Get Updates
Get notified of breaking news, exclusive insights, and must-see stories!

ಅದಾನಿ ಗ್ರೀನ್ ಎನರ್ಜಿ ದಾಖಲೆ ಸಾಧನೆ; 9 ತಿಂಗಳಲ್ಲಿ ಶೇ 37ರಷ್ಟು ಬೆಳವಣಿಗೆ

ಅಹಮದಾಬಾದ್‌: ಭಾರತದ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಶುದ್ಧ ನವೀಕರಿಸಬಹುದಾದ ಇಂಧನ ಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್‌) 2025 ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಹಣಕಾಸು ಅವಧಿಯ (Q3 ಮತ್ತು 9M FY26) ಫಲಿತಾಂಶಗಳನ್ನು ಪ್ರಕಟಿಸಿದ್ದು, ವರ್ಷದಿಂದ ವರ್ಷಕ್ಕೆ ಶೇ 37ರಷ್ಟು ಬೆಳವಣಿಗೆ ದಾಖಲಿಸಿರುವುದಾಗಿ ಘೋಷಿಸಿದೆ.

ಹಸಿರು ಇಂಧನ ಕ್ಷೇತ್ರದಲ್ಲಿ ಭಾರೀ ಗ್ರೀನ್‌ಫೀಲ್ಡ್ ಸಾಮರ್ಥ್ಯ ವೃದ್ಧಿ, ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಗುಜರಾತ್‌ನ ಖವ್ಡಾ ಮತ್ತು ರಾಜಸ್ಥಾನದಂತಹ ಸಂಪನ್ಮೂಲ ಸಮೃದ್ಧ ಪ್ರದೇಶಗಳಲ್ಲಿ ಹೊಸ ಯೋಜನೆಗಳ ಯಶಸ್ವಿ ಕಾರ್ಯಾರಂಭ ಈ ಬಲಿಷ್ಠ ಸಾಧನೆಗೆ ಪ್ರಮುಖ ಕಾರಣಗಳಾಗಿವೆ.

Adani Green Energy

ಹಣಕಾಸು ಸಾಧನೆ - Q3 ಮತ್ತು 9M FY26

ಎಇಜಿಎಲ್‌ನ ಕಳೆದ 9 ತಿಂಗಳಲ್ಲಿ ಒಟ್ಟು 5.6 ಗಿಗಾವ್ಯಾಟ್‌ನಷ್ಟು ಹೊಸ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸಿದೆ. ಇದು ದೇಶದಾದ್ಯಂತ ಸ್ಥಾಪಿತವಾಗಿರುವ ಒಟ್ಟು ಹೊಸ ಸೌರ ಮತ್ತು ಗಾಳಿ ವಿದ್ಯುತ್ ಸಾಮರ್ಥ್ಯದ ಸುಮಾರು 14% ಆಗಿದೆ. ಇದರೊಂದಿಗೆ ಸಂಸ್ಥೆಯ ಒಟ್ಟು ಕಾರ್ಯಾಚರಣಾ ಸಾಮರ್ಥ್ಯ 17.2 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೀನ್ ಎನರ್ಜಿ ಸಿಇಒ ಅಶೀಷ್ ಖನ್ನಾ,"2026ರ ಕ್ಯಾಲೆಂಡರ್ ವರ್ಷದಲ್ಲೂ ಅದಾನಿ ಗ್ರೀನ್ ಎನರ್ಜಿ ತನ್ನ ಅಸಾಧಾರಣ ಬೆಳವಣಿಗೆಯನ್ನು ಮುಂದುವರಿಸಿದೆ. 5.6 ಗಿಗಾವ್ಯಾಟ್‌ ಸಾಮರ್ಥ್ಯ ಸೇರ್ಪಡೆಯೊಂದಿಗೆ ನಾವು ದೇಶದ ಪ್ರಮುಖ ಹಸಿರು ಇಂಧನ ಪೂರೈಕೆದಾರರಾಗಿ ನಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಖವ್ಡಾ ಯೋಜನೆಗೆ ವೇಗ, ಬ್ಯಾಟರಿ ಸಂಗ್ರಹಣೆಯತ್ತ ಮುನ್ನಡೆ

ಖನ್ನಾ ಅವರ ಪ್ರಕಾರ, ಗುಜರಾತ್‌ನ ಖವ್ಡಾದಲ್ಲಿನ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಯೋಜನೆ ವೇಗವಾಗಿ ಮುನ್ನಡೆಯುತ್ತಿದ್ದು, ಮುಂದಿನ ಕೆಲವು ತಿಂಗಳಲ್ಲಿ ವಿಶ್ವದಲ್ಲೇ ಅತಿದೊಡ್ಡ ಏಕ-ಸ್ಥಳ ಬ್ಯಾಟರಿ ಎನರ್ಜಿ ಸ್ಟೋರೇಜ್ ಯೋಜನೆ ಅನುಷ್ಠಾನಗೊಳ್ಳುವ ನಿರೀಕ್ಷೆಯಿದೆ. ಇದಲ್ಲದೆ, ಆಂಧ್ರಪ್ರದೇಶದ ಚಿತ್ರಾವತಿ ನದಿಯ ಮೇಲಿನ ಹೈಡ್ರೋ ಪಂಪ್ಡ್ ಸ್ಟೋರೇಜ್ ಯೋಜನೆಯೂ ನಿಗದಿತ ವೇಳಾಪಟ್ಟಿಯಂತೆ ಸಾಗುತ್ತಿದೆ.

Adani Green Energy

27 ಬಿಲಿಯನ್ ಯೂನಿಟ್ ಶುದ್ಧ ವಿದ್ಯುತ್ ಉತ್ಪಾದನೆ

ಈ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಎಜಿಇಎಲ್ 27 ಬಿಲಿಯನ್ ಯೂನಿಟ್‌ಗಳಿಗಿಂತ ಹೆಚ್ಚು ಶುದ್ಧ ವಿದ್ಯುತ್ ಉತ್ಪಾದಿಸಿದೆ. ಇದು ಒಂದು ವರ್ಷಪೂರ್ತಿ ಅಜರ್‌ಬೈಜಾನ್ ದೇಶದಷ್ಟು ದೊಡ್ಡ ರಾಷ್ಟ್ರಕ್ಕೆ ವಿದ್ಯುತ್ ಪೂರೈಸುವಷ್ಟು ಪ್ರಮಾಣವಾಗಿದ್ದು, ಸಂಸ್ಥೆಯ ಉತ್ಪಾದನಾ ಸಾಮರ್ಥ್ಯದ ಬಲವನ್ನು ತೋರಿಸುತ್ತದೆ. ಇಂಧನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾದ ಎನರ್ಜಿ ಇಂಟಲಿಜೆನ್ಸ್‌ ನೀಡಿದ ವಾರ್ಷಿಕ ಶ್ರೇಯಾಂಕದಲ್ಲಿ ಎಜಿಇಎಲ್‌ಗೆ ವಿಶ್ವದ ನಂ.1 ಗ್ರೀನ್ ಯೂಟಿಲಿಟಿ ಸ್ಥಾನ ಲಭಿಸಿರುವುದು, ಸಂಸ್ಥೆಯ ಸ್ಥಿರತೆಯ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖನ್ನಾ ಹೇಳಿದ್ದಾರೆ.

ಎಜಿಇಎಲ್‌ ತನ್ನ ಯೋಜನಾ ಅಭಿವೃದ್ಧಿಯಲ್ಲಿ ಸುಧಾರಿತ ಸಂಪನ್ಮೂಲ ಯೋಜನೆ, ಎಂಜಿನಿಯರಿಂಗ್ ಹಾಗೂ ಸರಬರಾಜು ಸರಪಳಿ ನಿರ್ವಹಣೆಯನ್ನು ಅನುಸರಿಸುತ್ತಿದ್ದು, ಅದಾನಿ ಇನ್‌ಫ್ರಾ ಇಂಡಿಯಾ ಲಿಮಿಟೆಡ್ (ಎಐಐಎಲ್‌) ಸಹಭಾಗಿತ್ವದಲ್ಲಿ ಯೋಜನೆಗಳ ಅನುಷ್ಠಾನ ನಡೆಯುತ್ತಿದೆ.

Adani Green Energy

ಕಾರ್ಯಾಚರಣಾ ಸಾಮರ್ಥ್ಯ: ವರ್ಷದಿಂದ ವರ್ಷಕ್ಕೆ 48% ಏರಿಕೆ

9M FY26ರಲ್ಲಿ ಸೇರಿಸಿದ ಗ್ರೀನ್‌ಫೀಲ್ಡ್ ಸಾಮರ್ಥ್ಯ: 2,995 ಮೆಗಾವ್ಯಾಟ್

ಇದು ಸಂಪೂರ್ಣ FY25ರಲ್ಲಿ ಸೇರಿಸಿದ ಸಾಮರ್ಥ್ಯದ 90%ಕ್ಕಿಂತ ಹೆಚ್ಚು

ಕಳೆದ ಒಂದು ವರ್ಷದಲ್ಲಿ ಸೇರಿಸಿದ ಒಟ್ಟು 5,630 ಮೆಗಾವ್ಯಾಟ್ ಸಾಮರ್ಥ್ಯದಲ್ಲಿ:

4,187 ಮೆಗಾವ್ಯಾಟ್ ಸೌರ ವಿದ್ಯುತ್

ಖವ್ಡಾ (ಗುಜರಾತ್): 3,137 MW

ರಾಜಸ್ಥಾನ: 800 MW

ಆಂಧ್ರಪ್ರದೇಶ: 250 MW

462 ಮೆಗಾವ್ಯಾಟ್ ಗಾಳಿ ವಿದ್ಯುತ್ (ಖವ್ಡಾ)

981 ಮೆಗಾವ್ಯಾಟ್ ಸೌರ-ಗಾಳಿ ಹೈಬ್ರಿಡ್ ಯೋಜನೆ (ಖವ್ಡಾ)

ಅತ್ಯಾಧುನಿಕ O&M ಮತ್ತು ದಾಖಲೆ EBITDA

ಎಜಿಇಎಲ್‌ ತನ್ನ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್, ಹಾಗೂ ಸುಧಾರಿತ ಡೇಟಾ ಅನಾಲಿಟಿಕ್ಸ್ ಬಳಸುತ್ತಿದೆ. ದೇಶದಾದ್ಯಂತ ಇರುವ ಘಟಕಗಳನ್ನು ಎನರ್ಜಿ ನೆಟ್‌ವರ್ಕ್‌ ಆಪರೇಷನ್‌ ಸೆಂಟರ್‌ ಮೂಲಕ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದರಿಂದ ಘಟಕಗಳ ಲಭ್ಯತೆ ಹೆಚ್ಚಿದ್ದು, ವಿದ್ಯುತ್ ಉತ್ಪಾದನೆ ವೃದ್ಧಿಯೊಂದಿಗೆ O&M ವೆಚ್ಚ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಎಜಿಇಎಲ್‌ 91.5% ಇಬಿಐಟಿಡಿಎ ಮಾರ್ಜಿನ್ ದಾಖಲಿಸಿದ್ದು, ಇದು ಉದ್ಯಮದಲ್ಲೇ ಮುಂಚೂಣಿಯ ಮಟ್ಟವಾಗಿದೆ.

Adani Green Energy

ಖವ್ಡಾ: ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ವಿದ್ಯುತ್ ಘಟಕ

*ಗುಜರಾತ್‌ನ ಖವ್ಡಾದಲ್ಲಿ ನಿರ್ಮಾಣವಾಗುತ್ತಿರುವ 30 GW ಸಾಮರ್ಥ್ಯದ ಹಸಿರು ಇಂಧನ ಘಟಕ

*538 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು (ಪ್ಯಾರಿಸ್ ನಗರಕ್ಕಿಂತ 5 ಪಟ್ಟು ದೊಡ್ಡದು)

* ಪ್ರಸ್ತುತ 7.7 GW ಸೌರ, ಗಾಳಿ ಮತ್ತು ಹೈಬ್ರಿಡ್ ಸಾಮರ್ಥ್ಯ ಕಾರ್ಯಾಚರಣೆಯಲ್ಲಿದೆ

ಬಿಫೇಷಿಯಲ್ ಸೌರ ಮಾಡ್ಯೂಲ್‌ಗಳು, ಟ್ರ್ಯಾಕರ್‌ಗಳು, ಭಾರತದ ಅತಿದೊಡ್ಡ 5.2 ಮೆಗಾವ್ಯಾಟ್‌ ಗಾಳಿಚಕ್ರಗಳು, ಹಾಗೂ ನೀರಿಲ್ಲದ ರೋಬೋಟಿಕ್ ಕ್ಲೀನಿಂಗ್ ತಂತ್ರಜ್ಞಾನ ಈ ಯೋಜನೆಯ ವಿಶೇಷತೆಗಳಾಗಿವೆ. 2029ರೊಳಗೆ ಸಂಪೂರ್ಣ 30 ಗಿಗಾವ್ಯಾಟ್‌ ಗುರಿ ಸಾಧಿಸುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.

ಇಎಸ್‌ಜಿ ಕ್ಷೇತ್ರದಲ್ಲಿ ಅದಾನಿ ಗ್ರೀನ್ ಮುಂಚೂಣಿ

*ಎಜಿಇಎಲ್‌ ಪರಿಸರ, ಸಾಮಾಜಿಕ ಮತ್ತು ಆಡಳಿತ ಕ್ಷೇತ್ರದಲ್ಲಿಯೂ ಪ್ರಮುಖ ಸಾಧನೆಗಳನ್ನು ಮಾಡಿದೆ.

* ಎನರ್ಜಿ ಇಂಟಲಿಜೆನ್ಸ್‌ನಿಂದ ವಿಶ್ವದ ನಂ.1 ಗ್ರೀನ್ ಯೂಟಿಲಿಟಿ

* NSE ಸುಸ್ಥಿರತಾ ರೇಟಿಂಗ್‌ನಲ್ಲಿ ಭಾರತದಲ್ಲಿ ವಿದ್ಯುತ್ ಕ್ಷೇತ್ರದ ಶ್ರೇಷ್ಠ ಸಂಸ್ಥೆ

* ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಗ್ರೀನ್ ಸಾರಥಿ ಪ್ರಶಸ್ತಿಗಳು 2025ರಲ್ಲಿ ಗೋಲ್ಡ್ ಪ್ರಶಸ್ತಿ

ಎಜಿಇಎಲ್‌ನ ಎಲ್ಲ ಕಾರ್ಯಾಚರಣಾ ಘಟಕಗಳು ವಾಟರ್ ಪಾಸಿಟಿವ್, ಸಿಂಗಲ್-ಯೂಸ್ ಪ್ಲಾಸ್ಟಿಕ್ ಫ್ರೀ, ಹಾಗೂ ಝೀರೋ ವೆಸ್ಟ್-ಟು-ಲ್ಯಾಂಡ್‌ಫಿಲ್ ಪ್ರಮಾಣಪತ್ರ ಪಡೆದಿವೆ. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಾಧಿಸಿರುವ ಈ ದಾಖಲೆ ಬೆಳವಣಿಗೆ, ಭಾರತವನ್ನು ಶುದ್ಧ ಇಂಧನದತ್ತ ಕರೆದೊಯ್ಯುವ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. 2030ರೊಳಗೆ 50 ಗಿಗಾವ್ಯಾಟ್‌ ಸಾಮರ್ಥ್ಯ ಗುರಿಯೊಂದಿಗೆ, ಎಜಿಇಎಲ್‌ ಭಾರತದ ಡಿಕಾರ್ಬನೈಸೇಶನ್ ದೃಷ್ಟಿಕೋನಕ್ಕೆ ಬಲವಾದ ಬೆಂಬಲ ನೀಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+