ಯುರೋಪ್‌ಗೆ ತೆರಳುವ ಮಾರ್ಗ ಬದಲಿಸಿದ ಏರ್ ಇಂಡಿಯಾ

ನವದೆಹಲಿ, ಜನವರಿ 8: ಇರಾನ್‌ನಲ್ಲಿ ಉಕ್ರೇನ್ ವಿಮಾನ ಅಪಘಾತಕ್ಕೀಡಾದ ಮತ್ತು ಅಮೆರಿಕ ಹಾಗೂ ಇರಾನ್ ಸಂಘರ್ಷ ಉಲ್ಬಣಗೊಳ್ಳುವ ಅಪಾಯವಿರುವುದರಿಂದ ಇರಾನ್‌ನ ವಾಯು ಮಾರ್ಗವನ್ನು ಸದ್ಯಕ್ಕೆ ಬಳಸಿಕೊಳ್ಳದಿರಲು ಏರ್ ಇಂಡಿಯಾ ನಿರ್ಧರಿಸಿದೆ.

ಭಾರತದಿಂದ ಪಾಶ್ಚಿಮಾತ್ಯ ದೇಶಗಳಿಗೆ ತೆರಳಲಿರುವ ಏರ್ ಇಂಡಿಯಾದ ವಿಮಾನಗಳು ಈ ನಿರ್ಧಾರದಿಂದ ಮುಂದಿನ ಬದಲಾವಣೆಯವರೆಗೂ ನಿಗದಿತ ಸ್ಥಳಕ್ಕೆ 20-40 ನಿಮಿಷಗಳಷ್ಟು ತಡವಾಗಿ ತಲುಪಲಿವೆ.

'ಇರಾನ್ ವಾಯುಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇರಾನ್ ಮೇಲೆ ಹಾದುಹೋಗುವ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಲು ನಿರ್ಧರಿಸಲಾಗಿದೆ. ಇದರಿಂದ ದೆಹಲಿಯಿಂದ ತೆರಳುವ ವಿಮಾನಗಳು 20 ನಿಮಿಷ ಮತ್ತು ಮುಂಬೈನಿಂದ ಹೊರಡುವ ವಿಮಾನಗಳು 30-40 ನಿಮಿಷ ಹೆಚ್ಚುವರಿ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

Air India Flights To Europe Avoids Iraninan Airspace

ಇರಾನ್, ಇರಾಕ್, ಒಮನ್ ಗಲ್ಫ್ ಹಾಗೂ ಪರ್ಷಿಯನ್ ಗಲ್ಫ್‌ನ ಜಲಮಾರ್ಗದಲ್ಲಿ ಸಾಗುವಾಗ ಹೆಚ್ಚು ಜಾಗರೂಕತೆ ವಹಿಸುವಂತೆ ಹಾಗೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+