Earth quake: ದೆಹಲಿಯಲ್ಲಿ ಭೂಕಂಪನ ಸಂಭವಿಸುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಭುಗಿಲೆದ್ದ ಮೀಮ್‌ಗಳಿವು !

ಕಲುಷಿತ ಹವಾಮಾನ ಮತ್ತು ಭೂಕಂಪ ಅನುಭವದಿಂದ ಕಂಗೆಟ್ಟಿರುವ ದೆಹಲಿ ಜನತೆ, ಟ್ವಿಟ್‌ನಲ್ಲಿ ವೈರಲ್‌ ಆಗಿರುವ ಮೀಮ್‌ಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ನವದೆಹಲಿ, ಜನವರಿ.24: ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಉಂಟಾಗಿರುವ ಭೂಕಂಪದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಮೀಮ್‌ಗಳ ಮೂಲಕ ಟ್ರೋಲ್‌ ಮಾಡಲಾಗುತ್ತಿದೆ. ಕಂಪನದ ನಂತರ ಜನರ ಮನಸ್ಥಿತಿಯು ಯಾವ ರೀತಿಯಾಗಿದೆ ಎಂಬುದನ್ನು ಹಲವಾರು ಬಗೆಯ ಮೀಮ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಮಂಗಳವಾರ ಮಧ್ಯಾಹ್ನ ದೆಹಲಿ-ಎನ್‌ಸಿಆರ್‌ನಲ್ಲಿ ಭೂ ಕಂಪನದ ಅನುಭವದಿಂದ ಜನರು ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಾರೆ. ಅದೃಷ್ಟವಶಾತ್ ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ. ಆದರೇ ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿಯ ವಾತಾವರಣ ಮತ್ತು ಸದ್ಯದ ಪರಿಸ್ಥಿತಿ ಕುರಿತು ಹಲವಾರು ಮೀಮ್‌ಗಳನ್ನು ಹರಿಬಿಡಲಾಗುತ್ತಿದೆ.

ಹಿಂದಿಯ ಭಾಷೆಯ ವಿವಿಧ ಚಲನಚಿತ್ರಗಳ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತುತ ಸ್ಥಿತಿಗೆ ಹೋಲಿಕೆ ಮಾಡಿ ಚಿತ್ರ-ವಿಚಿತ್ರವಾದ ಅಡಿ ಬರಹಗಳನ್ನು ಬರೆದುಕೊಂಡು ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಹರಿಬಿಡಲಾಗುತ್ತಿದೆ. ಇದರಿಂದ ನೆಟ್ಟಿಗರು ಸಹ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ.

ಹದಗೆಟ್ಟ ಮೊನಾಲಿಸಾಳ ಹೇರ್‌ ಸ್ಟೈಲ್ !

ಜಗತ್‌ ಪ್ರಸಿದ್ದ ಕಲಾವಿದನಾಗಿದ್ದ ಇಟಲಿಯ ಲಿಯೋನಾರ್ಡೋ ಡಾ ವಿಂಚಿಯ ಸುಪ್ರಸಿದ್ದ ಕಲಾಕೃತಿ ಮೊನಾಲಿಸಾ ಅವರ ಚಿತ್ರವನ್ನು ಮೀಮ್ ಮಾಡಲಾಗಿದೆ.

ಮೊನಾಲಿಸಾ ಅವರ ಕೇಶ ವಿನ್ಯಾಸವು ಭೂಕಂಪನದಿಂದ ಏರುಪೇರಾದಂತೆ ಚಿತ್ರಿಸಲಾಗಿದೆ. ಕಣ್ಣಿನ ಮೇಲ್ಬಾಗದಲ್ಲಿ ಹಚ್ಚಲಾಗಿರುವ ಕಾಡಿಗೆ ಕೆಳಗಿ ಜಾರಿರುವಂತೆ ಚಿತ್ರಿಸಲಾಗಿದೆ. ಅಷ್ಟೇ ಈ ಚಿತ್ರಕ್ಕೆ, ಯಾಕೆ ದೆಹಲಿಯಲ್ಲಿ ನಾಲ್ಕೈದು ದಿನಗಳಿಗೊಮ್ಮೆ ಭೂಕಂಪನವಾಗುತ್ತಿದೆ ಎಂದು ಕ್ಯಾಪ್ಷನ್ ಬರೆಯಲಾಗಿದೆ.

After Delhi Experience Earthquake These memes went viral on social media

ಸಂದಿಗ್ಧತೆಯಲ್ಲಿ ದೆಹಲಿ ಜನತೆ !

ರಾಷ್ಟ್ರದ ರಾಜಧಾನಿಯಲ್ಲಿ ಜನತೆ ಒಂದೆಡೆ ಉಸಿರಾಟ ಮತ್ತೊಂದೆಡೆ ಭೂಕಂಪನಕ್ಕೆ ಸಿಲುಕಿ ದಿಕ್ಕುತೋಚದಂತಾಗಿದೆ ಎನ್ನುವಂತೆ ಚಿತ್ರಿಸಲಾಗಿದೆ. ವಾಯುಮಾಲಿನ್ಯ ಮತ್ತು ಭೂಕಂಪ ಒಟ್ಟಾಗಿ ದೆಹಲಿಯ ಜನರನ್ನು ಭೇಟಿಯಾಗಲು ಬಂದಿವೆ. ಈ ನಡುವೆ ದೆಹಲಿ ಜನತೆ ಸಂಕಷ್ಟಕ್ಕೆ ಸಿಲುಕಿರುವಂತೆ ಬಣ್ಣಿಸಲಾಗಿದೆ.

After Delhi Experience Earthquake These memes went viral on social media

ತುರೆಮನೆಯ ಜಾರುಬಂಡಿ !

ದೆಹಲಿ ಜನತೆ ತುರೆಮನೆಯ ಜಾರುಬಂಡಿಯಲ್ಲಿರುವಂತೆ ಬಣ್ಣಿಸಲಾಗಿದೆ. ಈ ಪೋಸ್ಟ್‌ನಲ್ಲಿ ಭೂಕಂಪನ, ಕೇಜ್ರಿವಾಲ್ , ಟ್ರಾಫಿಕ್ ತೊಂದರೆ, ಶೀತದ ವಾತಾವರಣ,ಹಗರಣಗಳು,ವಾಯುಮಾಲಿನ್ಯ, ಪ್ರತಿಭಟನೆ, ಎಂದು ಬರೆಯಲಾಗಿದೆ. ದೆಹಲಿಯಲ್ಲಿ ವಾಸವಾಗಿರುವ ಜನತೆ ಈ ಮೇಲಿನ ಎಲ್ಲ ತೊಂದರೆಗಳನ್ನು ಅನುಭವಿಸುವ ಶಕ್ತಿ ಇರಬೇಕು ಎಂದು ಚಿತ್ರಿಸಲಾಗಿದೆ.

ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಒಟ್ಟು 30 ಸೆಕೆಂಡುಗಳ ವರೆಗೆ ಭೂಕಂಪದ ಅನುಭವಾಗಿದ್ದು ನೇಪಾಳದಲ್ಲಿ ಉಂಟಾಗಿರುವ ಭೂಕಂಪ 5.8 ರಿಯಾಕ್ಟರ್ ತೀವ್ರತೆ ದಾಖಲಾಗಿದೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಸಹ ಭೂಕಂಪನ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+