ಕರ್ನಾಟಕ, ಕೇರಳ ಬಳಿಕ ಈಗ ಆಂಧ್ರ, ತೆಲಂಗಾಣದಲ್ಲಿ ಪ್ರವಾಹ ಭೀತಿ

ಬೆಂಗಳೂರು, ಆಗಸ್ಟ್ 21: ಕೇರಳ, ಕೊಡಗು ಭಾಗದಲ್ಲಿ ಪ್ರವಾಹವನ್ನು ಕಂಡಾಗಿದೆ ಇದೀಗ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಭೀಕರ ಪ್ರವಾಹ ಎದುರಾಗುವ ಎಲ್ಲಾ ಸಾಧ್ಯಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೇರಳ, ಕೊಡಗು ಬಳಿಕ ಆಂಧ್ರದಲ್ಲಿ ಮಳೆ ಆರಂಭವಾಗಿದ್ದು, ಈಗಾಗಲೇ 100 ಮಿಲಿಮೀಟರ್‌ಗೂ ಅಧಿಕ ಮಳೆಯಾಗಿದೆ. ನೈಋತ್ಯ ಮುಂಗಾರು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಹೆಚ್ಚಾಗಿದೆ, ರಾಯಲ್‌ಸೀಮಾ ಪ್ರದೇಶದಲ್ಲಿ ಅಷ್ಟಾಗಿ ಪ್ರಭಾವ ಗೋಚರಿಸುತ್ತಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಒಡಿಶಾ ಹಾಗೂ ವಿದರ್ಭಾದಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಸೋಮವಾರ ಹಾಗೂ ಮಂಗಳವಾರ ಖಮ್ಮಮ್‌, ಭೂಪಲ್‌ಪಲ್ಲಿ, ಸೂರ್ಯಪೇಟೆ, ಅಡಿಲಾಬಾದ್‌, ನಿಜಾಮಾಬಾದ್‌, ನಲಗೊಂಡ, ಕಾಮರೆಡ್ಡಿ ಹಾಗೂ ಮೇದಕ್‌ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

After Kerala and Karnataka, Andhra and Telangana in flood situation

ತೆಲಂಗಾಣ ಹಾಗೂ ಆಂಧ್ರ ಕರಾವಳಿ ಭಾಗದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಆಗಸ್ಟ್ 22ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಮೆಡ್‌ಚಾಲ್‌, ಕಾಪ್ರಾ, ಮಲ್ಕಜ್‌ಗಿರಿ, ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+