ಜಿಎಸ್ಟಿ ಪರಿಣಾಮ, ಯಾವುದು ಏರಿಕೆ? ಯಾವುದು ಇಳಿಕೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04: ಸೇವಾ ತೆರಿಗೆ ಮಸೂದೆಯನ್ನು (ಜಿಎಸ್ಟಿ) ರಾಜ್ಯಸಭೆಯಲ್ಲಿ ಬುಧವಾರ ಮಂಡನೆಯಾಗಿ ಬೆಂಬಲ ಪಡೆದುಕೊಂಡಿದೆ. ಕಾನೂನು ಜಾರಿಯಾಗಲು ಇನ್ನೂ ಸಮಯವಿದೆ. ಆದರೆ, ಒಮ್ಮೆ ಜಿಎಸ್ಟಿ ಜಾರಿಯಾದರೆ ಯಾವೆಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ, ಯಾವೆಲ್ಲ ಪದಾರ್ಥ ಅಗ್ಗವಾಗಲಿದೆ ಎಂಬುದರ ಬಗ್ಗೆ ಈಗಲೇ ಗುರುತಿಟ್ಟುಕೊಳ್ಳಿ.

ಸರಕು ಮತ್ತು ಸೇವಾ ತೆರಿಗೆ GST (Goods and Services Tax Bill) ವಿಧೇಯಕ ಮೂಲಕ ದೇಶದಾದ್ಯಂತ ಏಕರೂಪ ತೆರಿಗೆ ಜಾರಿಗೊಳಿಸಲಾಗುತ್ತದೆ. ಹೊಸ ತೆರಿಗೆಗಳು ಏಪ್ರಿಲ್ 01, 2017ರಿಂದ ಅನ್ವಯವಾಗುವ ಸಾಧ್ಯತೆಯಿದೆ. [ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

ಸಾಮಾನ್ಯವಾಗಿ ಒಂದು ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವವರೆಗೆ ಅನೇಕ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಪ್ರತಿ ರಾಜ್ಯಗಳು ಇದಕ್ಕೆ ಸೆಸ್, ವ್ಯಾಟ್ ಕೂಡಾ ಸೇರಿಸುತ್ತವೆ. ಆದರೆ, ಜಿಎಸ್ಟಿ ಬಿಲ್ ಜಾರಿ ಆದರೆ ಉತ್ಪಾದನೆ, ಮಾರಾಟ ಮತ್ತು ಬಳಕೆ ಮೇಲೆ ಭಾರತದಾದ್ಯಂತ ಏಕರೂಪದ ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. [ಜೂ.1 ರಿಂದ ಯಾವುದು ತುಟ್ಟಿ? ಯಾವುದು ಅಗ್ಗ?]

ಹೊಸ ಆರ್ಥಿಕ ನೀತಿಯ ಪರಿಣಾಮ

ಹೊಸ ಆರ್ಥಿಕ ನೀತಿಯ ಪರಿಣಾಮ

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಹೊಸ ಆರ್ಥಿಕ ನೀತಿಯ ಹೊಸ ಬಿಸಿ ಜೂನ್ 1 ರಿಂದಲೇ ಜನತೆಗೆ ತಟ್ಟಲಿದೆ. ಸೇವಾ ತೆರಿಗೆ ಹೆಚ್ಚಳದಿಂದಾಗಿ ಹೋಟೆಲ್, ಮೊಬೈಲ್, ರೈಲು, ವಿಮಾನಯಾನ, ಬ್ಯಾಂಕಿಂಗ್, ವಿಮೆ, ಕ್ರೆಡಿಟ್ ಕಾರ್ಡ್, ಕಟ್ಟಡ ನಿರ್ಮಾಣ ದುಬಾರಿಯಾಗಲಿದೆ. ದೇಶಿ ಮೊಬೈಲ್ ಫೋನ್, ಸೌರಶಕ್ತಿ ಉತ್ಪನ್ನ, ಅಗರಬತ್ತಿ, ಓವನ್ ಮುಂತಾದವು ಅಗ್ಗವಾಗಲಿದೆ. ಈಗ ಸೇವೆ ಉಳ್ಳ ಎಲ್ಲಾ ವಿಭಾಗಕ್ಕೂ ಜಿಎಸ್ ಟಿ ಬರಲಿದೆ.

ಮೊಬೈಲ್ ಬಿಲ್ ದರ ಏರಿಕೆ

ಮೊಬೈಲ್ ಬಿಲ್ ದರ ಏರಿಕೆ

ಪ್ರತಿ ತಿಂಗಳ ಮೊಬೈಲ್ ಬಿಲ್ ಗೆ ಹೊಸದಾಗಿ ರಾಜ್ಯದ ಜಿಎಸ್ ಟಿ ಸೇರ್ಪಡೆಯಾಗಲಿದೆ. ಶೇ 14ರಷ್ಟು ಬಿಲ್ ಮೊತ್ತಕ್ಕೆ ಶೇ 0.5ರಷ್ಟು ಸ್ವಚ್ಛ ಭಾರತ ಸೆಸ್ ಹಾಗೂ ಶೇ 0.5ರಷ್ಟು ಕೃಷಿ ಕಲ್ಯಾಣ ಸೆಸ್ ಎಲ್ಲವೂ ಸೇರಿ ಶೇ 15ರಷ್ಟು ಸೇವಾ ತೆರಿಗೆ ಈಗ ಸದ್ಯಕ್ಕಿದೆ. ಇದರ ಜೊತೆಗೆ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಮುಂತಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ ಶೇ 18ರ ಆಸುಪಾಸಿನಲ್ಲಿ ತೆರಿಗೆ ಕಟ್ಟಲು ತಯಾರಾಗಿ

ಹೊಟೆಲ್ ಊಟ ಇನ್ನಷ್ಟು ದುಬಾರಿ

ಹೊಟೆಲ್ ಊಟ ಇನ್ನಷ್ಟು ದುಬಾರಿ

ಜೂ.1ರಿಂದ ಸೇವಾ ತೆರಿಗೆ ಶೇ 12.36 ರಿಂದ ಶೇ 14.5ಕ್ಕೆ ಏರಿಕೆಯಾಗಿದೆ. ಹೋಟೆಲ್ ಗಳು ಈಗ ಬಿಲ್ ಮೇಲೆ ಶೇ 0.5ರಷ್ಟು ಸೆಸ್ ಹಾಕುತ್ತಿದ್ದಾರೆ. ಇದರಿಂದ ಹೋಟೆಲ್ ಬಿಲ್ ದುಬಾರಿಯಾಗಲಿದೆ. ಇದು ಎಲ್ಲಾ ಸಣ್ಣ ಪುಟ್ಟ ಹೋಟೆಲ್, ದರ್ಶಿನಿ, ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಗಳಿಗೂ ಅನ್ವಯವಾಗಲಿದೆ. ಜಿಎಸ್ ಟಿ ಜಾರಿಯಾದ ಮೇಲೆ ಸೇವಾ ತೆರಿಗೆ ಬದಲಿಗೆ ಒಟ್ಟಾರೆ ಶೇ 18ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ವಿಮಾನಯಾನ ಟಿಕೆಟ್ ದರ ಏರಿಕೆ

ವಿಮಾನಯಾನ ಟಿಕೆಟ್ ದರ ಏರಿಕೆ

ದೇಶಿ, ವಿದೇಶಿ ವಿಮಾನಯಾನ ಟಿಕೆಟ್ ದರದ ಜೊತೆಗೆ ಶೇ 14ರಷ್ಟು ಸೇವಾ ತೆರಿಗೆ ಸೇರ್ಪಡೆಗೊಂಡಿದೆ. ಈಗ ಜಿಎಸ್ ಟಿ ಬಂದ ಮೇಲೆ ವಿಮಾನದಲ್ಲಿ ಪ್ರಯಾಣ ದುಬಾರಿಯಾಗಲಿದೆ. ಇದಲ್ಲದೆ ರಸ್ತೆ ಸಾರಿಗೆ ಪ್ರಯಾಣದಲ್ಲಿ ಕೆಲವು ವಿನಾಯತಿ ಟಿಕೆಟ್ ಮೇಲೆ ಮಾತ್ರ ಸೇವಾ ತೆರಿಗೆಯಿಂದ ಮುಕ್ತಿ ಸಿಗಬಹುದು. ಮಿಕ್ಕಂತೆ ವಿಮಾನಯಾನ ದುಪ್ಪಟ್ಟಾಗಲಿದೆ.

ಶಿಕ್ಷಣ ಸೆಸ್, ವಿಮೆ ಎಲ್ಲಾ ಏರಿಕೆ

ಶಿಕ್ಷಣ ಸೆಸ್, ವಿಮೆ ಎಲ್ಲಾ ಏರಿಕೆ

ಜೂ.1ರಿಂದ ಸೇವಾ ತೆರಿಗೆ ಶೇ 14.5ರಷ್ಟು ಹೆಚ್ಚಳದ ಜೊತೆಗೆ ಎಜುಕೇಷನ್ ಸೆಸ್ ಕೂಡಾ ಜಾಸ್ತಿಯಾಗಲಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳಿಂದ ಹೆಚ್ಚಿನ ಬಿಲ್ ನಿರೀಕ್ಷೆ ಜೊತೆಗೆ ಶೇ 18ರಷ್ಟು ಜಿಎಸ್ ಟಿ ಹೇರಿಕೆಯಾಗಲಿದೆ.

ಸೇವಾ ಆಧಾರಿತ ಏರಿಕೆಗಳು

ಸೇವಾ ಆಧಾರಿತ ಏರಿಕೆಗಳು

ಜೂ.1, 2015ರಿಂದ ಡಿಟಿಎಚ್, ಬ್ಯೂಟಿ ಪಾರ್ಲರ್, ಟ್ಯಾಕ್ಸಿ, ಕ್ಯಾಬ್ ಸೇವೆ, ವಿಮೆ, ಕೊರಿಯರ್, ಲಾಂಡ್ರಿ ಎಲ್ಲವೂ ದುಬಾರಿಯಾಗಿದೆ. ಈಗ ಇವೆಲ್ಲವೂ ಶೇ 15ರ ಬದಲಿಗೆ ಶೇ 18ರ ಜಿಎಸ್ ಟಿಗೆ ಬದಲಾಗಲಿವೆ.

 ಯಾವೆಲ್ಲ ಪದಾರ್ಥ, ಸೇವೆ ಇಳಿಕೆ

ಯಾವೆಲ್ಲ ಪದಾರ್ಥ, ಸೇವೆ ಇಳಿಕೆ

* ಕಡಿಮೆ ಬಜೆಟ್ಟಿನ ಸಣ್ಣಕಾರು, ದ್ವಿಚಕ್ರವಾಹನ, ಕೆಲವು ಎಸ್ ಯುವಿಗಳು
* ಕಾರು ಬ್ಯಾಟರಿಗಳು ಇಳಿಕೆಯಾಗಲಿವೆ.
* ಸಿಮೆಂಟ್, ಪೇಯಿಂಟ್, ಎಲೆಕ್ಟ್ರಾನಿಕ್ ವಸ್ತುಗಳಾದ ಫ್ಯಾನ್, ಲೈಟಿಂಗ್ಸ್, ವಾಟರ್ ಹೀಟರ್, ಏರ್ ಕೂಲರ್ ..ಇತ್ಯಾದಿಗಳು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Some of the key services that will attract higher tax and hence become costlier are: Railways, Airlines, Banking, Insurance, Advertising, Architecture, Construction, Credit cards, Event management and tour operators.
Please Wait while comments are loading...