Delhi Elections 2025: ಈ ಕಾರಣಕ್ಕೆ ಅರವಿಂದ್ ಕೇಜ್ರಿವಾಲ್ ಮೇಲೆ ಚಪ್ಪಲಿ ಎಸೆಯುತ್ತಾರೆ: ಅಸಾದುದ್ದೀನ್ ಓವೈಸಿ

Delhi Elections 2025: ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ರೀತಿ ಇರುವಾಗಲೇ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ದೆಹಲಿ ವಿಧಾನಸಭೆ ಚುನಾವಣೆಗೆ ಎಂಟ್ರಿಕೊಟ್ಟಿದ್ದಾರೆ. ದೆಹಲಿಯಲ್ಲಿ ಫೆಬ್ರವರಿ 5ರಂದು ಚುನಾವಣೆ ನಡೆಯಲಿದೆ. ಈ ಬಾರಿ ಯಾವ ಪಕ್ಷವೂ ಇಲ್ಲಿ ಮೈತ್ರಿ ಮಾಡಿಕೊಂಡಿಲ್ಲ. ಇನ್ನು ಓವೈಸಿ ಅವರ ಎಐಎಂಐಎಂ ಪಕ್ಷವು ಮೊದಲಿನಿಂದಲೂ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿಯಿಂದ ಸಮಾನ ಅಂತರ ಕಾಪಾಡಿಕೊಂಡು ಬಂದಿದೆ. ಇದೀಗ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಎಐಎಂಐಎಂ ಪಕ್ಷದ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನೂ ಕೊಟ್ಟಿದ್ದಾರೆ.

ದೆಹಲಿ ಚುನಾವಣೆ ಈ ಬಾರಿ ಕಳೆದ ಎಲ್ಲಾ ವರ್ಷಗಳಿಗಿಂತಲೂ ಭಿನ್ನವಾಗಿದೆ. ಈ ಬಾರಿ ಹಲವು ಕಾರಣಕ್ಕೆ ದೆಹಲಿ ವಿಧಾನಸಭೆ ಚುನಾವಣೆ ಭಿನ್ನವಾಗಿದೆ. ಎಲ್ಲಾ ದೊಡ್ಡ ಪಕ್ಷಗಳು ಹಾಗೂ ಸಣ್ಣ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿವೆ. 2024ನೇ ಸಾಲಿನಲ್ಲಿ ಕಾಂಗ್ರೆಸ್‌ ವಿವಿಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಇದೀಗ ದೆಹಲಿಯಲ್ಲಿ ಕಾಂಗ್ರೆಸ್‌ ಮೈತ್ರಿ ಇಲ್ಲದೆ ಸ್ಪರ್ಧೆ ಮಾಡುತ್ತಿದೆ. ದೆಹಲಿ ಹೇಳಿಕೇಳಿ ಎಎಪಿ ಭದ್ರಕೋಟೆ ಆದರೆ ಈ ಬಾರಿ ದೆಹಲಿಯಲ್ಲಿ ಎಎಪಿ ತನ್ನ ಅಸ್ತಿತ್ವದ ಹೋರಾವನ್ನು ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿ ದೆಹಲಿಯಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಬಿಜೆಪಿ ಪಕ್ಷ ಕೊಡುತ್ತಿರುವ ಪೈಪೋಟಿ. ಇನ್ನು ಕಾಂಗ್ರೆಸ್‌ ಇಲ್ಲಿ ಬಲಿಷ್ಠವಾಗಿಲ್ಲ. ಆದರೆ ಕಾಂಗ್ರೆಸ್‌ - ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಮುಂದುವರಿದಿದೆ. ಇದೀಗ ಎಐಎಂಐಎಂ ಸಹ ದೆಹಲಿಗೆ ಎಂಟ್ರಿಕೊಟ್ಟಿದೆ.

AIMIMs Asaduddin Owaisi Makes Controversial Statement about AAP s Arvind Kejriwal

ಮೋದಿ - ಅರವಿಂದ್‌ ಕ್ರೇಜಿವಾಲ್ ಇಬ್ಬರು ಒಂದೇ

ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಬ್ಬರೂ ಅಣ್ಣ - ತಮ್ಮ ಇದ್ದಂತೆ, ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಅಸಾದುದ್ದೀನ್‌ ಓವೈಸಿ ಗುಡುಗಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವಾಗಲೇ ವಾಕ್ಸಮರಗಳು ಜೋರಾಗಿವೆ. ಚುನಾವಣಾ ಪ್ರಚಾರಗಳು ಈಗ ದೆಹಲಿಯಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. ಚುನಾವಣೆ ಪ್ರಚಾರ ಸಭೆಯಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಾಗ ಅಸಾದುದ್ದೀನ್‌ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಇಬ್ಬರ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ನಡುವೆ ಅಂತ ಹೇಳಿಕೊಳ್ಳುವ ವ್ಯತ್ಯಾಸವೇನು ಇಲ್ಲ. ಇಬ್ಬರೂ ಆರ್‌ಎಸ್‌ಎಸ್‌ ಸಿದ್ಧಂತದ ಹಿನ್ನೆಲೆಯಿಂದಲೇ ಬಂದಿದ್ದಾರೆ. ಒಬ್ಬರು ಶಾಲೆಯಿಂದ ಬಂದರೆ ಇನ್ನೊಬ್ಬರು‌ ಆರ್‌ಎಸ್‌ಎಸ್‌ ಸಂಸ್ಥೆಯಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ಪಕ್ಷದ ಚಿಹ್ನೆ ಗಾಳಿಪಟಕ್ಕೆ ಮತ ಹಾಕಿ ಅಂತ ಅವರು ಪ್ರಚಾರ ಮಾಡುತ್ತಿದ್ದಾರೆ.

AIMIMs Asaduddin Owaisi Makes Controversial Statement about AAP s Arvind Kejriwal

ಚಪ್ಪಲಿ ಎಸೆಯುತ್ತಾರೆ ಎಂದ ಅಸಾದುದ್ದೀನ್ ಓವೈಸಿ

ದೆಹಲಿಯ ಓಖ್ಲಾ ವಿಧಾನಸಭಾ ಕ್ಷೇತ್ರವನ್ನು ಎಎಪಿ ಕಸದ ಪರ್ವತವನ್ನಾಗಿ ಮಾಡಿದೆ. ಈ ಭಾಗದಲ್ಲಿ ನಾನು ನಡೆದುಕೊಂಡು ಹೋದರೆ ಜನ ನನ್ನ ಮೇಲೆ ಹೂವಿನ ಮಳೆ ಸುರಿಸುತ್ತಾರೆ. ಅದೇ ಕೇಜ್ರಿವಾಲ್‌ ಹೋದರೆ ಅವರ ಮೇಲೆ ಚಪ್ಪಲಿ ಎಸೆಯುತ್ತಾರೆ ಎಂದು ಹೇಳಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+