ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Assembly Elections 2022: ಚುನಾವಣೆಗೂ ಮುನ್ನ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯ ವಶ

|
Google Oneindia Kannada News

ಗಾಂಧಿನಗರ, ನವೆಂಬರ್‌ 30: ಗುಜರಾತ್ ವಿಧಾನಸಭೆ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ₹290 ಕೋಟಿ ಮೌಲ್ಯದ ನಗದು, ಡ್ರಗ್ಸ್ ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಗುರುವಾರ ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Gujarat Election 2022 Phase 1 : ಗುಜರಾತ್‌: ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ? Gujarat Election 2022 Phase 1 : ಗುಜರಾತ್‌: ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ?

ಕಳೆದ ಬಾರಿಯ ಚುನಾವಣೆಯಲ್ಲಿ ವಶಪಡಿಸಿಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಮೌಲ್ಯದ ನಗದು, ಡ್ರಗ್ಸ್‌ ಹಾಗೂ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

Ahead of Gujarat Assembly poll, cash, drugs and liquor worth ₹290 crore seized

2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು ವಶಪಡಿಸಿಕೊಂಡ ಮೊತ್ತ ₹27.21 ಕೋಟಿ ಆಗಿತ್ತು. ಈ ಚುನಾವಣೆಗೂ ಮುನ್ನ ₹290.24 ಕೋಟಿಗಳಷ್ಟನ್ನು ವಶಪಡಿಸಿಕೊಳ್ಳಲಾಗಿದೆ. ಇದು 10.66 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಆಂಟಿ-ಟೆರರ್ ಸ್ಕ್ವಾಡ್ (ATS) ಗುಜರಾತ್‌ನ ಅಧಿಕಾರಿಗಳ ಗುಂಪು ವಡೋದರಾ (ಗ್ರಾಮೀಣ) ಮತ್ತು ವಡೋದರಾ ನಗರದಲ್ಲಿ ತಪಾಸಣೆ ನಡೆಸುತ್ತಿದೆ. ಅಲ್ಲಿ 'ಅಕ್ರಮ ವಸ್ತುಗಳನ್ನು' ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದೆ.

ತಂಡವು ಸುಮಾರು ₹ 478 ಕೋಟಿ ಮೌಲ್ಯದ ಸರಿಸುಮಾರು 143 ಕೆಜಿ ಮೆಫೆಡ್ರೋನ್ (ಸಿಂಥೆಟಿಕ್ ನಾರ್ಕೋಟಿಕ್) ಅನ್ನು ಪತ್ತೆ ಮಾಡಿದೆ ಮತ್ತು ಎರಡು ಮೆಫೆಡ್ರೋನ್ ಔಷಧ ತಯಾರಿಕಾ ಕೇಂದ್ರಗಳನ್ನು ಪತ್ತೆ ಮಾಡಿದೆ.

Ahead of Gujarat Assembly poll, cash, drugs and liquor worth ₹290 crore seized

ಈ ಸಂಬಂಧ ನಾಡಿಯಾಡ್ ಮತ್ತು ವಡೋದರಾದಿಂದ ಐದು ಜನರನ್ನು ಬಂಧಿಸಲಾಗಿದೆ ಮತ್ತು ಅಹಮದಾಬಾದ್‌ನ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ.

1985 ರ ಎನ್‌ಡಿಪಿಎಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ, ಕಾರ್ಯಾಚರಣೆ ಪೂರ್ಣಗೊಂಡ ನಂತರ ಸಂಪೂರ್ಣ ವಿವರಗಳು ಲಭ್ಯವಾಗುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ.

ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 89 ಸ್ಥಾನಗಳ ಪೈಕಿ 2017ರ ಚುನಾವಣೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 40, ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದುಕೊಂಡಿದ್ದರು.

ಗುರುವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 14,382 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಎರಡನೇ ಹಂತದ ಮತದಾನವನ್ನು ಡಿಸೆಂಬರ್ 5ಕ್ಕೆ (ಸೋಮವಾರ) ನಿಗದಿಪಡಿಸಲಾಗಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

English summary
Officials said that cash, drugs and liquor worth ₹290 crore were seized just a day before the Gujarat assembly elections. Elections to 89 seats will be held in Gujarat in the first phase on Thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X