AICC: ಮಹಾರಾಷ್ಟ್ರ & ಜಾರ್ಖಂಡ್ ರಾಜ್ಯಗಳ ಮತ ಎಣಿಕೆ ಮುನ್ನವೇ ಕಾಂಗ್ರೆಸ್ ವೀಕ್ಷಕರ ನೇಮಕ
ನವದೆಹಲಿ, ನವೆಂಬರ್ 22: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ 2024 ಚುನಾವಣೆ ಮುಗಿದು, ನಾಳೆ ನವೆಂಬರ್ 23ರಂದು ಶನಿವಾರ ಮತ ಎಣಿಕೆ ನಡೆಯಲಿದೆ. ಇದಕ್ಕೆ ಒಂದು ದಿನ ಮುನ್ನವೇ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಈ ಎರಡು ರಾಜ್ಯಗಳಿಗೆ ಹಿರಿಯ ನಾಯಕರನ್ನು ವೀಕ್ಷಕರನ್ನಾಗಿ ಶುಕ್ರವಾರ ನೇಮಕ ಮಾಡಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಅಧಿಕಾರ ಯಾರ ಪಾಲಾಗಲಿದೆ ಎಂದು ಶನಿವಾರ ತಿಳಿಯಲಿದೆ. ಇದಕ್ಕು ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎರಡು ರಾಜ್ಯಗಳಿಗೆ ವೀಕ್ಷಕರಾಗಿ ಹಿರಿಯ ನಾಯಕರನ್ನು ನೇಮಿಸಿರುವ ಎಐಸಿಸಿ ಪ್ರಕಟಣೆ ಹೊರಿಡಿಸದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳು ಸಹ ಇದ್ದಾರೆ.

ಮಹಾರಾಷ್ಟ್ರ, ಜಾರ್ಖಂಡ್ ಕಾಂಗ್ರೆಸ್ ವೀಕ್ಷಕರ ಹೆಸರು
ಎಐಸಿಸಿಯು ಮಹಾರಾಷ್ಟ್ರ ರಾಜ್ಯದ ವೀಕ್ಷಕರಾಗಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ಕರ್ನಾಟಕದ ಗೃಹ ಸಚಿವ ಪಕ್ಷದ ಹಿರಿಯ ನಾಯಕ ಜಿ.ಪರಮೇಶ್ವರ್ ಅವರನ್ನು ನೇಮಕ ಮಾಡಲಾಗಿದೆ
ಜಾರ್ಖಂಡ್ ರಾಜ್ಯಕ್ಕೆ ಕಾಂಗ್ರೆಸ್ ವೀಕ್ಷಕರಾಗಿ ತಾರಿಕ್ ಅನ್ವರ್, ಮಲ್ಲು ಭಟ್ಟಿ ವಿಕ್ರಮಮಾರ್ಕ್ ಮತ್ತು ಕೃಷ್ಣ ಅಳ್ಳವೂರು ಅವರನ್ನು ನೇಮಕ ಮಾಡಲಾಗಿದೆ. ಅವರೆಲ್ಲರು ನಾಳೆಯಿಂದಲೇ ಫುಲ್ ಆಕ್ಟಿವ್ ಆಗಲಿದ್ದಾರೆ. ಚುನಾವಣೋತ್ತರ ರಾಜಕೀಯ ಬೆಳವಣಿಗೆಗ ಮೇಲೆ ಕಣ್ಣಿಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದಾರೆ.
Hon'ble Congress President has deputed the following leaders as AICC Observers to Maharashtra and Jharkhand to oversee the post-election scenario, with immediate effect. pic.twitter.com/5yCArx20Jf
— INC Sandesh (@INCSandesh) November 22, 2024
ಚುನಾವಣೋತ್ತರ ಬೆಳವಣಿಗೆ ಮೇಲೆ ವಿಕ್ಷಕರ ನಿಗಾ
ಈಗಾಗಲೇ ಜಾಖಂಡ್ ರಾಜ್ಯದಲ್ಲಿ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಸಿದೆ. ಒಟ್ಟು 81ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಎನ್‌ಡಿಎ ಹಾಗೂ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟಗಳು ಪರಸ್ಪರ ಪೈಪೋಟಿ ಒಡ್ಡಿದ್ದವು.
ಇತ್ತ ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನವೆಂಬರ್ 20 ರಂದು ನಡೆಯಿತು. ಇದು ಬೃಹತ್ ರಾಜ್ಯವಾದ್ದರಿಂದ ಚುನಾವಣೆ ಬಳಿಕ ಬಹುಮತ ಸಾಬೀತು ಇನ್ನಿತರ, ಮೈತ್ರಿ, ಪಕ್ಷಾಂತರ, ಆಪರೇಷನ್ ನಂತಹ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಇದೆಲ್ಲದರ ಮೇಲೆ ವೀಕ್ಷಕರು ನಿಗಾ ವಹಿಸಲಿದ್ದಾರೆ. ಪಕ್ಷದಿಂದ ಯಾರೊಬ್ಬರು ಬೇರೆಯವರ ಕೈಗೆ ಸಿಗದಂತೆ, ಪಕ್ಷ ಸಂಘಟನೆ, ಪಕ್ಷ ಅಧಿಕಾರ ಹಿಡಿಯುವ ಹಂತದವರೆಗೆ ಅಲರ್ಟ್ ಆಗಿರುವಂತೆ ಇವರಿಗೆ ಎಐಸಿಸಿ ಸೂಚನೆ ನೀಡಿದೆ ಎನ್ನಲಾಗಿದೆ.












Click it and Unblock the Notifications