One Nation, One Election: ಒಂದು ದೇಶ - ಒಂದೇ ಚುನಾವಣೆ ಬಂದ್ರೇ ಅನುಕೂಲ ಏನು? ಪ್ರಧಾನಿ ಮೋದಿ ಉದ್ದೇಶ ಏನು ಗೊತ್ತಾ?

ನವದೆಹಲಿ, ಸೆಪ್ಟೆಂಬರ್‌ 2: ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಒಂದು ರಾಷ್ಟ್ರ ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚಿಸಲಾಗಿದೆ. ದೇಶದಲ್ಲಿ ರಾಜ್ಯ ಮತ್ತು ಕೇಂದ್ರಕ್ಕೆ ಒಂದೇ ಭಾರಿ ಚುನಾವಣೆ ನಡೆಸುವುದು ಏಕೆ ಸರಿ ಎಂದು ಭಾವಿಸಲಾಗಿದೆ ಎಂದು ತಿಳಿಯುವುದು ಅಗತ್ಯವಾಗಿದೆ.

ಇನ್ನೂ ಈ ಒಂದು ದೇಶ ಒಂದು ಚುನಾವಣೆ ಎಂಬುದು ಹೊಸ ವ್ಯವಸ್ಥೆಯೇನಲ್ಲ. ಈ ಹಿಂದೆ 1950ರಲ್ಲಿ ಸಂವಿಧಾನ ರಚನೆಯಾದ ಬಳಿಕ 1951ರಿಂದ 1967ರವರೆಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದ್ದವು. ನಂತರ ಹೊಸ ಹೊಸ ರಾಜ್ಯಗಳು ರಚನೆಯಾದ ಕಾರಣ ಬೇರೆ ಬೇರೆ ಅವಧಿಯಲ್ಲಿ ಚುನಾವಣೆಗಳು ನಡೆಯತೊಡಗಿದವು.

advantages-of-one-nation-one-election

ಅಲ್ಲದೇ 1983ರಲ್ಲಿ ಚುನಾವಣಾ ಆಯೋಗ ಪುನಃ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿತ್ತು. ನಂತರ ಕಾನೂನು ಆಯೋಗ ಕೂಡ 1999ರಲ್ಲಿ ಮತ್ತೊಮ್ಮೆ ಈ ವ್ಯವಸ್ಥೆಯ ಜಾರಿಗೆ ಸಲಹೆ ನೀಡಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ ಈ ವ್ಯವಸ್ಥೆ ಜಾರಿಯ ಚಿಂತನೆ ಆರ೦ಭವಾಗಿತ್ತು.

ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಇದರ ಉದ್ದೇಶ ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಮತದಾನವನ್ನು ಏಕಕಾಲದಲ್ಲಿ ನಡೆಸುವುದು, ಪ್ರಸ್ತುತ, ವಿಧಾನಸಭೆ ಮತ್ತು ಸಂಸತ್ತಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ, ಈ ಬಾರಿ ಸೆ.18-22ರ ನಡುವೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಒಂದು ದೇಶ ಒಂದು ಚುನಾವಣೆ' ವಿಧೇಯಕವನ್ನು ಮಂಡಿಸುವ ಸಾಧ್ಯತೆ ಇದೆ ಹೇಳಲಾಗಿತ್ತು.

ಒಂದು ರಾಷ್ಟ್ರ ಒಂದು ಚುನಾವಣೆ ಅಷ್ಟು ಸುಲಭವಲ್ಲ ಯಾಕೆ ಗೊತ್ತಾ?

ಹೌದು, ಈ ಮಸೂದೆಯನ್ನು ಅಂಗೀಕರಿಸಲು ಸಂವಿಧಾನಿಕ ತಿದ್ದುಪಡಿಗಳ ಅಗತ್ಯವಿದೆ, ಲೋಕಸಭೆಯ 543 ಸ್ಥಾನಗಳಲ್ಲಿ ಕನಿಷ್ಠ 67 ಪ್ರತಿಶತದಷ್ಟು ಜನರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯಸಭೆಯ 245 ಸ್ಥಾನಗಳಲ್ಲಿ ಶೇ. 67ರಷ್ಟು ಜನ ಬೆಂಬಲ ನೀಡಬೇಕು ಇದರ ಜೊತೆಗೆ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ ವಿಧಾನಸಭೆಗಳು ತಮ್ಮ ಅನುಮೋದನೆಯ ಮುದ್ರೆಯನ್ನು ನೀಡಬೇಕು ಅಂದರೆ 14 ರಾಜ್ಯಗಳು ಈ ಮಸೂದೆಯ ಪರವಾಗಿ ನಿಲ್ಲಬೇಕಾಗುತ್ತದೆ.

ಲೋಕಸಭೆಯ ನಿಯಮಗಳೊಂದಿಗೆ ವಿವಿಧ ರಾಜ್ಯಗಳ ಅಸೆಂಬ್ಲಿಗಳ ನಿಯಮಗಳನ್ನು ಸಿಂಕ್ ಮಾಡುವುದು ಪ್ರಾಥಮಿಕ ಸವಾಲಾಗಿದೆ. 1999 ರ ಕಾನೂನು ಆಯೋಗದ ವರದಿಯು ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸುವಂತೆ ವಾದಿಸಿತ್ತು, ಆದರೆ 2018 ರಲ್ಲಿ ಆಯೋಗದ ಮತ್ತೊಂದು ಕರಡು ವರದಿಯು "ಸಂವಿಧಾನದ ಅಸ್ತಿತ್ವದಲ್ಲಿರುವ ಚೌಕಟ್ಟಿನೊಳಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲಾಗುವುದಿಲ್ಲ ಎಂದು ಹೇಳಿದೆ.

ಇದಕ್ಕೆ ಬಹು ಸಾಂವಿಧಾನಿಕ ತಿದ್ದುಪಡಿಗಳ ಅಗತ್ಯವಿರುತ್ತದೆ, ವಿಶೇಷವಾಗಿ ವಿಧಿ 83 ಮತ್ತು ವಿಧಿ 172, ಇದು ಮೊದಲ ಸಭೆಯ ದಿನಾಂಕದಿಂದ ಅನುಕ್ರಮವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಐದು ವರ್ಷಗಳ ಅವಧಿಯನ್ನು ನಿಗದಿಪಡಿಸುತ್ತದೆ.

advantages-of-one-nation-one-election

ಒಂದು ದೇಶ ಒಂದು ಚುನಾವಣೆ ಯಾಕೆ?

ಹೌದು, ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಯಾಕೆ ಎನ್ನುವ ಪ್ರಶ್ನೆ ಉದ್ಭವಾಗುವುದು ಸಹಜ. ಬೇರೆ ಬೇರೆ ಅವಧಿಯಲ್ಲಿ ನಡೆದರೆ ಭಾರಿ ಹಣ ಖರ್ಚಾ ಗುತ್ತದೆ. ಆಗಿಂದಾಗ್ಗೆ ನೀತಿ ಸಂಹಿತೆ ಜಾರಿ ಬ೦ದು ಅಭಿವೃದ್ಧಿ ಸ್ಥಗಿತವಾಗುತ್ತದೆ. ಇದನ್ನು ತಪ್ಪಿಸಲು ಒಂದು ದೇಶ ಒಂದು ಚುನಾವಣೆ ಅಗತ್ಯ ಎಂದು ಹೇಳಲಾಗಿದೆ.

ಇನ್ನೂ 2019ರ ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರ ರೂ. 10,000 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಪ್ರತಿ ರಾಜ್ಯ ಚುನಾವಣೆಗೆ ಸರಕಾರ 250ರಿಂದ 500 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. 2019ರ ಲೋಕಸಭೆ ಚುನಾವಣೆಗೆ ಆಯಾ ಪಕ್ಷಗಳ ಖರ್ಚು 60 ಸಾವಿರ ಕೋಟಿ ರೂ.ವರೆಗೆ ಇತ್ತು ಎಂದು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎಂಬ ಸಂಸ್ಥೆ ಆ ವೇಳೆ ಬಹಿರಂಗಪಡಿಸಿತ್ತು.

ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಚುನಾವಣೆ ಏಕಕಾಲಕ್ಕೆ ನಡೆಯುವುದರಿಂದ ಸಮಯದ ಉಳಿತಾಯವಾಗುತ್ತದೆ ಮತ್ತು ಆಡಳಿತದತ್ತ ಗಮನ ಹರಿಸಲು ಅವಕಾಶ ಸಿಗುತ್ತದೆ ಎಂದು ಹೇಳಲಾಗಿದೆ.

ಸಂವಿಧಾನಕ್ಕೆ 5 ತಿದ್ದುಪಡಿ ಅಗತ್ಯ!

1. ಲೋಕಸಭೆಗೆ ಪ್ರತಿ 5 ವರ್ಷಕ್ಕೊಮ್ಮೆ ನಡೆಯಬೇಕೆಂದು ಹೇಳುವ 83(2)ನೇ ಪರಿಚ್ಛೇದ

2 ಲೋಕಸಭೆ ವಿಸರ್ಜನೆ ಮಾಡಿದರೆ ಸದನದ ಅವಧಿ ಪೂರ್ಣ ಗೊಳ್ಳುತ್ತದೆ ಮತ್ತು ಚುನಾವಣೆ ನಂತರ ಹೊಸ ಸದನ ರಚನ ಯಾಗುತ್ತದೆ ಎನ್ನುವ 85(2) (ಬಿ) ಪರಿಚ್ಛೇದ

3. ವಿಧಾನಸಭೆಗೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯಬೇಕೆನ್ನುವ 172(1)ನೇ ಪರಿಚ್ಛೇದ

4 ಸಂಪುಟದ ಶಿಫಾರಸಿನಂತೆ ವಿಧಾ ನಸಭೆ ವಿಸರ್ಜಿಸಲು ಗೌರ‌ ಅಧಿಕಾರ ಹೊಂದಿದ್ದಾರೆ ಎನ್ನು ವ174(2)(ಬಿ)ನೇ ಪರಿಚ್ಛೇದ

5 ರಾಜ್ಯ ಗಳಲ್ಲಿ ರಾಷ್ಟ್ರಪತಿ ಆಳ್ವಿಕ ಜಾರಿಗೊಳಿಸುವ 356ನೇ ಪರಿಚ್ಛೇದ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+