ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಗೆ ಸಡ್ಡು ಹೊಡೆದ ಏರ್ಟೆಲ್, ಐಡಿಯಾ; 345 ರೂ. 28ಜಿಬಿ!

ರಿಲಾಯನ್ಸ್ ಜಿಯೋದ ಪ್ರೈಮ್ ಆಫರ್ ಬಿಡುಗಡೆಯಾಗುತ್ತಿದ್ದಂತೆ ಏರ್ಟೆಲ್ ಹಾಗೂ ಐಡಿಯಾ ಕೂಡಾ ದರ ಸಮರದ ಅಖಾಡಕ್ಕೆ ಇಳಿದಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 5: ರಿಲಾಯನ್ಸ್ ಜಿಯೋದ ಪ್ರೈಮ್ ಆಫರ್ ಬಿಡುಗಡೆಯಾಗುತ್ತಿದ್ದಂತೆ ಏರ್ಟೆಲ್ ಹಾಗೂ ಐಡಿಯಾ ಕೂಡಾ ದರ ಸಮರದ ಅಖಾಡಕ್ಕೆ ಇಳಿದಿದೆ.

ಏರ್ಟೆಲ್ 28 ದಿನಗಳಿಗೆ 28 ಜಿಬಿ ಡೇಟಾ ನೀಡುವುದಾಗಿ ಹೇಳಿದ್ದು ಐಡಿಯಾ ಅದರ ಅರ್ಧ ಅಂದರೆ14 ಜಿಬಿ ಡೇಟಾ ಆಫರ್ ಬಿಡುಗಡೆ ಮಾಡಿದೆ. ಜತೆಗೆ ಉಚಿತ ಎಸ್.ಟಿ.ಡಿ ಮತ್ತು ಸ್ಥಳೀಯ ಕರೆಗಳೂ ಇರಲಿವೆ.

ಈಗಾಗಲೇ ಜಿಯೋ 303 ರೂಪಾಯಿಯ ಪ್ರೈಮ್ ಪ್ಯಾಕ್ ಬಿಡುಗಡೆ ಮಾಡಿದೆ. ಇದರ ಪ್ರಕಾರ ದಿನಕ್ಕೆ ಒಂದು ಜಿಬಿ ಹೈ ಸ್ಪೀಡ್ ಡೇಟಾ ಹಾಗೂ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ ಕರೆಗಳು ಇರಲಿವೆ. ಒಂದು ಜಿಬಿ ಬಳಕೆ ಮಾಡಿದ ನಂತರವೂ ಡೇಟಾ ಸಿಗಲಿದೆ; ಆದರೆ ವೇಗ 128 ಕೆಬಿ/ಸೆ ಇಳಿಯಲಿದೆ ಅಷ್ಟೆ. ಪ್ರೈಮ್ ಸೇವೆ ಪಡೆಯಲು ವರ್ಷಕ್ಕೆ 99 ರೂಪಾಯಿ ಪಾವತಿಸಿ ಸದಸ್ಯರಾಗಬೇಕು.

ಏರ್ಟೆಲ್ ಪ್ಲಾನ್

ಏರ್ಟೆಲ್ ಪ್ಲಾನ್

ಏರ್ಟೆಲ್ 345 ರೂಪಾಯಿಗೆ ಅನ್ ಲಿಮಿಟೆಡ್ ಕರೆ ಸೇವೆ ನೀಡುತ್ತಿದೆ. 28 ದಿನಗಳ ಅವಧಿಗೆ ಈ ಸೇವೆ ಇರಲಿದೆ. ಇನ್ನು ದಿನಕ್ಕೆ 1 ಜಿಬಿ ಡೇಟಾ ಬಳಸಿಕೊಳ್ಳಬಹುದು. ಆದರೆ ಒಂದು ಕಂಡೀಷನ್.

ಏನಿದು ಕಂಡೀಷನ್

ಏನಿದು ಕಂಡೀಷನ್

ಆದರೆ ಇದಕ್ಕೆ ಸಮಯದ ನಿಯಂತ್ರಣ ಇದೆ. ಅಂದರೆ ನೀವು ಹಗಲು 500 ಎಂಬಿ ಹಾಗೂ ರಾತ್ರಿ 500 ಎಂಬಿ ಬಳಸಿಕೊಳ್ಳಬಹುದು. ಅಂದಹಾಗೆ ರಾತ್ರಿ ಅಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗಿನ ಅವಧಿ. ಹಗಲು 1ಜಿಬಿ ಬಳಸಿಕೊಳ್ಳಲು ಅವಕಾಶ ಇಲ್ಲ.

549 ರೂ. ಗೆ ಇನ್ನೊಂದು ಆಫರ್

549 ರೂ. ಗೆ ಇನ್ನೊಂದು ಆಫರ್

ಹಗಲು ರಾತ್ರಿಯೇ ಪರಿವೆ ಇಲ್ಲದೆ ಡೇಟಾ ಬಳಸುವವರಿಗಾಗಿ ಏರ್ಟೆಲ್ ಇನ್ನೊಂದು ಆಫರ್ ಬಿಡುಗಡೆ ಮಾಡಿದೆ. 549 ರೂಪಾಯಿಗೆ 28ಜಿಬಿ ಡೇಟಾ ನೀಡಲಿದೆ. ಈ ಆಫರ್ ಹಾಕಿಕೊಂಡರೆ ದಿನದ ಯಾವುದೇ ಸಮಯದಲ್ಲಾದರೂ 1 ಜಿಬಿ ಡೇಟಾ ಬಳಸಬಹುದು.

ಮಾರ್ಚ್ 31ರ ಒಳಗೆ 345, 549 ಪ್ಯಾಕ್ ಹಾಕಿಕೊಂಡರೆ ಮಾತ್ರ ಮುಂದಿನ 12 ತಿಂಗಳು ಇದೇ ಪ್ಯಾಕ್ ಹಾಕಿಕೊಳ್ಳಬಹುದು.

ಒಂದಷ್ಟು ರಿಸ್ಟ್ರಿಕ್ಷನ್ಸ್

ಒಂದಷ್ಟು ರಿಸ್ಟ್ರಿಕ್ಷನ್ಸ್

549ರ ಪ್ಯಾಕ್ ನಲ್ಲಿ ಗ್ರಾಹಕರು ವಾರಕ್ಕೆ 1200 ನಿಮಿಷಗಳ ಕರೆ ಮಾತ್ರ ಮಾಡಬಹುದು. ಅದಕ್ಕಿಂತ ಹೆಚ್ಚಿನ ಅವಧಿಗೆ ಕರೆ ಮಾಡಬೇಕಾದರೆ ನಿಮಿಷಕ್ಕೆ 30 ಪೈಸೆಯಂತೆ ದರ ಇರಲಿದೆ. ಇನ್ನು ದಿನಕ್ಕೆ 300 ನಿಮಿಷಗಳ ಉಚಿತ ಕರೆ ಮಾಡಲು ಮಾತ್ರ ಅವಕಾಶವಿದೆ. ಒಂದೊಮ್ಮೆ ವಾರಕ್ಕೆ 100ಕ್ಕಿಂತ ಹೆಚ್ಚು ಪ್ರತ್ಯೇಕ ಫೋನ್ ನಂಬರ್ ಗಳಿಗೆ ಕರೆ ಮಾಡಿದರೆ, ಮುಂದಿನ ವ್ಯಾಲಿಡಿಟಿ ಅವಧಿಗೆ ನಿಮಿಷಕ್ಕೆ 30 ಪೈಸೆ ದರವಿರಲಿದೆ.

ಐಡಿಯಾದಿಂದಲೂ ಆಫರ್ ಸುಗ್ಗಿ

ಐಡಿಯಾದಿಂದಲೂ ಆಫರ್ ಸುಗ್ಗಿ

348 ರೂಪಾಯಿ ಐಡಿಯಾ ಸೆಲ್ಯುಲಾರ್ ಕೂಡಾ ಇದೇ ರೀತಿಯ ಆಫರ್ ಬಿಡುಗಡೆ ಮಾಡಿದೆ. ದಿನಕ್ಕೆ 500 ಎಂಬಿ ಯಂತೆ ತಿಂಗಳಿಗೆ 14 ಜಿಬಿ ಡೇಟಾ ಬಳಕೆ ಮಾಡಿಕೊಳ್ಳಬಹುದು. ಇನ್ನು ಅನ್ ಲಿಮಿಟೆಡ್ ಕರೆ ದರಗಳು 28 ದಿನದ ಅವಧಿಯವರೆಗೆ ಇರಲಿದೆ. ಇಲ್ಲಿ ಯಾವುದೇ ನಿಬಂಧನೆಗಳಿಲ್ಲ. ಆದರೆ ಐಡಿಯಾ ಆಫರ್ ಎಲ್ಲರಿಗೂ ಇಲ್ಲ. ಕೆಲವೇ ಗ್ರಾಹಕರಿಗಷ್ಟೆ ಈ ಆಫರ್ ನೀಡಿದೆ.

English summary
Within the days of the Reliance Jio Prime subscription plan announced, Airtel and Idea Cellular also providing attractive plans to customers. Airtel has launched a recharge pack that provides customers with 28GB of data for a period of 28 days. The new recharge pack is priced at Rs. 345 and also having unlimited local and STD calls as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X