Lahore Blasts: ಇಂದು ಲಾಹೋರ್‌ನಲ್ಲಿ ಬಹು ಸ್ಪೋಟಗಳ ಸದ್ದು: ಭಾರತ ಯುದ್ಧ ಮುಂದುವರಿಸಿತಾ..!
Lahore Blasts: ಪಾಕಿಸ್ತಾನ ಗಡಿಯ ಪಂಜಾಬ್ ವ್ಯಾಪ್ತಿಯ ಲಾಹೋರ್‌ನಲ್ಲಿ ಗುರುವಾರ ಬೆಳಗ್ಗೆ ಎರಡು- ಮೂರು ಕಡೆಗಳಲ್ಲಿ ಬೃಹತ್ ಸದ್ದು ಕೇಳಿ ಬಂದಿದೆ. ಲಾಹೋರ್‌ನಲ್ಲಿ ಉಂಟಾದ ಕೇಳಿ ಬಂದ ಬ್ಲಾಸ್ಟ್‌ಗಳ ಸದ್ದುಗಳ ಬಳಿಕ ಅದರ ಹೊಗೆ ಆಕಾಶದೆತ್ತರಕ್ಕೆ ತಲುಪಿತು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿವೆ. ಭಾರತದಿಂದ ಬುಧವಾರ 'ಸಿಂದೂರ ಆಪರೇಷನ್' ನಡೆದ ಒಂದು ದಿನದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಲಾಹೋರ್ ಜನರಲ್ಲಿ ಆತಂಕ, ಭಯ ಮನೆ ಮಾಡಿದೆ.
ಪಾಕಿಸ್ತಾನದ ಅತಿದೊಡ್ಡ ನಗರವಾದ ಪಂಜಾಬ್ ಪ್ರಾಂತ್ಯದ ಲಾಹೋರ್‌ನ ವಾಲ್ಟನ್ ರಸ್ತೆಯಲ್ಲಿ ಸರಣಿ ಸ್ಫೋಟಗಳು ಕಂಡು ಬಂದಿವೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಅವುಗಳು ಹಂಚಿಕೊಂಡ ವಿಡಿಯೋದಲ್ಲಿ ಜನರು ಬ್ಲಾಸ್ಟ್ ಸದ್ದು ಕೇಳುತ್ತಿದ್ದಂತೆ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಜಮಾಯಿಸಿದ್ದಾರೆ. ಎಲ್ಲರು ಹೊಗೆ ಹೋಗುವ ಆಕಾಶೆದತ್ತ ನೋಡುತ್ತಿರುವುದು ಗೊತ್ತಾಗುತ್ತದೆ.

ಲಾಹೋರ್ ಭಾಗದಲ್ಲಿ ಒಟ್ಟು ಮೂರು ಬಾರಿ ಸ್ಪೋಟಗಳು ಸಂಭವಿಸಿವೆ. ಅಸ್ಕರಿ ಬಳಿ ಬೃಹತ್ ಎರಡು ಸದ್ದು ಕೇಳಿ ಬಂದಿವೆ. ಇಲ್ಲಿನ ನೌಕಾ ಕಾಲೇಜಿನ ಕಟ್ಟಡದಿಂದ ಹೊಗೆ ಚಿಮ್ಮಿದ್ದನ್ನು ಕಂಡ ಸ್ಥಳಿಯ ಕಂಡು ಭಯಭೀತರಾಗಿದ್ದಾರೆ. ಬೆಳ್ಳಂಬೆಳಗ್ಗೆ ಜನರು ಇದೇನಿದು ಸದ್ದು ಎಂದು ಶಾಕ್‌ಗೆ ಒಳಗಾಗಿದ್ದಾರೆ.
ಭಾರತ ಮತ್ತು ಪಾಕಿಸ್ಥಾನ ಯುದ್ಧದ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಕಾರಣದಿಂದಲೇ ಲಾಹೋರ್ ಮತ್ತು ಸಿಯಾಲ್‌ಕೋಟ್‌ನಲ್ಲಿನ ಅನೇಕ ವಿಮಾನಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಲಾಹೋರ್, ಪಂಜಾಬ್ ವಾಯು ಮಾರ್ಗಗಳಲ್ಲಿನ ಸಂಚಾರ ರದ್ದುಗೊಳಿಸಲಾಗಿದೆ.
لاہور میں دھماکے کی آوازیں۔۔۔۔🚨🚨
— Omar Malik (@Mr_OmarMalik) May 8, 2025
نصیر آباد کے قریب لوگ گھروں سے باہر نکل آئے۔۔۔۔
pic.twitter.com/1BF8m1ECnT
ಕಳೆದ ತಿಂಗಳು ಏಪ್ರಿಲ್ 22ರಂದು ನಡೆದ ಪಹಲ್ಗಾಮ್‌ನಲ್ಲಿನ ಉಗ್ರರ ದಾಳಿಗೆ 26 ಜನರ ಮೃತಪಟ್ಟಿದ್ದರು. ಅದರ ಪ್ರತಿಕಾರವಾಗಿ ಭಾರತೀಯ ಸೇನೆ ಜಮ್ಮ ಮತ್ತು ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿ ಯಿಂದ ಒಟ್ಟು ಸುಮಾರು 31ಮಂದಿ ಮೃತಪಟ್ಟಿದ್ದಾರೆ. ಇವರೊಂದಿಗೆ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಇದರ ಬೆನ್ನಲ್ಲೇ ಭಾರತವು ಲಾಹೋರ್ ಮೇಲೆ ಯುದ್ಧ ಮುಂದುವರೆಸಿತೇ ಎಂಬ ಅನುಮಾನ ಉಂಟಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಲಿದೆ. ಅದಾದ ಬಳಿಕ ಲಾಹೋರ್ ಮೇಲೆ ನಡೆದ ದಾಳಿಯ ಕುರಿತು ಹಾಗೂ ಪಾಕ್ ಮೇಲೆ ಯುದ್ಧ ಮುಂದುವರೆಯುತ್ತಾ ಎಂಬುದರ ಬಗ್ಗೆ ಮಾಹಿತಿ ತಿಳಿಯುವ ಸಾಧ್ಯತೆ ಇದೆ.












Click it and Unblock the Notifications