ಏರ್ ಇಂಡಿಯಾದಿಂದ ಟಿಕೆಟ್ ಬುಕ್ಕಿಂಗ್ ಆರಂಭ
ನವದೆಹಲಿ, ಮೇ 8: ಅರ್ಹತೆ ಹೊಂದಿರುವ ಆಯ್ದ ಪ್ರಯಾಣಿಕರಿಗೆ ಆಯ್ದ ತಾಣಗಳಿಗೆ ಪ್ರಯಾಣಿಸಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಏರ್ ಇಂಡಿಯಾ ಕಲ್ಪಿಸಿದೆ. ಲಂಡನ್, ಯುಎಸ್ ಹಾಗೂ ಸಿಂಗಪುರಕ್ಕೆ ತೆರಳಲು ಬಯಸುವ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
Recommended Video
ಮೇ 8 ರಿಂದ 14 ರ ತನಕ ವಿಮಾನ ಹಾರಾಟಕ್ಕೆ ಏರ್ ಇಂಡಿಯಾಕ್ಕೆ ಅನುಮತಿ ಸಿಕ್ಕಿದೆ. ಭಾರತದಿಂದ ಲಂಡನ್, ಸಿಂಗಪುರ ಹಾಗೂ ಯುಎಸ್ಎಯ ಆಯ್ದ ತಾಣಗಳಿಗೆ ತೆರಳಬಹುದಾಗಿದೆ. ಟಿಕೆಟ್ ಬುಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ(http://www.airindia.in/r1landingpage.htm)

ಟಿಕೆಟ್ ಬುಕ್ ಮಾಡುವುದಕ್ಕೂ ಮೊದಲು ಅರ್ಹತಾ ಕೆಟಗರಿಯ ನಿಬಂಧನೆಗಳನ್ನು ಒಮ್ಮೆ ಓದಿಕೊಳ್ಳಿ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೊಚ್ಚಿಯಿಂದ ದುಬೈಗೆ ವಿಮಾನ ಹಾರಾಟವು ಗುರುವಾರದಂದೇ ಆರಂಭವಾಗಿದೆ. ದೆಹಲಿಯಿಂದ ಸಿಂಗಪುರಕ್ಕೆ, ಕ್ಯಾಲಿಕಟ್ ನಿಂದ ದುಬೈ ಗೆ ವಿಮಾನ ಹಾರಾಟ ನಡೆದಿದೆ. ಏರ್ ಇಂಡಿಯಾದ ಪೈಲಟ್ ಹಾಗೂ ಸಿಬ್ಬಂದಿಯ ಸುರಕ್ಷತೆಗಾಗಿ ಒಂದು ಸುತ್ತಿನ ಕೊವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.












Click it and Unblock the Notifications