AICC: ಹರಿಯಾಣ ಚುನಾವಣೆಗೆ ಮೂವರು ವೀಕ್ಷಕರ ನೇಮಿಸಿದ ಕಾಂಗ್ರೆಸ್
ನವದೆಹಲಿ, ಸೆಪ್ಟಂಬರ್ 15: ಹರಿಯಾಣ ವಿಧಾನಸಭಾ ಚುನಾವಣೆ 2024 (Haryana Assembly Election) ಕಾವು ಹೆಚ್ಚಾಗುತ್ತಿದೆ. ನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದು, ಪ್ರಚಾರ ಕಾರ್ಯದಲ್ಲಿ ರಾಜಕೀಯ ಪಕ್ಷಗಳು ತೊಡಗಿವೆ. ವಿಜಯಕ್ಕೆ ತಂತ್ರಗಾರಿಕೆ ಹೆಣೆದಿರುವ ಕಾಂಗ್ರೆಸ್ ಪಕ್ಷದ ಮೂವರು ಹಿರಿಯ ನಾಯಕರನ್ನು ಹರಿಯಾಣದ ವೀಕ್ಷಕರನ್ನಾಗಿ ಶನಿವಾರ ಸಂಜೆ ಆದೇಶ ಹೊರಡಿಸಿದೆ.
ಹೌದು, ಪಕ್ಷದ ಹಿರಿಯ ಮುಖಂಡರಾದ ಅಜಯ್ ಮಾಕನ್, ಅಶೋಕ್ ಗೆಹಲೋತ್ ಮತ್ತು ಪರತಾಪ್ ಸಿಂಗ್ ಭಾಜ್ವಾ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈ ನೇಮಕಾತಿಯನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರು ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಅಜಯ್ ಮಾಕನ್ ಖಜಾಂಚಿಯಾಗಿದ್ದಾರೆ, ಪರತಾಪ್ ಸಿಂಗ್ ಭಾಜ್ವಾ ಅವರು ಪಂಜಾಬ್‌ನಲ್ಲಿ ವಿಪಕ್ಷ ನಾಯಕರಾಗಿದ್ದರೆ, ಗೆಹಲೋತ್ ಅವರು ರಾಜಸ್ಥಾನದ ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಅನುಭವ ಇರುವ ಇವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎಐಸಿಸಿ 89 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಬಿಜೆಪಿ ಹಾಗೂ ಎಎಪಿ ವಿರುದ್ಧ ವಿಜಯಪತಾಕೆ ಹಾರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಪೈಕಿ ವೀಕ್ಷಕರ ನೇಮಕಾತಿ ಒಂದಾಗಿದೆ.
ಹರಿಯಾಣದಲ್ಲಿ ಸದ್ಯ ಪ್ರಚಾರದ ಭರಾಟೆ ಜೋರಾಗಿದೆ. ಚುನಾವಣೆ ಅಕ್ಟೋಬರ್ 5ರಂದು ಜರುಗಲಿದೆ. ಮತ ಎಣಿಕೆಗೆ ಅಕ್ಟೋಬರ್ 8ರಂದು ನಡೆಯಲಿದ್ದು, ಅಂದು ರಾಜ್ಯ ರಾಜಕಾರಣದ ಭವಿಷ್ಯ ನಿರ್ಧಾರವಾಗಲಿದೆ.
ಕೇಂದ್ರ ಸರ್ಕಾರದ ಮೇಲೆ ಚುನಾವಣೆ ಫಲಿತಾಂಶದ ಪರಿಣಾಮ
ಇನ್ನೂ ಚುನಾವಣೆ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪೃಥ್ವಿರಾಜ ಚೌವಾಣ್ ಅವರು, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಬಳಿಕ ಸರ್ಕಾರ ಬದಲಾಗಲಿದೆ. ಈ ಚುನಾವಣೆಗಳು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಲಿದೆ ಎಂದು ಭವಿಷ್ಯ ನುಡಿದರು.
ಇನ್ನೂ ಮಹಾರಾಷ್ಟ್ರದಲ್ಲಿ 'ಲಡ್ಕಿ ಬೆಹನ್' ಯೋಜನೆ ಹಿನ್ನೆಲೆಯಲ್ಲಿ ಮಹಿಳೆಯರು ಬಿಜೆಪಿಗೆ ಮತದಾನ ಮಾಡುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಮಹಾವಿಕಾಸ ಅಗಾದಿ (ಎಂವಿಎ) ಪಕ್ಷ ಹೆಚ್ಚು ಸ್ಥಾನ ಪಡೆಯಲಿದೆ. ಬಿಜೆಪಿಗೆ ಮೈತ್ರಿ ಅನಿವಾರ್ಯವಾಗಬಹುದು ಎಂದು ತಿಳಿಸಿದ್ದಾರೆಂದು ಎಎನ್‌ಐ ವರದಿ ಮಾಡಿದೆ.
ಹರಿಯಾಣ ಗಡಿಯಲ್ಲಿ ಮದ್ಯದಂಗತಿ ಬಂದ್, ಯಾವಾಗ?
ಹರಿಯಾಣ ಚುನಾವಣೆ ಪ್ರಯುಕ್ತ ಈ ರಾಜ್ಯಕ್ಕೆ ಮೂರು ಕಿಲೋ ಮೀಟರ್ ಹತ್ತಿರದಲ್ಲಿರುವ ಉತ್ತರ ಪ್ರದೇಶ ರಾಜ್ಯದ ಗಡಿಭಾಗದ ಮದ್ಯದ ಅಂಗಡಿಗಳನ್ನು ಚುನಾವಣೆ (ಅಕ್ಟೋಬರ್ 05) 48 ಗಂಟೆಗೂ ಮೊದಲೇ ಮುಚ್ಚಲಾಗುತ್ತದೆ. ಉತ್ತರ ಪ್ರದೇಶ ಜಿಲ್ಲೆಯ ಹರಿಯಾಣ ಗಡಿಗೆ ಇರುವ ಮಥುರಾ, ಗೌತಮ ಬುದ್ಧ ನಗರ, ಬಾಘಪಾತ್, ಸಹರಾನಪುರ, ಶಾಮ್ಲಿ ಪ್ರದೇಶಗಳಲ್ಲಿನ ಮದ್ಯದಂಗಡಿಗಳು ಬಂದ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications