ಅಫ್ಜಲ್ ಗುರು ಈತನ ಹೃದಯಕ್ಕೆ ಹತ್ತಿರವಾಗಿದ್ದನಂತೆ!

Subscribe to Oneindia Kannada

ನವದೆಹಲಿ, ಫೆಬ್ರವರಿ, 24: ಜವಾಹರಲಾಲ್ ನೆಹರೂ ವಿವಿ ಗಲಾಟೆಗೆ ಸಂಬಂಧಿಸಿ ಪೊಲೀಸರಿಗೆ ಶರಣಾಗಿರುವ ಉಮರ್ ಖಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ವಿಚಾರಣೆ ವೇಳೆ ಹಲವಾರು ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ.

ಅಫ್ಜಲ್ ಗುರು ಪರ ನಡೆದ ಕಾರ್ಯಕ್ರಮದಲ್ಲಿ ಇವರೇ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ. ಅಫ್ಜಲ್ ಗುರು ನನ್ನ ಹೃದಯಕ್ಕೆ ಹತ್ತಿರವಾಗಿದ್ದ ಎಂದು ಉಮರ್ ಖಲೀದ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.[ನಕಲಿ ವಿಡಿಯೋ ಮಾಡಿದ್ರೆ ಲಾಭ ಏನು? ರಾಹುಲ್ ಪ್ರಶ್ನೆ]

new delhi

ನಿಮಗೆ ಇಂಥ ಕಾರ್ಯಕ್ರಮ ಆಯೋಜಿಸಲು ಹಣ ಎಲ್ಲಿಂದ ಬಂದಿತು? ಪ್ರೇರಣೆ ಸಿಕ್ಕಿದ್ದು ಎಲ್ಲಿ? ಎಂದು ಮುಂತಾಗಿ ಪೊಲೀಸರು ಪ್ರಶ್ನೆ ಮಾಡಿದ ವೇಳೆ ವಿಚಾರಗಳು ಹೊರಕ್ಕೆ ಬಂದಿವೆ.[ಜೆಎನ್‌ಯು ಗಲಭೆ : ಉಮರ್ ಖಾಲಿದ್‌ಗೆ 5 ಪ್ರಶ್ನೆಗಳು]

ದೇಶದ್ರೋಹದ ಘೋಷಣೆ ಕೂಗಿಲ್ಲ
ಆದರೆ ನಾವು ದೇಶ ದೇಶದ್ರೋಹದ ಘೋಷಣೆ ಕೂಗಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ. ಅಫ್ಜಲ್ ಗುರು ನನ್ನ ಹೃದಯಕ್ಕೆ ಹತ್ತಿರವಾಗಿದ್ದ. ಅದೇ ಕಾರಣಕ್ಕೆ ಕಾರ್ಯಕ್ರಮ ಆಯೋಜನೆಗೆ ಮುಂದಾಗಿದ್ದೇವು ಎಂದು ಉಮರ್ ಹೇಳಿಕೆ ನೀಡಿದ್ದಾನೆ.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಪೊಲೀಸ್ ವಶಕ್ಕ ಕನ್ಹಯ್ಯ ಕುಮಾರ್?
ದೇಶ ದ್ರೋಹದ ಆರೋಪ ಎದುರಿಸುತ್ತಿರುವ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯ ಇದೆ ಎಂದು ದೆಹಲಿ ಪೊಲೀಸರು ಹೈಕೋರ್ಟ್ ಗೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Umar Khalid and Anirban Bhattacharya arrested in connection with the JNU row have told the police that while they had a hand in organising the Afzal Guru event, the anti national slogans were raised by outsiders. The duo who surrendered before the Delhi Police late last night have been questioned for a little over five hours now. They are likely to be produced before the court today where their custody would sought.
Please Wait while comments are loading...