ನಾಳಿದ್ದು ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕ್ ಸ್ಟ್ರೈಕ್

'ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ಪ್ರಸ್ತಾವನೆ'ಯನ್ನು ಪ್ರತಿಭಟಿಸಿ ಈ ಹಿಂದೆಯೂ ಅನೇಕ ಬಾರಿ ಬ್ಯಾಂಕ್ ಮುಷ್ಕರ ನಡೆಯುತ್ತಾ ಬಂದಿದ್ದು ಈಗ ಮತ್ತೊಮ್ಮೆ ಸೆ. 25ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ.
ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸುವ ಸಲುವಾಗಿ ಕಾರ್ಮಿಕ ಯೂನಿಯನ್ ಕರೆ ಕೊಟ್ಟಿರುವ ಬುಧವಾರದ ಮುಷ್ಕರದಲ್ಲಿ ಎಲ್ಲ ಬ್ಯಾಂಕ್ ಯೂನಿಯನ್ನುಗಳು ಸೇರಿಕೊಳ್ಳಲಿವೆ.
ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಮತ್ತು ಭಾರತೀಯ ಬ್ಯಾಂಕ್ ನೌಕರರ ಫೆಡರೇಶನ್ ಫೆ. 25ರಂದು ಮುಷ್ಕರಕ್ಕೆ ಕರೆಕೊಟ್ಟಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧೀನ ಬ್ಯಾಂಕುಗಳ ಸಹಿತ ವಿವಿಧ ಬ್ಯಾಂಕುಗಳನ್ನು ವಿಲೀನಗೊಳಿಸುವ ಪ್ರಸ್ತಾವ ಕೇಂದ್ರ ಸರಕಾರದ ಮುಂದೆ ಇದೆ. ಸ್ಟೇಟ್ ಬ್ಯಾಂಕಿನ ಅಧೀನ ಬ್ಯಾಂಕುಗಳಿಗೆ ಸ್ವಾಯತ್ತೆ ನೀಡಬೇಕೆಂದು ಯೂನಿಯನ್ನುಗಳು ಒತ್ತಾಯಿಸುತ್ತಿವೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್ ಲೈಸೆನ್ಸ್ ಕೊಡುವ ಆರ್ ಬಿಐ ನಿರ್ಧಾರವನ್ನು ಬ್ಯಾಂಕ್ ನೌಕರರ ಯೂನಿಯನ್ನುಗಳು ವಿರೋಧಿಸುತ್ತಿವೆ.












Click it and Unblock the Notifications