Adani Enterprises: 2026ರ ಮೊದಲ ತ್ರೈಮಾಸಿಕದಲ್ಲಿ AELಗೆ ಭರ್ಜರಿ ಆದಾಯ, 49% ಆರ್ಥಿಕ ಪ್ರಗತಿ

ಅದಾನಿ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಕಂಪನಿಯು (AEL) 2026ರ ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದೆ. ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ಅವಧಿಯಲ್ಲಿ ಐತಿಹಾಸಿಕ ಗರಿಷ್ಠ ಮಟ್ಟದ 5,642 ಕೋಟಿ ರೂಪಾಯಿಗಳ ತ್ರೈಮಾಸಿಕ ಇಬಿಐಟಿಡಿಎ (EBITDA) ಗಳಿಸಿದ್ದಾಗಿ ಸ್ವತಃ ಕಂಪನಿಯೇ ಪ್ರಕಟಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇಂದಿನ ಆದಾಯ ಶೇಕಡಾ 49 ರಷ್ಟು ಅತ್ಯಧಿಕ ಬೆಳವಣಿಗೆ ಎಂದು ಅದಾನಿ ಸಂಸ್ಥೆಯ ಅಂಕಿ ಸಂಖ್ಯೆಗಳು ತಿಳಿಸಿವೆ.

2026ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 33,546 ಕೋಟಿ ರೂ.ಗಳಾಗಿದೆ. ಇನ್ನೂ 2025ರ ಮೊದಲ ಮೂರು ತಿಂಗಳಿಗೆ ಹೋಲಿಸಿದೆ ಆಗ 22,437 ಕೋಟಿ ರೂ.ಗಳಷ್ಟು ಆದಾಯ ದಾಖಲಿಸಿತ್ತು. ತೆರಿಗೆಗೆ ಮುನ್ನ ಲಾಭ 1,295 ಕೋಟಿ ರೂ.ಗಳಾಗಿದ್ದು, OFAC (ವಿದೇಶಿ ಆಸ್ತಿ ನಿಯಂತ್ರಣ ಕಚೇರಿ, USA) 2,644 ಕೋಟಿ ರೂ.ಗಳ ಇತ್ಯರ್ಥ ಬಿಟ್ಟರೆ, ಅಸಾಧಾರಣ ಅಂಶವನ್ನು ಒಳಗೊಂಡಂತೆ, ಮಾಲೀಕರಿಗೆ ವಿಧಿಸಲಾದ ತೆರಿಗೆ ನಂತರದ ಲಾಭವು ತ್ರೈಮಾಸಿಕದಲ್ಲಿ 1,160 ಕೋಟಿ ರೂ.ನಷ್ಟು ಏರಿಕೆ ಕಂಡಿದೆ. ಈ ಮೂಲಕ ಕಂಪನಿಯು ಪ್ರತಿ ಹಂತದಲ್ಲಿಯೂ ಬೆಳವಣಿಗೆ ಕಂಡಿದೆ.

Adani Enterprises

EBITDA ವಾರ್ಷಿಕ ಶೇ. 49 ರಷ್ಟು ಹೆಚ್ಚಳ

ಅದಾನಿ ಸಮೂಹದ ವಿಮಾನ ನಿಲ್ದಾಣಗಳ EBITDA ವಾರ್ಷಿಕವಾಗಿ ಶೇಕಡಾ 49 ರಷ್ಟು ಹೆಚ್ಚಳ ಕಾಣುವ ಮೂಲಕ 1,633 ಕೋಟಿ ರೂಪಾಯಿ ಮುಟ್ಟಿದೆ. ಪ್ರಮುಖ ವ್ಯವಹಾರದ ಮೂಲಕ 749 ಕೋಟಿ ರೂ.ಗಳ EBITDA ಕೊಡುಗೆ ಸಹ ನೀಡಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಅದಾನಿ ಎಂಟರ್‌ಪ್ರೈಸಸ್ ಹಣಕಾಸು ವ್ಯವಹಾರದಲ್ಲಿ ಅಸಾಧಾರಣವಾದ ಪ್ರಗತಿ ದಾಖಲಿಸಿದೆ. ಅತ್ಯಧಿಕ ತ್ರೈಮಾಸಿಕ EBITDA ರೂ. 5,642 ಕೋಟಿ ಗಳಿಕೆ ಮೂಲಕ ಮೂಲಸೌಕರ್ಯ ವಲಯಕ್ಕೆ ಕೊಡುಗಡೆ ನೀಡಿದೆ ಎಂದು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ತಿಳಿಸಿದರು.

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಹೆಚ್ಚಳ, ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ, ಸೌರ ಮಾಡ್ಯೂಲ್ ಸಾಮರ್ಥ್ಯದ ವಿಸ್ತರಣೆ ಮತ್ತು ಪ್ರಮುಖ ಹೊಸ ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಹೂಡಿಕೆಗಳು ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಕಾರಣವಾಗಿವೆ. 15,000 ಕೋಟಿ ರೂಪಾಯಿಗಳ ಯಶಸ್ವಿ ಅರ್ಹ ಸಾಂಸ್ಥಿಕ ನಿಯೋಜನೆ (QIP) ಕಂಪನಿಯ ಕಾರ್ಯತಂತ್ರ ಮತ್ತು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಕಂಪನಿಯು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ವ್ಯವಹಾರದ ಪ್ರಮುಖಾಂಶಗಳು ಹೀಗಿವೆ

ಇದೇ ವರ್ಷ ಜೂನ್‌ ತಿಂಗಳಲ್ಲಿ ಅದಾನಿ ನ್ಯೂ ಇಂಡಸ್ಟ್ರೀಸ್ 1.7 ಗಿಗಾ ವ್ಯಾಟ್ (GW) ಸಾಮರ್ಥ್ಯದ ಹೊಸ ಸೌರ ಮಾಡ್ಯೂಲ್ ಉತ್ಪಾದನೆ ಘಟಕ ಸ್ಥಾಪಿಸಿತು. ಇದು ಕಂಪನಿಯ ಒಟ್ಟು ಮಾಡ್ಯೂಲ್ ಲೈನ್ ಸಾಮರ್ಥ್ಯವನ್ನು 5.7 GW ಗೆ ಏರಿಸಿತು. ಅದಾನಿ ಸೌರ ಮಾಡ್ಯೂಲ್‌ಗಳಿಗೆ ದೇಶೀಯ ಬೇಡಿಕೆಯು ರಫ್ತು ವಹಿವಾಟಿಗೆ ಪೂರಕವಾಗಿದೆ.

ಸಮೂಹದ ಡೇಟಾ ಸೆಂಟರ್ ವಿಭಾಗವಾದ ಅದಾನಿ ಕನೆಕ್ಸ್, ವೈಜಾಗ್‌ನಲ್ಲಿ 400 ಮೆಗಾವ್ಯಾಟ್‌ನ ಹೊಸ ಹೈಪರ್‌ಸ್ಕೇಲ್ ಉತ್ಪಾದನೆಗೆ ಮುಂದಾಯಿತು. ಇದರಿಂದ ಕಂಪನಿಯ ವಿದ್ಯುತ್ ಉತ್ಪಾದನೆ 960 ಮೆಗಾವ್ಯಾಟ್‌ಗಿಂತ ಹಚ್ಚಾಯಿತು. ಇನ್ನೂ ಪುಣೆ ಘಟಕದಿಂದ 9.6 ಮೆಗಾವ್ಯಾಟ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸಲಾಯಿತು, ಕಾರ್ಯಾಚರಣೆಯ ಸಾಮರ್ಥ್ಯವನ್ನು 65.4 ಮೆಗಾವ್ಯಾಟ್‌ಗೆ ಏರಿಕೆ ಮಾಡಲಾಗಿದೆ ಎಂದು ಕಂಪನಿಯು ತಿಳಿಸಿದೆ.

ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಇದೇ ತ್ರೈಮಾಸಿಕ ಅವಧಿಯಲ್ಲಿ ಕ್ರಮವಾಗಿ ಶೇ.16 ಮತ್ತು ಶೇ. 53 ರಷ್ಟು ಏರೋ ಮತ್ತು ನಾನ್-ಏರೋ ಆದಾಯವನ್ನ ಹೆಚ್ಚಿಸಿಕೊಂಡಿದೆ. ಈ ಮೂಲಕ ಅದನಿ ಸಮೂಹ ವ್ಯಾಪ್ತಿಯ ಒಟ್ಟಾರೆ ವಿಮಾನ ನಿಲ್ದಾಣಗಳ ಇಬಿಐಟಿಡಿಎ ವರ್ಷದಿಂದ ವರ್ಷಕ್ಕೆ ಶೇ. 49 ರಷ್ಟು (1,633 ಕೋಟಿ ರೂ.ಗಳಿಕೆ) ಗಮನಾರ್ಹ ಬೆಳವಣಿಗೆ ದಾಖಲಿಸಿದೆ.

ಗಂಗಾ ಎಕ್ಸ್‌ಪ್ರೆಸ್‌ವೇ ನಲ್ಲಿ ಅದಾನಿ ರೋಡ್ ಟ್ರಾನ್ಸ್‌ಪೋರ್ಟ್ ಕಂಪನಿಯು ಇದೇ ವರ್ಷ 15 ಮೇ ನಿಂದ ಟೋಲ್ ಸಂಗ್ರಹ ಪ್ರಾರಂಭಿಸಿತು. ಈ ಹೆದ್ದಾರಿಯು ಇಂದೋರ್ ಮತ್ತು ಮಧ್ಯಪ್ರದೇಶ-ಗುಜರಾತ್ ಗಡಿಯ ನಡುವೆ NH-59ಗೆ ಸಂಪರ್ಕಿಸುತ್ತದೆ. ಒಟ್ಟು 620 ಕಿಲೋ ಮೀಟರ್‌ ಉದ್ದದ ಈ ರಸ್ತೆಯ ನಿರ್ವಹಣೆಯು ಕಂಪನಿಗೆ ಲಾಭ ತಂದುಕೊಟ್ಟಿದೆ. ನೈಸರ್ಗಿಕ ಸಂಪನ್ಮೂಲ ವಿಭಾಗಕ್ಕೆ ಸಂಬಂಧಿಸಿದಂತೆ ಅದಾನಿ ಕಂಪನಿಯು ಮಧ್ಯಪ್ರದೇಶದ ಧಿರೌಲಿ ಗಣಿಯಲ್ಲಿ ಹೆಚ್ಚುವರಿ ಗಣಿಗಾರಿಕೆ ಸೇವಾ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಗಣಿಗಾರಿಕೆ ವಾರ್ಷಿಕ 93.1 ಮಿಲಿಯನ್ ಟನ್‌ಗಳಿಗೆ (MMTPA) ಏರಿಕೆ ಆಗಿದೆ.

ಬಂಡವಾಳ ಮಾರುಕಟ್ಟೆಯಲ್ಲೂ ಕಂಪನಿ ಮಿಂಚು

ಇದೇ ಜುಲೈ ತಿಂಗಳಲ್ಲಿ ಅರ್ಹ ಸಾಂಸ್ಥಿಕ ನಿಯೋಜನೆ (QIP) ಮೂಲಕ ಅದಾನಿ ಕಂಪನಿಗೆ 15,000 ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಮ್ಯೂಚುಯಲ್ ಫಂಡ್‌ಗಳು ಸೇರಿದಂತೆ ದೇಶೀಯ ಮತ್ತು ಜಾಗತಿಕ ಹೂಡಿಕೆದಾರರ ವೈವಿಧ್ಯಮಯ ಕಂಪನಿಗಳ ಜೊತೆಗಿನ ಪಾಲುದಾರಿಕೆಯಿಂದ ಮೂಲ ವಿತರಣೆಯ ಗಾತ್ರಕ್ಕಿಂತ 3.8 ಪಟ್ಟು ಮೌಲ್ಯದ ಬಿಡ್ ಪಡೆಯಿತು. ಸದ್ಯ ಅದಾನಿ ಗ್ರೂಪ್‌ನ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಕಂಪನಿಯು (AEL) ಹೊಸ ಮೂಲಸೌಕರ್ಯ ವ್ಯವಹಾರಗಳನ್ನು ಇನ್ಕ್ಯುಬೇಟ್ ಮಾಡುವತ್ತ ಗಮನಹರಿಸಿದೆ. ಎನರ್ಜಿ ಸೊಲ್ಯೂಷನ್ಸ್, ಅದಾನಿ ಪವರ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ವಿಲ್ಮರ್‌ನಂತಹ ವ್ಯವಹಾರಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+