ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಮೇಲಿನ ಡಿಪಿಎ ಹಿಂಪಡೆದ ಅಮೆರಿಕಕ್ಕೆ ಧನ್ಯವಾದ ಹೇಳಿದ ಅದಾರ್ ಪೂನಾವಾಲಾ

|
Google Oneindia Kannada News

ನವದೆಹಲಿ, ಜೂನ್ 04: ಆಸ್ಟ್ರಾಜೆನೆಕಾ, ನೋವಾವ್ಯಾಕ್ಸ್ ಹಾಗೂ ಸನೋಫಿ ಲಸಿಕೆ ಮೇಲಿನ ಡಿಪಿಎ ನಿರ್ಬಂಧ ಹಿಂತೆಗೆದುಕೊಂಡ ಅಮೆರಿಕಾಗೆ ಭಾರತದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಧನ್ಯವಾದ ತಿಳಿಸಿದ್ದಾರೆ.

ಅಮೆರಿಕ ಸರ್ಕಾರ ಹಾಗೂ ಭಾರತೀಯ ವಿದೇಶಾಂಗ ವ್ಯವಹಾರ ಸಚಿವ ಎಸ್ ಜೈಶಂಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದು, ಈ ಒಂದು ನಡೆ ನಮ್ಮ ಲಸಿಕಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಮೂಲಕ ಕೊರೊನಾ ವಿರುದ್ಧದ ನಮ್ಮ ಹೋರಾಟವು ಬಲಗೊಳ್ಳಲಿದೆ ಎಂದು ಪೂನಾವಾಲ ಟ್ವೀಟ್ ಮಾಡಿದ್ದಾರೆ.

3 ಲಸಿಕೆಗಳ ಮೇಲೆ ಹೇರಿದ್ದ ಡಿಪಿಎ ಹಿಂಪಡೆದ ಅಮೆರಿಕ ಸರ್ಕಾರ3 ಲಸಿಕೆಗಳ ಮೇಲೆ ಹೇರಿದ್ದ ಡಿಪಿಎ ಹಿಂಪಡೆದ ಅಮೆರಿಕ ಸರ್ಕಾರ

ಡಿಪಿಎ ಹಿಂತೆಗೆದುಕೊಂಡಿದ್ದು ಜಾಗತಿಕವಾಗಿ ಕಚ್ಚಾ ವಸ್ತುಗಳ ಸಾಗಣೆಯನ್ನು ಹೆಚ್ಚಿಸುವ ಭರವಸೆ ಇದೆ ಎಂದಿದ್ದಾರೆ.

Adar Poonawalla Thanks Biden For US Policy Change

ಶುಕ್ರವಾರ ಮೂರು ಲಸಿಕೆಗಳ ಮೇಲೆ ಹೇರಿದ್ದ ಡಿಫೆನ್ಸ್ ಪ್ರೊಡಕ್ಷನ್ ಆಕ್ಟ್‌(ಡಿಪಿಎ) ಅನ್ನು ಅಮೆರಿಕ ಸರ್ಕಾರ ಹಿಂಪಡೆದಿದೆ. ಆಸ್ಟ್ರಾಜೆನೆಕಾ, ನೋವಾವ್ಯಾಕ್ಸ್, ಸನೋಫಿ ಲಸಿಕೆ ಮೇಲೆ ಹೇರಿದ್ದ ಡಿಪಿಎ ಹಿಂಪಡೆಯಲಾಗಿದೆ. ಆದ್ಯತಾ ರೇಟಿಂಗ್‌ ಅನ್ನು ಅಮೆರಿಕ ಸರ್ಕಾರ ತೆಗೆದುಹಾಕಿದೆ.

ಡಿಪಿಎ ಮತ್ತು ಇತರೆ ಕಠಿಣ ಕ್ರಮಗಳಿಂದಾಗಿ ಈಗ ಅಮೆರಿಕನ್ನರಿಗೆ ಸಾಕಷ್ಟು ಪ್ರಮಾಣದಲ್ಲಿ ಕೋವಿಡ್ ಲಸಿಕೆ ಲಭ್ಯವಿದೆ. ಈ ದೃಷ್ಟಿಯಿಂದ ಆಸ್ಟ್ರಾಜೆನೆಕಾ , ನೋವಾವ್ಯಾಕ್ಸ್, ಮತ್ತು ಸನೋಫಿ ಕಂಪನಿಗಳ ಮೇಲೆ ಹೇರಲಾಗಿದ್ದ ಡಿಪಿಎಯನ್ನು ತೆಗೆದುಹಾಕಲಾಗಿದೆ.

ಅಮೆರಿಕವು ಈಗಾಗಲೇ 40 ಲಕ್ಷ ಆಸ್ಟ್ರಾಜೆನೆಕಾ ಲಸಿಕೆಯ ಡೋಸ್‌ಗಳನ್ನು ಕೆನಡಾ ಮತ್ತು ಮೆಕ್ಸಿಕೋಗೆ ನೀಡಿದೆ. ಜೂನ್ ಅಂತ್ಯದವರೆಗೆ 8 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ.

ಈ ಒಂದು ನಡೆ, ಕಂಪನಿಗಳಿಗೆ ಕೊರೊನಾ ಲಸಿಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ.

English summary
Serum Institute of India CEO Adar Poonawalla on Friday thanked US government as the US lifted restrictions from AstraZeneca, Novavax and Sanofi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X