ಹಿರಿಯ ನಾಗರಿಕರಿಗೆ ಏರ್ ಇಂಡಿಯಾ ಭರ್ಜರಿ ಕೊಡುಗೆ

ನವದೆಹಲಿ, ಜುಲೈ 21: ಭಾರತದಲ್ಲಿನ ಹಿರಿಯ ನಾಗರಿಕರಿಗೆ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡುವ ಭರ್ಜರಿ ಕೊಡುಗೆಯನ್ನು ಏರ್ ಇಂಡಿಯಾ ಪ್ರಕಟಿಸಿದೆ.

ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಇನ್ನು ಮುಂದೆ ಏರ್ ಇಂಡಿಯಾದಲ್ಲಿ ಮೂಲ ಟಿಕೆಟ್ ದರದಲ್ಲಿ ಅರ್ಧದಷ್ಟು ಪಾವತಿಸಿದರೆ ಸಾಕು. ಈ ಕೊಡುಗೆ ಭಾರತದ ಒಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯಿಸುತ್ತದೆ.

ಇದು ಭಾರತ ಪ್ರಜೆಗಳಾದ ಹಾಗೂ ದೇಶದಲ್ಲಿ ಕಾಯಂ ಆಗಿ ನೆಲೆಸಿರುವ ಹಾಗೂ ಪ್ರಯಾಣದ ದಿನಾಂಕದ ವೇಳೆಗೆ 60 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರು ಈ ಸೌಲಭ್ಯ ಬಳಸಿಕೊಳ್ಳಬಹುದು.

Air india half ticket price to senior citizens

ಭಾರತದ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಹಿರಿಯ ನಾಗರಿಕರು ಅರ್ಧ ಟಿಕೆಟ್ ಬೆಲೆ ಪಾವತಿಸಿ ಪ್ರಯಾಣಿಸಬಹುದು. ಪ್ರಯಾಣದ ಏಳು ದಿನಗಳ ಮುಂಚೆ ಟಿಕೆಟ್ ಖರೀದಿಸಬೇಕು. ಟಿಕೆಟ್ ವಿತರಿಸಿದ ಒಂದು ವರ್ಷದವರೆಗೆ ಅದರ ಮಾನ್ಯತೆ ಇರುತ್ತದೆ.

ಮತದಾನದ ಚೀಟಿ, ಪಾಸ್‌ಪೋರ್ಟ್, ಚಾಲನಾಪರವಾನಗಿ, ಏರ್ ಇಂಡಿಯಾ ನೀಡಿದ ಹಿರಿಯ ನಾಗರಿಕರ ಗುರುತಿನ ಚೀಟಿ ಮುಂತಾದ ವಯಸ್ಸಿನ ದಾಖಲೆಯನ್ನು ಖಚಿತಪಡಿಸುವ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು.

ಚೆಕ್‌ಇನ್ ಅಥವಾ ಬೋರ್ಡಿಂಗ್ ಗೇಟ್‌ ಬಳಿ ಸೂಕ್ತ ಗುರುತಿನ ಚೀಟಿ ಅಥವಾ ದಾಖಲೆ ಇಲ್ಲದಿದ್ದರೆ ಮೂಲ ದರವನ್ನು ಸಂಸ್ಥೆ ತನ್ನ ವಶದಲ್ಲಿ ಇರಿಸಿಕೊಳ್ಳಲಿದೆ ಮತ್ತು ಅದನ್ನು ಮರಳಿಸಲಾಗುವುದಿಲ್ಲ. ಅದರ ಮೇಲಿನ ತೆರಿಗೆ ಹಣವನ್ನು ಮಾತ್ರ ಹಿಂದಿರುಗಿಸಲಾಗುತ್ತದೆ.

ಚೆಕ್ ಇನ್ ಮತ್ತು ಬೋರ್ಡಿಂಗ್ ಗೇಟ್‌ಬಳಿ ಗುರುತಿನ ದಾಖಲೆ ನೀಡದೆ ಇದ್ದರೆ ವಿಮಾನ ಏರುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+