ಒಂದೇ ಒಂದು ಬುಲೆಟ್ ಹಾರಿಸದೇ ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀಡುತ್ತಿರುವ ಶಾಕ್
Recommended Video

ಹುತಾತ್ಮರಾದ ಸೈನಿಕರ ಒಂದೊಂದು ರಕ್ತಕ್ಕೂ ಪ್ರತೀಕಾರ ತೀರಿಸದೇ ಬಿಡೆವು ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡೆವು ಎಂದು ಪ್ರಧಾನಿಗಳು ಹೇಳಿದ್ದಾರೆ. ಪ್ರತೀಕಾರ ಹೇಗೆ, ಎಲ್ಲಿ ಯಾವಾಗ ಎನ್ನುವುದನ್ನು ನಮ್ಮ ಸೇನೆ ನಿರ್ಧರಿಸಲಿದೆ ಎಂದು ಮೋದಿ ಮತ್ತೆ ಗುಡುಗಿದ್ದಾರೆ.
ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ದೇಶದ ವಿಚಾರವಾದಿಗಳ ಮೇಲೆ ಭಾರತೀಯರಿಗೆ ಯಾವರೀತಿ ಆಕ್ರೋಶವಿದೆ ಎನ್ನುವುದು ನವಜೋತ್ ಸಿಂಗ್ ಸಿದ್ದು, ಪ್ರಕಾಶ್ ರೈ ಅವರ ಘಟನೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಚೀನಾ ಹೊರತುಪಡಿಸಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಭಾರತದ ಬೆನ್ನಿಗೆ ನಿಂತಿದೆ. ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಕುಟುಂಬ ಮತ್ತು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ದೇಶದ ಉದ್ಯಮಿಗಳು, ಸೆಲೆಬ್ರಿಟಿಗಳು ಸಾಲುಸಾಲಿನಲ್ಲಿ ನಿಂತಿದ್ದಾರೆ.
ಸೇನೆಗೆ ಫ್ರೀ ಹ್ಯಾಂಡ್ ನೀಡಿರುವ ಪ್ರಧಾನಿ, ನಮ್ಮ ಸೈನಿಕರ ಮೇಲೆ ನಂಬಿಕೆಯಿಡಿ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಈ ನಡುವೆ, ಒಂದೇ ಒಂದು ಬುಲೆಟ್ ಹಾರಿಸದೇ, ಪಾಕಿಸ್ತಾನಕ್ಕೆ ಕೇಂದ್ರ ಸರಕಾರ ಶಾಕ್ ನೀಡುತ್ತಿರುವುದು ಹೀಗೆ..

ದೇಶದೊಳಗಿನ ದ್ರೋಹಿಗಳ ವಿರುದ್ದ ಕಠಿಣ ಕ್ರಮ
ಪಾಕಿಸ್ತಾನಕ್ಕೆ ಪಾಠ ಕಲಿಸುವುದರ ಜೊತೆಗೆ, ದೇಶದೊಳಗಿನ ದ್ರೋಹಿಗಳ ವಿರುದ್ದ ಕಠಿಣ ಕ್ರಮ ಅವಶ್ಯಕ. ಅದರಂತೇ, ಕಾಶ್ಮೀರ ಕಣಿವೆಯಲ್ಲಿ ಯಾರೇ ದೇಶ ವಿರೋಧಿ ಚಟುವಟಿಕೆ ನಡೆಸಿದರೂ, ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಸೇನೆಗೆ ಸೂಚಿಸಿದ್ದಾರೆ. ಕಾಶ್ಮೀರದಲ್ಲಿ ಕಾರ್ಯಾಚರಣೆ ಚುರುಕುಗೊಂಡಿದ್ದು, ಅಲ್ಲಿನ ಯುವಕರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಲು ಎನ್ಸಿಪಿ ಮುಖ್ಯಸ್ಥ ಓಮರ್ ಅಬ್ದುಲ್ಲಾ ದೆಹಲಿಗೆ ದೌಡಾಯಿಸಿದ್ದಾರೆ.

ಮೋಸ್ಟ್ ಫೇವರ್ಡ್ ನೇಷನ್ ಪಟ್ಟಿಯಿಂದ ಪಾಕಿಸ್ತಾನ ಔಟ್
ಪುಲ್ವಾಮಾ ಘಟನೆ ನಡೆದ 24ಗಂಟೆಯಲ್ಲಿ ಭಾರತ 1996ರಿಂದ ಜಾರಿಯಲ್ಲಿದ್ದ MNF (ಮೋಸ್ಟ್ ಫೇವರ್ಡ್ ನೇಷನ್) ಪಟ್ಟಿಯಿಂದ ಪಾಕಿಸ್ತಾನವನ್ನು ಹೊರದಬ್ಬಿದೆ. ರಾಜತಾಂತ್ರಿಕವಾಗಿ ಎರಡು ದೇಶಗಳ ನಡುವೆ ಮುಂದೆ ನಡೆಯಬಹುದಾದ ದ್ವಿಪಕ್ಷೀಯ ಸಂಬಂಧಗಳಿಗೆ ಇದರಿಂದ ತೊಂದರೆಯಾದರೂ, ಭಾರತದ ಈ ನಿರ್ಧಾರದಿಂದ ಪಾಕಿಸ್ತಾನದ ವಾಣಿಜ್ಯ ಮಾರುಕಟ್ಟೆಗೆ ಭಾರೀ ಹೊಡೆತ ಬೀಳಲಿದೆ.

ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರದಾಳಿ
ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಉಗ್ರದಾಳಿಯ ನಂತರ, ಭಯೋತ್ಪಾದಕರ ತವರೂರು ಪಾಕಿಸ್ತಾನ ಎನ್ನುವುದನ್ನು ವಿಶ್ವಕ್ಕೆ ಮನದಟ್ಟು ಮಾಡಲು ಭಾರತ ಬಹುತೇಕ ಯಶಸ್ವಿಯಾಗಿದೆ. ಚೀನಾ ಹೊರತು ಪಡಿಸಿ, ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ಪರವಾಗಿ ನಿಂತಿದೆ. 48ರಾಷ್ಟ್ರಗಳ ವಿದೇಶಾಂಗ ಸಚಿವರು, ಪಾಕ್ ಹಣೆಯಲು ಒಂದಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವ ಎಲ್ಲಾ ಪ್ರಯತ್ನಗಳು ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಇದರಿಂದ, ಪಾಕಿಸ್ತಾನಕ್ಕೆ ಯಾವ ಆರ್ಥಿಕ ಬೆಂಬಲವೂ ಸಿಗುವ ಸಾಧ್ಯತೆ ಕಮ್ಮಿ.
|
ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಭಾರತ ಶೇ. 200 ಸುಂಕ
ಉಗ್ರದಾಳಿ ನಡೆದ 48ಗಂಟೆಯಲ್ಲಿ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಭಾರತ ಶೇ. 200 ಸುಂಕ ವಿಧಿಸುವ ಮೂಲಕ ಭರ್ಜರಿ ಶಾಕ್ ನೀಡಿದೆ. ಸರ್ವಪಕ್ಷಗಳ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆಯ ನಿಂತರ ಮೋದಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಈ ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಮೊದಲೇ ದಿವಾಳಿ ಹಂತದಲ್ಲಿರುವ ಪಾಕಿಸ್ತಾನಕ್ಕೆ, ಆಮದು ಸುಂಕದ ಭಾರತದ ನಿರ್ಧಾರ, ಇನ್ನಷ್ಟು ಆರ್ಥಿಕ ಪೆಟ್ಟನ್ನು ನೀಡಲಿದೆ.

ಕಾಶ್ಮೀರದ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿರುವ ವಿಶೇಷ ಭದ್ರತೆ ವಾಪಸ್
ಈ ತಕ್ಷಣದಿಂದಲೇ ಜಾರಿಗೆ ಬರುವಂತೆ (ಫೆ 17) ಕಾಶ್ಮೀರದ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿರುವ ವಿಶೇಷ ಭದ್ರತೆಯನ್ನು ಜಮ್ಮು ಕಾಶ್ಮೀರ ರಾಜ್ಯಾಡಳಿತ ಹಿಂದಕ್ಕೆ ಪಡೆದುಕೊಂಡಿದೆ. ಮಿರ್ವಾಜ್ ಉಮರ್ ಫಾರೂಕ್, ಅಬ್ಧುಲ್ ಗನಿಭಟ್, ಬಿಲಾಲ್ ಲೋನ್, ಹಶೀಮ್ ಖುರೇಷಿ ಮತ್ತು ಶಬ್ಬೀರ್ ಶಾ ಅವರಿಗೆ ನೀಡಲಾಗಿದ್ದ ವಿಶೇಷ ಸವಲತ್ತು ಮತ್ತು ಭದ್ರತೆಯನ್ನು ಹಿಂದಕ್ಕೆ ಪಡೆದು, ಮೋದಿ ಸರಕಾರ ಶಾಕ್ ನೀಡಿದೆ. ಭಾರತದಲ್ಲಿದ್ದು ಮಾತೃಭೂಮಿಗೆ ದ್ರೋಹ ಬಗೆಯುತ್ತಿರುವವರಿಗೆ ಇದು ಭರ್ಜರಿ ಶಾಕ್ ಎಂದು ವ್ಯಾಖ್ಯನಿಸಲಾಗುತ್ತಿದೆ.












Click it and Unblock the Notifications