big Cities Are Better

2019 ಕ್ಕಿಂತ 2020 ರಲ್ಲಿ ಬೇಸಿಗೆಯ ಪಿಎಂ 2.5 ಮಟ್ಟ ಲಾಕ್ ಡೌನ್ ನ ಪರಿಣಾಮವಾಗಿ ಕಡಿಮೆಯಾಗಿದ್ದು, ಪಂಜಾಬ್ ಹಾಗೂ ಹರ್ಯಾಣಗಳಲ್ಲಿ 2020 ರ ಚಳಿಗಾಲದಲ್ಲಿ ಪಿಎಂ 2.5 ಮಟ್ಟ 2019 ಕ್ಕಿಂತಲೂ ಹೆಚ್ಚಾಗಿದೆ ಎಂದು ಸಿಎಸ್ಇಯ ಯೋಜನಾ ವ್ಯವಸ್ಥಾಪಕ ಅವಿಕಾಲ್ ಸೋಮವಂಶಿ ಹೇಳಿದ್ದಾರೆ.

ಆದರೆ ಕೆಲವು ನಗರಗಳಲ್ಲಿ ಲಾಕ್ ಡೌನ್ ಹೊರತಾಗಿಯೂ ಸರಾಸರಿ ವಾಯುಮಾಲಿನ್ಯ ಮಟ್ಟ ಪಿಎಂ 2.5 ನಿಂದ ಕಡಿಮೆಯಂತೂ ಆಗಿಲ್ಲ. ಹರ್ಯಾಣದ ಉತ್ತರ ಭಾಗದಲ್ಲಿರುವ ಫತೇಹಾಬಾದ್ ನಂತಹ ಪಟ್ಟಣಗಳಲ್ಲಿ ವಾಯುಮಾಲಿನ್ಯ ಮಟ್ಟ 2019 ರಲ್ಲಿ ದಾಖಲಾಗಿದ್ದ ಪಿಎಂ 2.5 ಮಟ್ಟಕ್ಕಿಂತ ಶೇ.35 ರಷ್ಟು ಏರಿಕೆಯಾಗಿದೆ ಎನ್ನುತ್ತಿದೆ ಈ ವರದಿ.

ಹೆಚ್ಚಿನ ಪಿಎಂ 2.5 ಮಟ್ಟ ಚಳಿಗಾಲದ ಟ್ರೆಂಡ್ ಆಗಿದ್ದು, ವಾಹನಗಳು, ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ಬಯೋಮಾಸ್ ದಹನದಿಂದ ಉಂಟಾಗುವ ವಾಯುಮಾಲಿನ್ಯ ಹವಾಮಾನ ಬದಲಾವಣೆಗಳಿಂದ ಸಿಲುಕುವುದರ ಪರಿಣಾಮವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+