ಉತ್ತರಾಖಂಡದಲ್ಲೂ ಗಣ್ಯರ ಜಯಂತಿಗಳಿಗಿಲ್ಲ ರಜೆ

Posted By:
Subscribe to Oneindia Kannada

ಡೆಹ್ರಾಡೂನ್‌, ಮೇ 12 : ಉತ್ತರಪ್ರದೇಶ ಸರ್ಕಾರದ ಬಳಿಕ ಇದೀಗ ಉತ್ತರಾಖಂಡ ಸರ್ಕಾರ ಗಣ್ಯರ ಜನ್ಮದಿನ ಹಾಗೂ ಪುಣ್ಯಸ್ಮರಣೆಗೆ ಶಾಲಾ, ಕಾಲೇಜುಗಳಿಗೆ ರಜೆ ನೀಡುವ ಸಂಪ್ರದಾಯವನ್ನು ರದ್ದುಗೊಳಿಸಲು ತೀರ್ಮಾನಿಸಿದೆ .

'ಇಂತಹ ದಿನಗಳಲ್ಲಿ ರಜೆ ನೀಡಿದರೆ ಆ ಗಣ್ಯರ ಸಾಧನೆಗಳ ಬಗ್ಗೆ ತಿಳಿಯುವ ಅವಕಾಶದಿಂದ ಯುವಜನರನ್ನು ವಂಚಿಸಿದಂತಾಗುತ್ತದೆ ಇದರಿಂದ ಶಾಲಾ, ಕಾಲೇಜುಗಳಿಗೆ ರಜೆಗಳನ್ನು ರದ್ದುಗೊಳಿಸಲು ಯೋಚಿಸಲಾಗಿದೆ' ಎಂದು ಉತ್ತರಾಖಂಡ ಉನ್ನತ ಶಿಕ್ಷಣ ಸಚಿವ ಧನ್ ಸಿಂಗ್‌ ರಾವತ್‌ ಹೇಳಿದ್ದಾರೆ.

After UP, Uttarakhand may cancel holidays on birth anniversaries of icons

ಇತ್ತೀಚೆಗೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತರ ಪ್ರದೇಶದಲ್ಲೂ ಮಾಹಾನ್ ವ್ಯಕ್ತಿಗಳ ಜಯಂತಿ ದಿನಗಳಂದು ಶಾಲಾ- ಕಾಲೇಜುಗಳಿಗೆ ನೀಡಲಾಗುತ್ತಿದ್ದ ರಜೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.

ಇದಾದ ಬಳಿಕ ದೆಹಲಿ ಸರ್ಕಾರವು ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Uttarakhand government is preparing to do away with the tradition of having holidays in schools and colleges on the birth anniversaries of national and state icons.
Please Wait while comments are loading...