25 ವರ್ಷದಲ್ಲಿ ಅಯೋಧ್ಯೆಗೆ ಗಾಂಧಿ ಕುಟುಂಬದ ಮೊದಲ ಭೇಟಿ

Posted By:
Subscribe to Oneindia Kannada

ಅಯೋಧ್ಯ, ಸೆ 9: 25 ವರ್ಷದಲ್ಲಿ ಇದೇ ಮೊದಲ ಬಾರಿಗೆ ನೆಹರೂ- ಗಾಂಧಿ ಕುಟುಂಬದ ಸದಸ್ಯರೊಬ್ಬರು ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ (ಸೆ 9) ಬೆಳಗ್ಗೆ ಅಯೋಧ್ಯೆಯ ಹನುಮಾನ್ ಘರೀ ಮಂದಿರಕ್ಕೆ ತೆರಳಿ, ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದ್ದಾರೆ. ರಾಹುಲ್ ಇಪ್ಪತ್ತು ನಿಮಿಷ ಅಯೋಧ್ಯೆಯಲ್ಲಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ್ದಾರೆ. (ಉ.ಪ್ರ ಅಸೆಂಬ್ಲಿ ಚುನಾವಣೆ ಸಮೀಕ್ಷೆ, ಬಿಜೆಪಿಗೆ ಮುನ್ನಡೆ)

1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ ನಂತರ, ನೆಹರೂ- ಗಾಂಧಿ ಕುಟುಂಬದ ಸದಸ್ಯರೊಬ್ಬರು ನೀಡುತ್ತಿರುವ ಮೊದಲ ಭೇಟಿ ಇದಾಗಿರುವುದರಿಂದ, ರಾಹುಲ್ ಅಯೋಧ್ಯೆ ಭೇಟಿಗೆ ಹೆಚ್ಚಿನ ಮಹತ್ವ ಬಂದಿತ್ತು.

ಹನುಮಾನ್ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ರಾಹುಲ್, ಮಹಾಂತರು ಮತ್ತು ಪ್ರಧಾನ ಅರ್ಚಕರನ್ನು ಭೇಟಿಯಾದರು. ಇದಾದ ನಂತರ ಜಿಲ್ಲಾ ಕೇಂದ್ರ ಫೈಜಾಬಾದ್ ನಲ್ಲಿ ಪಕ್ಷದ ಪರವಾಗಿ ರಾಹುಲ್ ರೋಡ್ ಶೋ ನಡೆಸುತ್ತಿದ್ದಾರೆ.

ಅಯೋಧ್ಯೆಗೆ ರಾಹುಲ್ ಭೇಟಿ ನೀಡಿದರೂ, ಹನುಮಾನ್ ಮಂದಿರದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಆವರಣದಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಲಿಲ್ಲ.

ಅಯೋಧ್ಯೆಗೆ ರಾಹುಲ್ ಭೇಟಿಯ ಪ್ರಮುಖಾಂಶಗಳು ಮತ್ತು ಟ್ವಿಟ್ಟಿಗರ ಅಭಿಪ್ರಾಯ, ಸ್ಲೈಡಿನಲ್ಲಿ..

ಹನುಮಾನ್ ಆಶೀರ್ವಾದ ಪಡೆಯಲು

ಹನುಮಾನ್ ಆಶೀರ್ವಾದ ಪಡೆಯಲು

ಸಾಧು ಸಂತರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ರಾಹುಲ್ ಗಾಂಧಿಯವರನ್ನು ಮುಕ್ತ ಮನಸ್ಸಿನಿಂದ ದೇವಾಲಯಕ್ಕೆ ಸ್ವಾಗತಿಸಲಾಗಿದೆ, ನಮ್ಮ ಆಶೀರ್ವಾದ ಪಡೆಯಲು ರಾಹುಲ್ ಬಂದಿದ್ದರು ಎಂದು ದೇವಾಲಯದ ಪ್ರಧಾನ ಅರ್ಚಕ ಮಹಾಂತ್ ಗ್ಯಾನ್ ದಾಸ್ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆ

ಉತ್ತರ ಪ್ರದೇಶ ಚುನಾವಣೆ

ಮುಂದಿನ ವರ್ಷದ ಆದಿಯಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆಯಲಿದೆ. ಶೀಲಾ ದೀಕ್ಷಿತ್ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿಯಾಗಿ ಈಗಾಗಲೇ ಘೋಷಿಸಲಾಗಿದೆ. ಬ್ರಾಹ್ಮಣ ಮತಬ್ಯಾಂಕಿನ ಮೇಲೆ ಕಣ್ಣಿಟ್ಟು ರಾಹುಲ್ ಅಯೋಧ್ಯೆಗೆ ಭೇಟಿ ನೀಡಿದ್ದು, ವಾರಣಾಸಿಯಲ್ಲಿ ಸೋನಿಯಾ ಚುನಾವಣೆ ಪ್ರಚಾರವನ್ನು ಆರಂಭಿಸಿದ್ದೂ ಇದಕ್ಕಾಗಿಯೇ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವೆಲ್ ಡನ್ ರಾಹುಲ್

ರಾಮನ ಊರಿನಲ್ಲಿ ರಾಮಮಂದಿರಕ್ಕೆ ಭೇಟಿ ನೀಡದೇ ಅಯೋಧ್ಯೆಯಲ್ಲಿ ಟೂರ್ ಮಾಡಿದ್ದು - ವೆಲ್ಡನ್

ರಾಹುಲ್ ನಾಲ್ಕನೇ ದಿನದ ಯಾತ್ರೆ

ಹನುಮಾನ್ ಮಂದಿರದಲ್ಲಿ ಪ್ರಾರ್ಥನೆ ನಡೆಸಿ ಯುಪಿಯಲ್ಲಿ ರಾಹುಲ್ ಯಾತ್ರೆ.

ರಾಹುಲ್ ಯುವ ನಾಯಕ

ಅಯೋಧ್ಯೆಯಲ್ಲಿ ರಾಹುಲ್ - ಯುವ ನಾಯಕನ ಡೈನಾಮಿಕ್ ನಾಯಕತ್ವ

ರಾಹುಲ್ ಭೇಟಿ

ರಾಹುಲ್ ಭೇಟಿಗಾಗಿ ಭಕ್ತರು ಮತ್ತು ಅರ್ಚಕರನ್ನೂ ಮಂದಿರದೊಳಗೆ ಬಿಡುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader Rahul Gandhi on Friday (Sep 9) offered prayers at the Hanuman Garhi Temple here, becoming the first member of Nehru-Gandhi family to visit Ayodhya since demolition of the disputed structure in 1992.
Please Wait while comments are loading...