ಟಾಟಾ ಕಂಪನಿಗೆ ಮಾರಾಟವಾಗಲಿದೆಯೇ ಏರ್ ಇಂಡಿಯಾ?

ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸಂಸ್ಥೆಯು ಖರೀದಿಸಲು ಮುಂದಾಗಿದೆ. ಸಿಂಗಾಪುರ ಏರ್ ಲೈನ್ಸ್ ಸಂಸ್ಥೆಯ ಪಾಲುದಾರಿಕೆಯಲ್ಲಿ ಖರೀದಿಗೆ ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಎರಡೂ ಕಂಪನಿಗಳ ನಡುವೆ ಮಾತುಕತೆ ನಡೆಯುತ್ತಿದೆ.

ನವದೆಹಲಿ, ಜೂನ್ 21: ಭಾರತದ ವಿಮಾನ ಸೇವಾ ಸಂಸ್ಥೆಯಾದ ಏರ್ ಇಂಡಿಯಾವನ್ನು ಟಾಟಾ ಕಂಪನಿಯು ಕೊಂಡುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖಾಸಗೀಕರಣ ಮಾಡಲು ಇತ್ತೀಚೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ, ಟಾಟಾ ಕಂಪನಿಯು ಏರ್ ಇಂಡಿಯಾವನ್ನು ಖರೀದಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ.

ಅಂದಹಾಗೆ, ಟಾಟಾ ಕಂಪನಿಯೊಂದೇ ಏರ್ ಇಂಡಿಯಾವನ್ನು ಖರೀದಿಸುತ್ತಿಲ್ಲ. ಸಿಂಗಪೂರ್ ಏರ್ ಲೈನ್ಸ್ ಸಂಸ್ಥೆಯೊಂದಿಗೆ ಜಂಟಿಯಾಗಿ ಏರ್ ಇಂಡಿಯಾವನ್ನು ಖರೀದಿಸಲು ಟಾಟಾ ಸಂಸ್ಥೆ ಮುಂದಾಗಿದೆ.

ಕಳೆದ ಹದಿನೈದು ದಿನಗಳಿಂದಲೂ ಏರ್ ಇಂಡಿಯಾ ಖರೀದಿ ಕುರಿತಂತೆ ಸಿಂಗಾಪುರ ಏರ್ ಲೈನ್ಸ್ ಮುಖ್ಯಸ್ಥರ ಜತೆಗೆ ಟಾಟಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಎನ್. ಚಂದ್ರಶೇಖರನ್ ಅವರು ಮಾತುಕತೆ ನಡೆಸಿದ್ದಾರೆ. ಮಾತುಕತೆ ಈಗಲೂ ಜಾರಿಯಲ್ಲಿದೆ.

ಟಾಟಾ ಕಂಪನಿಯದ್ದೇ ಮಾಲೀಕತ್ವ

ಟಾಟಾ ಕಂಪನಿಯದ್ದೇ ಮಾಲೀಕತ್ವ

ಕೆಲವಾರು ಮೂಲಗಳ ಪ್ರಕಾರ, ಟಾಟಾ ಸಂಸ್ಥೆಯು ಏರ್ ಇಂಡಿಯಾದ ಶೇ. 51ರಷ್ಟು ಷೇರನ್ನು ಖರೀದಿ ಮಾಡಲಿದೆ. ಉಳಿದ ಶೇ. 49ರಷ್ಟು ಷೇರುಗಳು ಸಿಂಗಾಪುರ ಏರ್ ಲೈನ್ಸ್ ಕಂಪನಿಯ ಪಾಲಾಗಲಿದೆ.

ಟಾಟಾ ಬೆಳೆಸಿದ ಕಂಪನಿ ಅದು

ಟಾಟಾ ಬೆಳೆಸಿದ ಕಂಪನಿ ಅದು

ಹಲವರಿಗೆ ಈ ವಿಚಾರ ಗೊತ್ತಿರಲಿಕ್ಕಿಲ್ಲ. ಏರ್ ಇಂಡಿಯಾ ಸಂಸ್ಥೆಯನ್ನು ಮೊದಲು ಟಾಟಾ ಸಂಸ್ಥೆಯೇ ನಿರ್ವಹಿಸುತ್ತಿತ್ತು. ಆನಂತರ, 1953ರಲ್ಲಿ ಸಂಸ್ಥೆಯು ರಾಷ್ಟ್ರೀಕೃತವಾಗಿದ್ದರಿಂದಾಗಿ ಒಡೆತನವು ಟಾಟಾ ಸಂಸ್ಥೆಯಿಂದ ಭಾರತ ಸರ್ಕಾರಕ್ಕೆ ವರ್ಗಾವಣೆಯಾಗಿತ್ತು. (ಮಾಹಿತಿ: ಇಟಿ)

ಏರ್ ಏಷ್ಯಾ.. ಟಾಟಾದ್ದೇ ಕಂಪನಿ

ಏರ್ ಏಷ್ಯಾ.. ಟಾಟಾದ್ದೇ ಕಂಪನಿ

ಅಂದಹಾಗೆ, ಟಾಟಾ ಸಂಸ್ಥೆಗೆ ವಿಮಾನ ಸೇವಾ ಸಂಸ್ಥೆಗಳನ್ನು ನಡೆಸಿದ ಅನುಭವಿದೆ. ಈಗಲೂ, ಅದು ಭಾರತದಲ್ಲಿ ಏರ್ ಏಷ್ಯಾ ಸಂಸ್ಥೆಯನ್ನು ನಡೆಸುತ್ತಿದೆ. ಮಲೇಷ್ಯಾ ಮೂಲದ ವಿಮಾನ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಂಡು ಈ ಸಂಸ್ಥೆಯನ್ನು ಅದು ನಡೆಸುತ್ತಿದೆ.

ಅಭಿವೃದ್ಧಿಯಾಗಬೇಕಿದೆ ಏರ್ ಇಂಡಿಯಾ

ಅಭಿವೃದ್ಧಿಯಾಗಬೇಕಿದೆ ಏರ್ ಇಂಡಿಯಾ

ದೇಶೀಯ ವಿಮಾನ ಮಾರುಕಟ್ಟೆಯಲ್ಲಿ ಏರ್ ಇಂಡಿಯಾದ ಪಾಲು ಶೇ. 16ರಷ್ಟಿದೆ. ಇದನ್ನು ಮತ್ತಷ್ಟು ವೃದ್ಧಿಗೊಳಿಸುವ ಇರಾದೆ ಸರ್ಕಾರದ್ದು. ಇಂಥ ಸವಾಲನ್ನು ಈಗ ಟಾಟಾ ಕಂಪನಿ ಸ್ವೀಕರಿಸಿದೆ.

ಏರ್ ಇಂಡಿಯಾಕ್ಕೆ ಹೊಸ ಕಾಯಕಲ್ಪ?

ಏರ್ ಇಂಡಿಯಾಕ್ಕೆ ಹೊಸ ಕಾಯಕಲ್ಪ?

ವರ್ಷದಿಂದ ವರ್ಷಕ್ಕೆ ದೇಶೀಯ ವಿಮಾನ ಯಾನ ಸೇವೆ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ವೃದ್ಧಿಸುತ್ತಿದೆ. ಇದೇ ವರ್ಷ ಮೇ ತಿಂಗಳಲ್ಲಿ 10.17 ಮಿಲಿಯನ್ ಜನರು ದೇಶೀಯ ವಿಮಾನ ಯಾನ ಮಾಡಿದ್ದಾರೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಇದು ಶೇ. 17. 3ರಷ್ಟು ವೃದ್ಧಿಯಾಗಿದೆ. ಹಾಗಾಗಿ, ಈ ಸಂದರ್ಭದಲ್ಲಿ, ಏರ್ ಇಂಡಿಯಾ ಅಭಿವೃದ್ಧಿಯಾಗಲಿ ಎಂಬುದು ಕೇಂದ್ರ ನೀತಿ ಆಯೋಗದ ಆಶಯವಾಗಿದೆ. ಹಾಗಾಗಿಯೇ, ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+