'ದಂಗಲ್' ಆಯ್ತು, ಈಗ ಚೀನಾಕ್ಕೆ 'ಸುಲ್ತಾನ್' ಚಿತ್ರದ ಲಗ್ಗೆ
ನಟ ಸಲ್ಮಾನ್ ಖಾನ್ ಅಭಿನಯದ ಬಾಲಿವುಡ್ ಚಿತ್ರ 'ಸುಲ್ತಾನ್', ಚೀನಾದ ಶಾಂಘೈನಲ್ಲಿ ನಡೆಯಲಿರುವ ಶಾಂಘೈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ನವದೆಹಲಿ, ಜೂನ್ 15: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸುಲ್ಮಾನ್ ಚಿತ್ರ ಶೀಘ್ರದಲ್ಲೇ ಶಾಂಘೈನಲ್ಲಿ ನಡೆಯಲಿರುವ ಶಾಂಘೈ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಜೂನ್ 17ರಿಂದ 26ರವರೆಗೆ ಸಿನಿಮೋತ್ಸವ ನಡೆಯಲಿದೆ.
ಈ ವಿಚಾರವನ್ನು ಸುಲ್ತಾನ್ ಚಿತ್ರದ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಕುಸ್ತಿ ಕ್ರೀಡೆಯ ಸುತ್ತ ಹೆಣೆಯಲಾಗಿದ್ದ ಈ ಚಿತ್ರವು 2016ರಲ್ಲಿ ತೆರೆ ಕಂಡು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡಿತ್ತು.
ಇತ್ತೀಚೆಗೆ, ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರವು ಚೀನಾದಲ್ಲಿ ಸಾವಿರ ಕೋಟಿ ರು.ಗಳಿಗೂ ಅಧಿಕ ಹಣ ಬಾಚಿ ಹೊಸ ದಾಖಲೆ ನಿರ್ಮಿಸಿದೆ.
Sultan will be showcased at 20th Shanghai international film festival . Please check the calendar for further details . pic.twitter.com/sqsftRoOsw
— ali abbas zafar (@aliabbaszafar) June 15, 2017
ಇದೀಗ, ಸುಲ್ತಾನ್ ಸರದಿ. ಶಾಂಘೈ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದರೆ, ಆ ದೇಶದಲ್ಲಿ ಚಿತ್ರಕ್ಕೆ ಬೇಡಿಕೆ ಕುದುರಿ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.











Click it and Unblock the Notifications